ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸೂಗೂರೇಶ್ವರ ಯುವಕ ಮಂಡಳಿ (ರಿ.) ವತಿಯಿಂದ ಸನ್ಮಾನ, ಬಿರುದಿನ ಗೌರವ ಕಾಣಿಕೆ,ಸನ್ಮಾನ ಸಮಾರಂಭ

ರಾಯಚೂರು ಜಿಲ್ಲೆಯ ರಾಯಚೂರು ತಾಲ್ಲೂಕಿನ ದೇವಸೂಗೂರಿನ ಶ್ರೀ ಸೂಗೂರೇಶ್ವರ ಸ್ವಾಮಿಯ ಹಾಗೂ ಶ್ರೀಮಾತಾ ನಾಗರ ಎಲ್ಲಮ್ಮ ದೇವಿಯ ಪ್ರಧಾನ ಅರ್ಚಕರ ಸಾನಿಧ್ಯದಲ್ಲಿ ದಿ: 7-1-2025 ರಂದು 17 ಅರ್ಚಕ ಮನೆತನದ ವೃಂದದವರ ಸಮಕ್ಷಮದಲ್ಲಿ ಶ್ರೀ ಸೂಗೂರೇಶ್ವರ ಯುವಕ ಮಂಡಳಿ (ರಿ.)ಯ ಸರ್ವ ಸದಸ್ಯ ವೃಂದದವರು ಏರ್ಪಡಿಸಿದ ಅಭೂತಪೂರ್ವ ಅಭಿನಂದನಾ ಕಾರ್ಯಕ್ಕೆ ಅನಂತಾನಂತ ವಂದನೆ-ಅಭಿನಂದನೆಗಳು.

ಸರಕಾರಿ ಉದ್ಯೋಗದಲ್ಲಿ ವಯೋನಿವೃತ್ತಿ ಹೊಂದಿದವರಿಗೆ, ಸಮಾಜ ಸೇವಾ ಕಾರ್ಯಕರ್ತರಿಗೆ ಹಾಗೂ ಪತ್ತಿನ ಸಹಕಾರಿ ಸಂಘದಲ್ಲಿ ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರಿಗೆ ಹಾಗೂ ಇತರೆ ಇಲಾಖೆಗಳಲ್ಲಿ ಪ್ರಶಸ್ತಿ ಪಡೆದ ಸಮಾಜ ಬಾಂಧವರಿಗೂ ಅವರವರ ಕರ್ತವ್ಯಕ್ಕೆ ತಕ್ಕಂತೆ ಸಂದ ಸನ್ಮಾನ, ಬಿರುದಿನ ಗೌರವ ಕಾಣಿಕೆ ಸ್ತುತ್ಯಾರ್ಹ.

ಈ ಕಾರ್ಯದ ಮಹತ್ವಪೂರ್ಣ ಪೂರ್ವಾವಲೋಚನೆ, 40 ವರುಷದ ಸುಧೀರ್ಘ ಸಮಾಲೋಚನೆಯಿಂದ ಸಂಘಕ್ಕೆ ಶ್ರಮಿಸಿದ ಸದಸ್ಯರನ್ನು ಸ್ಮರಿಸುತ್ತಾ ನಮನಗಳನ್ನು ಸಲ್ಲಿಸುತ್ತಾ, ಮುಂದುವರಿದು, ಪ್ರಸ್ತುತ ಸರ್ವ ಸದಸ್ಯರನ್ನು ಸರದಿಯಂತೆ ವೇದಿಕೆಗೆ ಬರಮಾಡಿಕೊಂಡು ಪರಿಚಯಿಸಿ ಪ್ರೋತ್ಸಾಹಿಸಲು ನಿರೂಪಿಸಿದ ಜ್ಞಾನಿಗಳ ಯೋಜನೆಗಳಿಗೆ ಎಷ್ಟು ಸ್ಮರಿಸಿದರೂ ಅಲ್ಪವೆಂದೆನಿಸುತ್ತದೆ. ಶ್ರೀಯುತರಾದ ಶ್ರೀ ಪ್ರಕಾಶ ಸ್ವಾಮಿ ನಂದಿ ಮತ್ತು ಶ್ರೀ ಸುರೇಶ ಸ್ವಾಮಿ ಮಾನ್ವಿ ವೀಕ್ಷಿಸಿದ ಸರ್ವ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿಯುವಂತಾಗಿದೆ.

ಈ ಅಭೂತಪೂರ್ವ ಕಾರ್ಯದಲ್ಲಿ ಪರೋಕ್ಷ ಅಪರೋಕ್ಷವಾಗಿ ಹಗಲು ಇರುಳೆನ್ನದೆ, ನಿದ್ರೆ ನೀರಡಿಕೆ ಹಸಿವು ತೃಷೆಗಳಿಗೆ ಗಮನವಿಲ್ಲದೆ ತನು-ಮನ-ಧನ-ಧಾನ್ಯ ಸೇವೆಯೊಂದಿಗೆ ಶ್ರಮವಹಿಸಿದ ಶ್ರಮಜೀವಿ ಯುವಕ ವೃಂದದ, ಪದಾಧಿಕಾರಿಗಳ ಹಾಗೂ ಸರ್ವ ಸದಸ್ಯರ ಶ್ರಮವನ್ನು ಸ್ಮರಿಸುತ್ತಾ ಭವಿಷ್ಯದಲ್ಲಿಯೂ ಸಹ ಇಂತಹ ಅನೇಕ ಕಾರ್ಯಕ್ರಮಗಳು ಜರುಗುವಂತೆ ಸರ್ವ ಯುವಕ ಸದಸ್ಯರಿಗೆ ಚೈತನ್ಯದಾಯಕ ಶಕ್ತಿಯನ್ನು ಅತ್ಯುತ್ತಮ ಆರೋಗ್ಯ, ಸಕಲೈಶ್ವರ್ಯ ಸಂಪದವನ್ನು ಜೀವನದಲ್ಲಿ ಶಾಂತಿ ನೆಮ್ಮದಿಯನ್ನು ಕರುಣಿಸೆಂದು ಸರ್ವರೂ ಭಗವಂತನಲ್ಲಿ ಪ್ರಾರ್ಥಿಸೋಣ.

“ಲಿಂಗಮಧ್ಯೆ ಜಗತ್ ಸರ್ವಂ
ಸಕಲ ಚರಾಚರಂ” ಎಂಬುದು ಋಷಿವಾಕ್ಯ. ಸೂರ್ಯ-ಚಂದ್ರ ಗ್ರಹ-ನಕ್ಷತ್ರಾದಿ ಭೂ-ಮಂಡಲದ ಚಲನಾಕ್ರಿಯೆಯ ಗ್ರಹಣ ಸಂಕ್ರಮಣ ಕಾಲಗಳು, ಇಂದಿಗೂ ಕ್ಷಣಗಣನೆ ವ್ಯತ್ಯಾಸವಾಗದಂತೆ ಭವಿಷತ್ ಜ್ಞಾನವನ್ನು, ಅಂದಿನ ಋಷಿಮುನಿಗಳು ಅರಿತದ್ದು ಲಿಂಗದ ಮುಖಾಂತರವೇ.
ಆದರೆ
ಅಂಗೈ ಮಧ್ಯೇ ಜಗತ್ ಸರ್ವಂ (ಮೊಬೈಲ್.)
ಸಕಲ ಚರಾಚರಂ, ಜೊತೆಗೆ ಸಕಲ ದುರಾಚರಂ. ಕಾಣುವದು ವೈಜ್ಞಾನಿಕ ಸತ್ಯವಾಗಿದೆ. ವಿಜ್ಞಾನವೇನೋ ಪರೋಪಕಾರಿ. ಆದರೇ ಉಪಯೋಗಿಸುವ ಯುವಕರಲ್ಲಿ ಅಪಾಯಕಾರಿಯಾಗಿದೆ.

ಧಾರ್ಮಿಕ ದೇಶದೆಲ್ಲೆಡೆ ಅಧರ್ಮದ ತಾಂಡವ ನೃತ್ಯ ನಡೆದಿದೆ. ಸರ್ವ ಯುವಕರು ಒಮ್ಮನದಿಂದ ಒಗ್ಗಟ್ಟಾಗಿ ಪಕ್ಷಾತೀತ ತಾರತಮ್ಯವಿಲ್ಲದೆ ದೇಶ, ಕೋಶ, ಭಾರತೀಯ ಸನಾತನ ಸಂಸ್ಕೃತಿ ಮತ್ತು ನಮ್ಮ ಮುಂದಿನ ಜನಾಂಗದ ರಕ್ಷಣೆಗೋಸ್ಕರ ಒಲವಿನಿಂದ ಪರಿವರ್ತನೆಗೆ ಪ್ರಯತ್ನಿಸಿ, ಅಧರ್ಮೀಯರನ್ನು ಖಂಡಿಸಬೇಕೆಂದು ವಿನಂತಿಯನ್ನು ಸಲ್ಲಿಸುತ್ತೇನೆ.

ಪರೋಪಕಾರಂ ಮಿದಂ ಶರೀರಂ
“ಸಕಲಜೀವ ಸುಖಿಯೊ ಭವಂತು”
“ಮಾನವಧರ್ಮಕ್ಕೆ ಜಯವಾಗಲಿ”
“ಧರ್ಮದಿಂದಲೇ ವಿಶ್ವಕ್ಕೆ ಶಾಂತಿ”
“ಸತ್ಯಂ ಶಿವಂ ಸುಂದರಂ”
ಓಂ ಶಾಂತಿ ಶಾಂತಿ ಶಾಂತಿಃ.

ವರದಿ ಮಲ್ಲಿಕಾರ್ಜುನ ವಿಭೂತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ