ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ದಿನ ನಿತ್ಯದ ಕರ್ತವ್ಯ ಹಾಗೂ ಕೆಲಸದ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯವಂತಿಕೆಯ ಜೀವನ ಸಾಗಿಸಲು ಮುಂದಾಗಬೇಕೆಂದು ಮತ್ತು ಪಂದ್ಯಾವಳಿ ನಡೆಸಲು ಕ್ರೀಡಾಪಟುಗಳ ಸಹಾಯ ಬಹಳ ಮುಖ್ಯ ಕೆ.ಕೊಟ್ರೇಶ್ ಅಧ್ಯಕ್ಷರು, ಕರ್ನಾಟಕ ಪತ್ರಕರ್ತರ ಸಂಘ, ತಾಲೂಕು ಘಟಕ ಕೊಟ್ಟೂರು ಇವರು ತಿಳಿಸಿದರು.
ಕೊಟ್ಟೂರಿನಲ್ಲಿ ಹಳೆ ಕೊಟ್ಟೂರು ಸೇವಾ ಟ್ರಸ್ಟ್ (ರಿ.) ಆಯೋಜಿಸಿದ್ದ ಕಾರ್ಯಕಾರಿಣಿ ಸದಸ್ಯ ಮಂಜುನಾಥ ಭಜಂತ್ರಿ, ತಾಲೂಕು ಘಟಕ ಅಧ್ಯಕ್ಷ ಮಹಮ್ಮದ್ ಗೌಸ್ ಸಾರಥ್ಯದಲ್ಲಿ ತಾಲೂಕು ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ವೃದ್ಧಿಯಾಗಲಿದೆ. ಇಂತಹ ಕ್ರೀಡಾಕೂಟ ಹಮ್ಮಿಕೊಳ್ಳುವುದು ಒಳ್ಳೆಯ ಬೆಳವಣಿಗೆ. ಸೋಲು ಗೆಲುವು ಎನ್ನದೇ ಆಟದಲ್ಲಿ ಭಾಗಿಯಾಗಬೇಕು ಎಂದು ಅಲಬೂರು ಹೇಮಣ್ಣ ಹೇಳಿದರು.
ಹಳೆ ಕೊಟ್ಟೂರು ಸೇವಾ ಟ್ರಸ್ಟ್ ಮತ್ತು ಕೆಪಿಎಸ್ ಪತ್ರಕರ್ತರು ಈ ಹಿಂದೆ ಟೂರ್ನಮೆಂಟ್ ನಲ್ಲಿ ಗೆದ್ದ ಹಣವನ್ನು ವಿದ್ಯಾರ್ಥಿ ಮತ್ತು ಬಡ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡುವ ಮೂಲಕ ಮಾದರಿಯಾಯಿತು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸದಸ್ಯರಾದ ಶಿರಿಬಿ ಕೊಟ್ರೇಶ್ ಹೇಳಿದರು.
ಕ್ರಿಕೆಟ್ ಪಂದ್ಯವಳಿಯಲ್ಲಿ ಪ್ರಥಮ ಬಹುಮಾನ ಹದಿನೈದು ಸಾವಿರ ರೂಪಾಯಿಗಳು, ದ್ವಿತೀಯ ಬಹುಮಾನ ಹತ್ತು ಸಾವಿರ ರೂಪಾಯಿಗಳು ಬಹುಮಾನ ನೀಡುತ್ತಿದ್ದು, ಕ್ರಿಕೆಟ್ ಪಂದ್ಯವಳಿಯಲ್ಲಿ ಭಾಗವಹಿಸುವ ಆಟಗಾರರಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರೀಡಾ ಪಟುಗಳಿಗೆ ಇತರೇ ಬಹುಮಾನಗಳ ವಿತರಣೆ ಮಾಡುತ್ತೇವೆ ಎಂದು ಆಯೋಜಕರು ತಿಳಿಸಿದರು.
ಕೆಸಿಕೆ ಕ್ರಿಕೆಟರ್ಸ್ ,ಅಗ್ನಿಶಾಮಕ ಇಲಾಖೆ, ಹಳೆ ಕೊಟ್ಟೂರು, ಕೆಪಿಎಸ್ ಪತ್ರಕರ್ತರು ತಂಡ,ಯುಥ್ ಕ್ರಿಕೆಟರ್ಸ್, ಗೇಮ್ ಚೆಜರ್, ಹಸಿರು ಹೊನಲು ತಂಡ, ಕರವೇ ಕ್ರಿಕೆಟರ್, ಲೆಜೆಂಡ್ ಕ್ರಿಕೆಟರ್ಸ್, ಕೆ ಅಯ್ಯನಹಳ್ಳಿ ಪ್ರೈಡ್ಸ್, ಡೇವಿಲ್ ಬಾಯ್ಸ್ ಉಜ್ಜನಿ, ಪವರ್ ಸ್ಟಾರ್ ಮಲ್ಲನಾಯಕನಹಳ್ಳಿ,ಭಜರಂಗಿ ಕ್ರಿಕೆಟರ್ಸ್ ಹರಾಳು,ಚಪ್ಪರದಹಳ್ಳಿ ಕ್ರಿಕೆಟರ್ಸ್, ಒಟ್ಟು 14 ತಂಡಗಳು ಭಾಗವಹಿಸಿದ್ದವು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಹಳೆ ಕೊಟ್ಟೂರು ಸೇವಾ ಟ್ರಸ್ಟ್ ಸಂಸ್ಥಾಪಕರು ವಿಜಯ ಕುಮಾರ್ ಹಟ್ಟಿ,
ಗೋಕರ್ಣ ಹೋಟೆಲ್ ನಿರಂಜನ್ , ಮಂಜುನಾಥ ಸ್ವಾಮಿ ಅಗ್ನಿ ಶಾಮಕ ಇಲಾಖೆ ,ಕರವೇ ಅಧ್ಯಕ್ಷ ಎಂ.ಶ್ರೀನಿವಾಸ, ವಕೀಲರಾದ ಗುರು ಬಸವರಾಜ,ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ತಾಲೂಕು ಅಧ್ಯಕ್ಷ ತಗ್ಗಿನಕೇರಿ ಕೊಟ್ರೇಶ್, ಎಸ್ ಪರುಶುರಾಮ,ಸುವೇಭ , ಅನಿಲ್ ಸುಭಾನ್, ರಾಜು ಹಾಗೂ ಅಪಾರ ಕ್ರೀಡಾ ಅಭಿಮಾನಿಗಳು ಇದ್ದರು.
