ವಿಜಯನಗರ : ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಹೋಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವನ್ನು ಆಯ್ಕೆಯನ್ನು ಇಂದು ಚುನಾವಣೆ ಅಧಿಕಾರಿಗಳಾದ ಆರ್ ವೆಂಕಟೇಶ್ ಮತ್ತು ಕಾರ್ಯದರ್ಶಿ ಬಸವರಾಜ್ ಹಾಗೂ ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ ಮತ್ತು ಗುಡೆಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೃಷ್ಣ ರವರ ಹಾಗೂ ಊರಿನ ಮುಖಂಡರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಈ ದಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿದ್ದು ಅಧ್ಯಕ್ಷ ಸ್ಥಾನಕ್ಕೆ ಐದು ಜನ ನಾಮಪತ್ರವನ್ನು ಸಲ್ಲಿಸಿದರು ಹಾಗೂ ಹನ್ನೆರಡು ಜನ ಸದಸ್ಯರನ್ನು ಒಳಗೊಂಡಿತ್ತು ಅದರಲ್ಲಿ ಕೆ ರಾಘವೇಂದ್ರ ರಾವ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು, ಹಾಗೂ ಉಪಾಧ್ಯಕ್ಷರಾಗಿ ಯಾರಬೋರನಟ್ಟಿ ಗಂಗಾಧರ್ ರವರನ್ನು ಚುನಾವಣೆ ಅಧಿಕಾರಿಗಳ ಸಮ್ಮುಖದಲ್ಲಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರುಗಳ ಹಾಗೂ ಗ್ರಾಮದ ಮುಖಂಡರು ಸೇರಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದಂತಹ ಕೆ ರಾಘವೇಂದ್ರರಾವ್ ಅವರು ಮಾತನಾಡುತ್ತಾ ನಮ್ಮ ಸುತ್ತಮುತ್ತಲಿನ ಎಲ್ಲಾ ಹಳ್ಳಿ ರೈತರಿಗೂ ಹಾಗೂ ಊರಿನ ಜನತೆಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ರೈತರಿಗೆ ಸಿಗಬಹುದು ಅಂತ ಸೌಲಭ್ಯಗಳನ್ನು ಸರ್ಕಾರದಿಂದ ಸಿಗುವ ಪ್ರತಿಯೊಂದು ಸೌಲಭ್ಯಗಳನ್ನು ಅವರಿಗೆ ತಲುಪಿಸಲು ಪ್ರಯತ್ನ ಪಡುತ್ತೇನೆ ಎಂದರು.
ಊರಿನ ಮುಖಂಡರಗಳಾದ ಬಶೀರ್ ಸಾಬ್, ನಾಗೇಂದ್ರಪ್ಪ, ಗೋವಿಂದಪ್ಪ ಕೆಇಬಿ, ನಾರಾಯಣಪ್ಪ, ಬೊಮ್ಮಣ್ಣ, ಶ್ರೀನಿವಾಸ್, ನಿಜಲಿಂಗ, ಮುತ್ಯಾಪಾಲಯ್ಯ, ಸುರೇಶ್, ಅಜಯ್ ಕುಮಾರ್ ಕೆಇಬಿ, ಜಯರಾಮ, ಗುಡೆಕೋಟೆಯ ಆರಕ್ಷಕ ಠಾಣೆಯ ಸಿಬ್ಬಂದಿಗಳು ಇನ್ನೂ ಮುಂತಾದವರು ಇದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
