ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಂಗೀತದಲ್ಲಿ ದಿವ್ಯೌಷಧಿ ಗುಣವಿದೆ: ಶಾಸಕ ಅಲ್ಲಮ ಪ್ರಭು ಪಾಟೀಲ್

ಕಲಬುರಗಿ: ಸಂಗೀತಕ್ಕೆ ಔಷಧದ ಶಕ್ತಿ ಇದ್ದು, ಮಾನಸಿಕ ನೆಮ್ಮದಿ ಜತೆಗೆ ದೈಹಿಕ ರೋಗಗಳನ್ನು ನೀಗಿಸುತ್ತದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.

ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಕರ್ನಾಟಕ ಕಲಾ ಸಾಹಿತ್ಯ ಸಂಸ್ಕೃತಿ ಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಸೌರಭ ಹಾಗೂ ಕರ್ನಾಟಕ ಚೇತನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ ಸಂಗೀತ ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಜಾನಪದ, ತತ್ವ ಪದಕಾರರು ನಮ್ಮ ಇತಿಹಾಸ ಹಾಗೂ ನಡೆ ನುಡಿಗಳನ್ನು ಸಂಗೀತದ ಮೂಲಕ ವರ್ಣಿಸಿದ್ದಾರೆ. ಸಂಗೀತ ಆಲಿಕೆ ಹಲವು ರೋಗಗಳು ನಿವಾರಣೆ ಆಗುತ್ತವೆ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ ಎಂದರು.

ಅಜಲಪುರದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಮಾತನಾಡಿ, ಸಂಗೀತಕ್ಕೆ ಕಟ್ಟಳೆಗಳಿಲ್ಲ, ಎಲ್ಲರಿಗೂ ಸಮನಾಗಿ ಕಾಣುವ ಮೂಲಕ ಶ್ರೀಗುರು ಪುಟ್ಟರಾಜ ಗವಾಯಿಗಳು ಸಂಗೀತ ಧಾರೆ ಎರೆದಿದ್ದಾರೆ. ವಿಶೇಷ ಚೇತನರ ಬಾಳಿಗೆ ಕಾಮಧೇನು ಆಗಿದ್ದಾರೆ ಎಂದು ಹೇಳಿದರು.
ಮೇಯರ್‌ ಯಲ್ಲಪ್ಪ ನಾಯ್ಕೊಡಿ, ಕಸಾಪ ಜೇವರ್ಗಿ ಗೌರವಾಧ್ಯಕ್ಷ ಚನ್ನಮಲ್ಲಯ್ಯ ಹಿರೇಮಠ, ಜೇವರ್ಗಿ ತಾಲೂಕ ವಚನ ಸಾಹಿತ್ಯ ಅಧ್ಯಕ್ಷರಾದ ಕಲ್ಯಾಣಿಕುಮಾರ ಸಂಗಾವಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ ಮೂಲಗೆ, ಶಿವಶರಣಪ್ಪ ಕೋಬಾಳ, ದೂರದರ್ಶನದ ನಿವೃತ್ತ ಅಧಿಕಾರಿ ಸದಾನಂದ ಪೆರ್ಲಾ, ಕಲ್ಯಾಣಕುಮಾರ ಸಂಗಾವಿ, ನೀಲಕಂಠ ಎಂ. ಜಮಾದಾರ, ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯ ಶಂಕರ ಹೂಗಾರ, ಪಂಚಪೀಠ ವಾರ್ತಾಧಿಕಾರಿ ಸಿದ್ರಾಮಪ್ಪ ಅಲಗೂಡಕರ್, ಕರ್ನಾಟಕ ಕಲಾ ಸಾಹಿತ್ಯ ಸಂಸ್ಕೃತಿ ಸೇವಾ ಸಂಸ್ಥೆ ಅಧ್ಯಕ್ಷ ಬಾಬುರಾವ ಕೋಬಾಳ, ಜರ್ನಲಿಸ್ಟ್ ಅನಿಲ ಸುಂಧೆ,ಅರುಣ ಬಾನ್ಸೊಡೆ,ಚೇತನ್ ಕೋಬಾಳ ಇತರರಿದ್ದರು.

2024ನೇ ಸಾಲಿನ ರಾಜ್ಯ ಮಟ್ಟದ “ಕರ್ನಾಟಕ ಚೇತನ” ಪ್ರಶಸ್ತಿ ಪುರಸ್ಕೃತರಾದವರು

ಸಮಾಜ ಸೇವೆ ಕ್ಷೇತ್ರ : ಶ್ರೀ ಚಂದ್ರಶೇಖರ ಮಡಿವಾಳ ಖ್ಯಾತ ಉದ್ದಿಮೇದಾರರು, ಕಲಬುರಗಿ

ಸಮಾಜ ಸೇವೆ ಕ್ಷೇತ್ರ : ಶ್ರೀ ಧರ್ಮರಾಜ ಬಿ. ಹೇರೂರ

ವೈದ್ಯಕೀಯ ಕ್ಷೇತ್ರ : ಡಾ. ಎಸ್.ಎಸ್.ಪಾಟೀಲ
ಹೋಮಿಯೋಪತಿ ವೈದ್ಯರು ಹಾಗೂ ಸಾಹಿತಿಗಳು

ವೈದ್ಯಕೀಯ ಕ್ಷೇತ್ರ : ಶ್ರೀ ಓಂಪ್ರಕಾಶ ಬರಸಾನೂರಮಠ
ವೈದ್ಯಕೀಯ ಕ್ಷೇತ್ರ : ಡಾ. ಸುರೇಶ ಬಂಡಗರ ನೇತ್ರ ಅಧಿಕಾರಿಗಳು, PHC ಗೊಬ್ಬುರ (ಬಿ)

ಮಾಧ್ಯಮ ಕ್ಷೇತ್ರ : ಶ್ರೀ ಬ್ರಹ್ಮಾನಂದ ಅರಳಿ, ನಿಡಗುಂದ

ಸರಕಾರಿ ಸೇವೆ ಕ್ಷೇತ್ರ : ಶ್ರೀ ಶಿವರಾಜ ಬಸವರಾಜ ಮುರಡಿ

ಪೋಲೀಸ್ ಇಲಾಖೆ : ಶ್ರೀ ರಾಜಶೇಖರ ಹಡಪದ ಕೊಂಡಗೂಳಿ

ಪೋಲಿಸ್ ಇಲಾಖೆ : ಶ್ರೀ ದಯಾನಂದ ಬಿ. ಜಮಾದಾರ

ಶಿಕ್ಷಣ ಕ್ಷೇತ್ರ : ಶ್ರೀ ಮಲ್ಲಕಾರ್ಜುನ ಬಸವರಾಜ, ಕೋನಶಿರಸಗಿ
ಶಿಕ್ಷಣ ಕ್ಷೇತ್ರ : ಶ್ರೀ ಚಂದ್ರಶಾಗೌಡ ಮಾಲಿ ಪಾಟೀಲ್
ಯೋಗ ಕ್ಷೇತ್ರ : ಶ್ರೀ ಶಿವಲಿಂಗಯ್ಯ ಹಿರೇಮಠ

ಸಮಾಜ ಸೇವೆ ಕ್ಷೇತ್ರ : ಶ್ರೀ ರವಿಶಂಕರ ಎ.ಕುಲಾಲಿ, ಗೊಬ್ಬುರ (ಬಿ)

ಸಮಾಜ ಸೇವೆ ಕ್ಷೇತ್ರ : ಶ್ರೀ ಚನ್ನಬಸಪ್ಪ ಗೊಲ್ಲಾಳಪ್ಪ ಹೂಗಾರ

ಸಂಗೀತ ಕ್ಷೇತ್ರ : ಶ್ರೀ ಮಡಿವಾಳಯ್ಯ ಸಾಲಿಮಠ
ಸಂಗೀತ ಕ್ಷೇತ್ರ : ಶ್ರೀ ಬಲವಂತ ಉದನೂರ

ಕಲಾ ಕ್ಷೇತ್ರ : ಶ್ರೀಮತಿ ಜ್ಯೋತಿ ಹಂಚಾಟೆ

ಸಮಾಜ ಸೇವೆ ಕ್ಷೇತ್ರ : ಶ್ರೀ ಚಂದ್ರಶೇಖರ ಗುರುಸಂಗಪ್ಪ ಕರಜಗಿ

ಸಾಹಿತ್ಯ ಕ್ಷೇತ್ರ : ಶ್ರೀ ರಾಜೇಂದ್ರ ಝಳಕಿ

ಶಿಕ್ಷಣ ಕ್ಷೇತ್ರ : ಶ್ರೀ ವಿಜಯಕುಮಾರ ಸಾಲಿಮಠ

ಸಮಾಜ ಸೇವೆ ಕ್ಷೇತ್ರ : ಶ್ರೀ ವಿಶ್ವನಾಥ ಸಾಹುಕಾರ, ತಿಳಗೊಳ

ಸರಕಾರಿ ಸೇವೆ ಕ್ಷೇತ್ರ: ಶ್ರೀ ಬಾಬುರಾವ ಬಿರಾದಾರ ಕೂಡಿ
ಸಂಗೀತ ಕ್ಷೇತ್ರ: ಶ್ರೀ ಸೂರ್ಯಕಾಂತ ಬಿ. ಪೂಜಾರಿ ಗೊಬ್ಬುರ (ಬಿ)
ಸಂಗೀತ ಕ್ಷೇತ್ರ ಶ್ರೀ ಜಗದೀಶ ಮಾನು ರಂಗಂಪೇಟ

ಸೇರಿದಂತೆ ಹಲವರಿಗೆ ಕರ್ನಾಟಕ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಾಗಲಿಂಗ್ಯನವರು ಕಾರ್ಯಕ್ರಮನ್ನು ನಿರೂಪಿಸಿ ವಂದಿಸಿದರು.

ವರದಿ: ಚಂದ್ರಶೇಖರ ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ