ವಿಜಯನಗರ : ಜಿಲ್ಲೆಯ ಕೊಟ್ಟೂರು ತಾಲೂಕಿನ ಮಂಗಾಪುರ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಜಿಲ್ಲಾ ಸಂಚಾಲಕರಾದ ದುರ್ಗೇಶ್ ರವರು ಈ ಸಂಘಟನೆ ನೇತೃತ್ವವನ್ನು ವಹಿಸಿಕೊಂಡು ಮಾತನಾಡುತ್ತಾ ಈ ಸಂಘಟನೆ ಉದ್ದೇಶ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಯಾವುದೇ ಸಮುದಾಯವಾಗಿರಲಿ ಮೂಲಭೂತ ಸೌಲಭ್ಯ ಗಳಿಂದ ವಂಚಿತರಾಗಿರುವ ಯಾವುದೇ ಸಮುದಾಯವಾಗಿರಲಿ ಅವರಿಗೆ ಸೌಕರ್ಯಗಳನ್ನು ಒದಗಿಸಿ ಕೊಡುವುದರ ಮೂಲಕ ಈ ಸಂಘಟನೆಯನ್ನು ರೂಪಿಸುವುದು ಒಂದು ಪ್ರಯಾಣ ಶಕ್ತಿ ಅಂತ ಹೇಳಬಹುದು ಯಾಕಂದರೆ ಕೇವಲ ಒಬ್ಬ ವ್ಯಕ್ತಿಯಿಂದ ಆಗದೇ ಇರುವಂತಹ ಕೆಲಸವನ್ನು ಒಂದು ಸಂಘಟನೆಯ ಹೋರಾಟದ ಮೂಲಕ ನಾವು ಸಮಸ್ಯೆಗಳನ್ನು ಬಗೆಹರಿಸಿ ಅದಕ್ಕೆ ಪರಿಹಾರವನ್ನು ಕೊಂಡುಕೊಳ್ಳಬಹುದು ಎಂದರು ಹಾಗೂ ಸಂಘಟನೆ ಎಂದರೆ ಒಂದು ಕಾನೂನಿನ ಚೌಕಟ್ಟಿನ ಮೂಲಕ ತಮ್ಮ ಸಮುದಾಯಕ್ಕೆ ಅಥವಾ ಬೇರೆ ಹಿಂದುಳಿದ ಸಮುದಾಯಗಳಿಗೆ ಅನ್ಯಾಯ ಖಂಡನೆಗಳ ಮೂಲಕ ನ್ಯಾಯ ದೊರಕಿಸಿ ಕೊಡುವುದು ಈ ಸಂಘಟನೆಯ ಉದ್ದೇಶ ಆಗಿರುತ್ತದೆ ಹಾಗೂ ಕಂದಗಲ್ ಪರಶುರಾಮ್ ರವರು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ಮೂಲಕ ಹಿಂದುಳಿದವರಿಗೆ ಸೌಲಭ್ಯಗಳಿಂದ ವಂಚಿತರಾಗಿರುವಂತಹ ಕಾನೂನಿನ ಮುಖಾಂತರ ಹೋರಾಟ ಮಾಡಿ ನ್ಯಾಯವನ್ನು ದೊರಕಿಸಿ ಕೊಡುವುದೇ ಈ ಸಂಘಟನೆ ಉದ್ದೇಶ ಸಹ ಆಗಿರುತ್ತದೆ ಎಂದು ವ್ಯಕ್ತಪಡಿಸುತ್ತಾರೆ. ಸಂಘಟನೆಂದರೆ ಗುಂಪುಗಾರಿಕೆ ಅಥವಾ ದೌರ್ಜನ ಮಾಡುವುದೆಂದು ಅರ್ಥವಲ್ಲ ನಮಗೆ ಬೇಕಾದ ಸಹಕಾರವನ್ನು ನ್ಯಾಯಯುತವಾಗಿ ಪಡೆದು ಕೊಳ್ಳುವುದು ಎಂದರು.
ಹಾಗೂ ಮಂಗಪುರದ ಗ್ರಾಮದ ಶಾಖೆಯ ದಡಾರಪ್ಪ ಹೆಚ್ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ ಹಾಗೂ ಸಂಘಟನಾ ಸಂಚಾಲಕರಾಗಿ ಚಿಕ್ರೇಶ್ ಹೆಚ್, ಸಿದ್ದೇಶ್ ಎಲ್, ಎಚ್ ಡಿ ಚೌಡಪ್ಪ, ಕರಿಬಸವರಾಜ್ ಹೆಚ್, ಆಯ್ಕೆಯಾದರೂ ಮತ್ತು ಖಜಾಂಚಿ ಎಚ್ ಪಿ ನಾಗೇಶ್,ಮತ್ತು ಸಂತೋಷ್, ರಾಜ್, ಅರುಣ್,ಅಜಯ್,ಸದ್ಯಸರು ಇನ್ನು ದಲಿತ ಸಂಘರ್ಷ ಸಮಿತಿಯ ಮುಖಂಡರು ಇದ್ದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಸಂಚಾಲಕರಾದ ದುರ್ಗೇಶ್, ತೆಗ್ಗಿನಕೇರಿ ಕೊಟ್ರೇಶ್ ಜಿಲ್ಲಾ ಸಂಘಟನಾ ಸಂಚಾಲಕರು, ಕಂದಿಗಲ್ ಪರಶುರಾಮ್ ಜಿಲ್ಲಾ ಸಂಘಟನಾ ಸಂಚಾಲಕರು ಹಾಗೂ ಕೂಡ್ಲಿಗೆ ತಾಲೂಕ್ ಸಂಚಾಲಕರಾದ ಟಿ ಗಂಗಾಧರ್ ಹೊಸಳ್ಳಿ,ಬುಗ್ಗನಹಳ್ಳಿ ಕೊಟ್ರೇಶ್ ಪಟ್ಟಣ ಪಂಚಾಯಿತಿಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರು ದಲಿತ ಸಂಘರ್ಷ ಸಮಿತಿಯ ಮುಖಂಡರು ಸೇರಿದರು.
ವರದಿ: ಗುರುರಾಜ್ ಎಲ್, ಕಲ್ಲಹಳ್ಳಿ ಟಿ
