ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಮ್ಮ ಮನದಲ್ಲೇ ಶಾಶ್ವತವಾಗಿ ಉಳಿದವರು ಅಪ್ಪು

ಪುನೀತ್ ಅವರು ಸಾಮಾನ್ಯವಾಗಿ ಸರಳ ಜೀವನವನ್ನು ನಡೆಸಿಕೊಂಡು ಬಂದವರಲ್ಲಿ ಮೊದಲಾದವರು ಇವರು ಜೀವನಶೈಲಿ ಬೆಳೆದು ಬಂದ ದಾರಿ ನೋಡುಗರ ಮತ್ತು ಕೇಳುಗರ ಮನ ಸೆಳೆದವು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ತಂದೆಯ ದೊಡ್ಡತನದಿಂದ ಬೆಳೆದು ಗರ್ವದಿಂದ ಮೆರೆಯುತ್ತಾನೆ ಆದರೆ ಪುನೀತವರು ತಮ್ಮ ಬುದ್ಧಿ ಬಂದ ವಯಸ್ಸಿನಿಂದಲೂ ಸ್ವಂತ ಆಲೋಚನೆಗಳನ್ನು ಮಾಡುತ್ತಾ ಸಿನಿಮಾ ರಂಗದಲ್ಲಿ ತಂದೆಯ ಹೆಸರನ್ನು ಬಳಸದೆ ತಮ್ಮ ಪ್ರತಿಭೆಯಿಂದ ಸಾಧನೆಗೈದವರು ಬಹಳ ಶ್ರಮಜೀವಿಯಾಗಿ ಸ್ವಂತ ಬುದ್ಧಿ ಶಕ್ತಿಯಿಂದ ಬದುಕಿನ ಉದ್ದಕ್ಕೂ ಜೀವನವನ್ನು ನಡೆಸಿದವರು ಸಹೋದರ ಸಹೋದರಿಯರ ಪ್ರೀತಿಗೆ ಪಾತ್ರರಾಗಿ ಸಂಸಾರದ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಿದವರು ತಮ್ಮ ಕೌಶಲ್ಯ ಸಾಮರ್ಥ್ಯದ ಮೂಲಕ ಹೊಸ ಹೊಸ ಯೋಜನೆಗಳನ್ನು ಅಭಿವೃದ್ಧಿಪಡಿಸಿಕೊಂಡು ಇನ್ನೊಬ್ಬರಿಗೆ ಮಾದರಿಯಾಗುವ ಮೂಲಕ ಬದುಕಿರಿ ಎಂದು ತೋರಿಸಿದವರು ಅನಾಥರಿಗೆ ತಂದೆಯಾಗಿ ಕುರುಡರಿಗೆ ಕಣ್ಣಾಗಿ ಯುವಕರಿಗೆ ಸ್ಪೂರ್ತಿಯಾಗಿ ಸಮಾಜಕ್ಕೆ ಒಳ್ಳೆಯ ಹೃದಯವಂತ ನಾಯಕನಾಗಿ ಬೆಳೆಯುತ್ತಾ ಬಂದರು.
ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅರಿತುಕೊಳ್ಳಬೇಕಾದರೆ ಅವನ ಸರಳತೆ ಪ್ರತಿಯೊಂದು ಮಾತು ಕಲಿಯುವ ಮನಸ್ಥಿತಿ ಹೊಂದಿರಬೇಕು ಪುನೀತ್ ಅವರು ಕೋಟಿ ಕೋಟಿ ದಾನ ಮಾಡಿ ಅಲ್ಪ ಸ್ವಲ್ಪ ಕೂಡಾ ತಿಳಿಯದಂಗೆ ಮಾಡಿ ಜಗತ್ತಿಗೆ ಕಿವಿಮಾತು ಹೇಳಿದರು ಎಡಗೈ ಮಾಡಿದ್ದು ಬಲಗೈಗೆ ತಿಳಿಯಬಾರದೆಂದು ಇವರ ವ್ಯಕ್ತಿತ್ವವನ್ನು ನೋಡಿ ನಾವೆಲ್ಲರೂ ಅರಿತುಕೊಳ್ಳಬೇಕು ಲಕ್ಷಾಂತರ ಜನರ ಪ್ರೀತಿಗೆ ಅಭಿಮಾನಕ್ಕೆ ಪಾತ್ರರಾಗಿದ್ದಾರೆ ಅವರು ಸಿನಿಮಾ ರಂಗದಲ್ಲಿ ಅಷ್ಟೇ ಅಲ್ಲದೆ ಸಮಾಜಮುಖಿ ಸೇವೆಗಳ ಚಿಂತನೆ ಒಳಗಾಗಿ ಸರಕಾರದ ಯೋಜನೆಗಳಲ್ಲಿ ಪುನೀತ್ ಅವರು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ ಅವರ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ತಮ್ಮ ಮನಸ್ಸುಗಳನ್ನು ನಿರಂತರವಾಗಿ ಶ್ರಮಿಸುವಂತಹ ನಮ್ಮ ಜೀವಿಗಳಾಗಿದ್ದರು ಇಂದಿನವರೆಗೂ ಯಾವುದೇ ಕೆಟ್ಟ ಹವ್ಯಾಸಗಳಿಗೆ ದುಷ್ಟತನಕ್ಕೆ ಬಲಿಯಾಗದೆ ಸಮಾಜಘಾತುಕ ಚಟುವಟಿಕೆಗಳಿಗೆ ಭಾಗಿಯಾಗದೆ ದೂರದಿಂದ ಸಮಾಜವನ್ನು ಜಾಗೃತಿ ಪಡಿಸುವುದರಲ್ಲಿ ಯುವಕರಿಗೆ ಚೈತನ್ಯ ಮೂಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ ಎಲ್ಲಾ ಅಭಿಮಾನಿಗಳ ಮನಸ್ಸುಗಳನ್ನು ಪ್ರೀತಿಯಿಂದ ಗೆದ್ದವರು.
ಒಬ್ಬ ನಟ ಎಂದರೆ ಸಮಾಜದ ಒಳಿತು ಕೆಡಕುಗಳನ್ನು ಅನುಸರಿಸಿ ಬದುಕುವ ಮಾರ್ಗವನ್ನು ಅನುಸರಿಸುವ ಮೂಲಕ ಜನರಿಗೆ ತಿಳಿಸಬಯಸುತ್ತಾನೆ ಆ ಸಾಮಾನ್ಯ ಜ್ಞಾನದಿಂದ ಅವರು ತಮ್ಮ ಜೀವನವನ್ನು ರೂಪಿಸಿಕೊಂಡರೆ ಸಮಾಜಕ್ಕೆ ಮಾದರಿಯಾಗುತ್ತಾರೆ ಅಂತ ವ್ಯಕ್ತಿತ್ವ ಹೊಂದಿದವರೇ ನಮ್ಮ ಪುನೀತ್ ರಾಜಕುಮಾರ್ ಪುನೀತ್ ನಮ್ಮನ್ನು ಅಗಲಿ ಸುಮಾರು ದಿನಗಳೇ ಕಳೆದವು 29 ಅಕ್ಟೋಬರ್ 2021 ರಲ್ಲಿ ಕರ್ನಾಟಕ ಜನತೆಯ ಮನೆ ಮಗನ ಅಗಲಿಕೆಯಿಂದ ಶೋಕದಲ್ಲಿ ಮುಳುಗಿತ್ತು ಇವರು ತಮ್ಮ ಆರ್ಥಿಕ ಬಲವಿದ್ದರೂ ಮಕ್ಕಳಿಗೆ ತಮ್ಮ ಪರಿಶ್ರಮದಿಂದಲೇ ವಿದ್ಯಾಭ್ಯಾಸ ಮಾಡಿಸಲು ಬಯಸಿದರು ಶ್ರೀಮಂತಿಕೆ ಇದ್ದರೂ ಅವರು ಅದನ್ನು ಒಂದು ದಿನವೂ ತೋರಲಿಲ್ಲ ಜನರಿಂದ ಬಂದ ಹಣ ಜನರಿಗೆ ಸೇರಬೇಕು ಜನರ ಸೇವೆಗೆ ಮುಡುಪಾಗಿ ಇರಬೇಕೆಂದು ಬಯಸಿದರು ಪುನೀತ್ ರಾಜಕುಮಾರ್ ಅವರು ಇಂದು ನಮ್ಮೊಂದಿಗೆ ಇಲ್ಲದೆ ಇರಬಹುದು ಆದರೆ ಅವರ ಸಾಧನೆ ಸೂರ್ಯ ಚಂದ್ರ ಇರುವವರೆಗೂ ಅಳಿಯದೆ ಅವರು ಮಾಡಿರುವ ಕೆಲಸಗಳಿಂದ ಎಷ್ಟೋ ಕುಟುಂಬಗಳು ಜೀವಂತವಾಗಿವೆ ಅವರ ಶಿಸ್ತಿನ ಬದುಕು ಎಲ್ಲರಿಗೂ ಮಾರ್ಗದರ್ಶನವಾಗಿದೆ ಸದ್ದಿಲ್ಲದೆ ಸಮಾಜಕ್ಕೆ ಕೊಟ್ಟಿರುವ ಕೊಡುಗೆಗಳು ಪುನೀತ್ ರಾಜಕುಮಾರ್ ನಿಲುವನ್ನು ತಾಳಿದೆ 26 ಅನಾಥಾಶ್ರಮ 46 ಉಚಿತ ಶಾಲೆ 16 ವೃದ್ದಾಶ್ರಮ 19 ಗೋಶಾಲೆ ಹಾಗೂ ಮೈಸೂರಿನಲ್ಲಿ ಶಕ್ತಿಧಾಮ ಹೆಸರಿನಲ್ಲಿ 1800 ಹೆಣ್ಣು ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಕನ್ನಡದ ನಟ ಪುನೀತ್ ರಾಜಕುಮಾರ್
ವ್ಯಕ್ತಿಯ ವ್ಯಕ್ತಿತ್ವ ಅವನ ಗುಣದಲ್ಲಿ ನೋಡ ಎಂದವರು ನಮ್ಮ ಪೂರ್ವಜರು…,. ನಲಿವು ಸ್ವತಃ ತಾವು ನೋಡು ಜಗಕ್ಕೆ ಜನ ಮೆಚ್ಚಿದ ದೇವತಾ ಮನುಷ್ಯ

ಜಗದ ಜನರಿಗೆ ಪ್ರೀತಿ ಕೊಟ್ಟು
ಮನದ ತುಂಬಾ ನೋವ ಬಿಟ್ಟು
ಯಾರಿಗೂ ಹೇಳದೆ ಕಣ್ಮರೆಯಾದರು
ನಮ್ಮ ಮನದಲ್ಲೇ ಹಚ್ಚ ಹಸಿರಾಗಿ ಉಳಿದವರು ಅಪ್ಪು…

  • ಅನುರಾಧ ಡಿ ಸನ್ನಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ