ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ತೆವರಮೆಳ್ಳಿಹಳ್ಳಿ ಗ್ರಾಮದ ಶ್ರೀ ಚನ್ನಬಸವಣ್ಣ ಇಂಗ್ಲೀಷ್ ಮಿಡಿಯಂ ಶಾಲೆಯಲ್ಲಿ 2024-2025ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಜನೆವರಿ 11 (ಶನಿವಾರ) ರಂದು ಸಂಜೆ 5 ಘಂಟೆಗೆ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ. ಸಮ್ಮೇಳನದ ಉದ್ಘಾಟನೆಯನ್ನು ಸವಣೂರ-ಶಿಗ್ಗಾಂವಿ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಯಾಸೀರ ಮೊಹಮ್ಮದಖಾನ ಪಠಾಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಎಸ್ ಎಂ ಎಸ್ ವಿದ್ಯಾಪೀಠ(ರಿ.) ಅಧ್ಯಕ್ಷರಾದ ಸನ್ಮಾನ್ಯಶ್ರೀ ಎಸ್ ಎ ಪಾಟೀಲ ವಹಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಹಾವೇರಿ ನಗರ ಸಭೆ ಸದಸ್ಯ ಮತ್ತು ಡಿ.ಸಿ.ಸಿ ಜಿಲ್ಲಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸಂಜೀವಕುಮಾರ ನೀರಲಗಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ ಎಫ್ ಬಾರ್ಕಿ ಮತ್ತು ತೆವರಮೆಳ್ಳಿಹಳ್ಳಿ ಗ್ರಾಮ ಪಂಚಾಯಿತ ಅಧ್ಯಕ್ಷೆಯಾದ ಶ್ರೀಮತಿ ದೊಡ್ಡಬಸಮ್ಮ ದೊಡ್ಡಮನಿ ಹಾಗೂ ತೆವರಮೆಳ್ಳಿಹಳ್ಳಿ ಗ್ರಾಮದ ಸುತ್ತ ಮುತ್ತಲಿನ ನಾಗರಿಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
