ಬೀದರ್ :(ಹುಲಸೂರು/ಬಸವಕಲ್ಯಾಣ): ಬೇಲೂರಿನ ಉರಿಲಿಂಗಪೆದ್ದಿ ಮಠದಲ್ಲಿ ಜರುಗುವ ಶರಣ ಉರಿಲಿಂಗಪೆದ್ದಿ ಉತ್ಸವ, ಪೂಜ್ಯ ಶ್ರೀ ಲಿಂ.ಶಿವಲಿಂಗೇಶ್ವರ ಶಿವಯೋಗಿಗಳವರ ೫೬ ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಜರುಗುವ ಪ್ರಥಮ ಸರ್ವೋದಯ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿ,ಕನ್ನಡ ಪರಿಚಾರಕರು,ಪುಸ್ತಕ ಸಂಸ್ಕೃತಿ, ಹರಿಕಾರರು,ಸರ್ವ ಸಮಾನತೆಯ ಸಾಮರಸ್ಯದ ಪೀಠಾಧಿಪತಿಗಳಾದ ಡಾ.ಚನ್ನವೀರ ಶಿವಾಚಾರ್ಯ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ
ಮಾಡಲಾಯಿತೆಂದು ಪೀಠಾಧಿಪತಿ ಪೂಜ್ಯರ ಪಂಚಾಕ್ಷರಿ ಸ್ವಾಮೀಜಿ ಮತ್ತು ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೇಲೂರಿನ ಮಠದಲ್ಲಿ ಜರುಗಿದ ಪೂರ್ವ ಭಾವಿ ಸಭೆಯಲ್ಲಿ ಸದ್ಭಕ್ತರು,ಸಾಹಿತಿ,ಕವಿ ಕಲಾವಿದರು ಸೇರಿ
ನಿರ್ಣಯಿಸಿ ಬರುವ ಫೆಬ್ರುವರಿ ೨೨ ಮತ್ತು ೨೩ ರಂದು ಎರಡು ದಿವಸಗಳ ಕಾಲ ನಡೆಯಲಿದೆ. ಸರ್ವರ ಉದಯವಾಗಬೇಕು,ಸಾಹಿತ್ಯ,ಧರ್ಮ,ಸಮಾಜವು ಸಾ ಮರಸ್ಯದಿಂದ ಬಾಳಬೇಕು.ಯುವಕರಿಗೆ ಆದ್ಯತೆ ನೀಡ ಲು ತೀರ್ಮಾನಿಸಲಾಯಿತು. ತಹಸೀಲ್ದಾರ ಶಿವಾನಂದ
ಮೇತ್ರೆ,ಮುಖಂಡರಾದ ಜಗನ್ನಾಥ ಚಿಲ್ಲಾಬಟ್ಟಿ,ಸುರೇಶ ಕಾನೇಕರ್,ಡಾ.ರಾಜಕುಮಾರ ಮಾಳಗೆ,ಡಾ.ಸಂಜುಕು ಮಾರ ನಡುಕರ್, ಸಂಗಮೇಶ ಎನ್ ಜವಾದಿ, ರಾಜಕುಮಾರ ಮೋರೆ,ರಾಜಕುಮಾರ ಮಾಳಗೆ, ಸಂಜುಕುಮಾರ ಖೇಲೆ ವಕೀಲರು,ಭೀಮಶಾ ವಾಘಮಾರೆ,ನಿತ್ಯಾನಂದ ಮಂಠಾಳಕರ್, ಮಹಾಲಿಂಗ ದೇವರು,ನವನಾಥ ಬೆಳ್ಳೆ, ಪ್ರಕಾಶ ಸಿಂಗೆ, ಬಸವಸಾಗರತುತಾರೆ, ,ನಾಗಪ್ಪ ನಿಣ್ಣೆ,ಗುರುನಾಥ,ಗೌತಮ ವಾಘಮಾರೆ,ಯೋಗೇಶ ರಾಜಗುರು,ನಿಖೀಲ್ ಬೆಳ್ಳೆ,ಮಚಿಂದ್ರ ಕದಮ್,
ರಾಜಪ್ಪ ನಂದುಡೆ, ಸಿದ್ರಾಮ ವಾಘಮಾರೆ, ದಶರಥ ರಾಜಗುರು,ಮಸ್ತಾನ ಪಟೇಲ್, ದತ್ತಾತ್ರೇಯ ಸುಭಾನೆ,ಸಂಜೀವ ತಾಂಬುಳೆ, ಅಶೋಕ್ ಗುಪ್ತಾ, ಅವಿನಾಶ್ ಪಂಚಾಳ, ಚೇತನ್ ರಾಧು, ಗಣೇಶ, ಸನ್ಮುಖ, ಶ್ರಾವಣ,ರವಿ ನಾಗನಾಥ ಬನಸುಡೆ, ಶೇಖ ಮಿರಾನ ಸಾಬ ಜಿಲ್ಲಾ ಪ್ರಧಾನ ಕಾರ್ಯದರ್ಶಿ KPCC ,ಬೀದಿ ಬದಿ ವ್ಯಾಪಾರಿಗಳ ವಿಭಾಗ, ಮತ್ತು ಜಗನ್ನಾಥ ಮೆಟಾರೆ ಜಿಲ್ಲಾ ಉಪಾಧ್ಯಕ್ಷರು KPCC ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
