ಶಿವಮೊಗ್ಗ : ಸರಳ, ಸಹೃದಯ ಛಾಯಾಗ್ರಾಹಕ ಶ್ರೀ ಶಿವಮೊಗ್ಗ ನಂದನ್ ಅವರು ವಿಧಿವಶ ಆಗಿದ್ದಾರೆಂದು ವರದಿ ತಿಳಿಸಿದ್ದು, ಈ ಬಗ್ಗೆ ಇಂಡಿಯನ್ ದಿವ್ಯಾಂಗ್ ಎಂಪೋವರ್ಮೆಂಟ್ ಅಸೋಸಿಯೇಷನ್ ನ ಸಂಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಕಣ್ಣೀರು ಮಿಡಿದಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಹೆಸರಾಂತ ಫೋಟೋಗ್ರಾಫರ್ ಆಗಿದ್ದ ಇವರು ಕೆಲವು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು ಸುಮಾರು 25 ವರ್ಷಗಳ ಹಿಂದೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ನನ್ನ ಮತ್ತು ನನ್ನ ಪತ್ನಿ ಇಬ್ಬರನ್ನು ಆದರ್ಶ ವಿಕಲಚೇತನ ದಂಪತಿಗಳೆಂದು ಸಂದರ್ಶಿಸಲು ಪತ್ರಕರ್ತ ಶ್ರೀ ರಾಮಚಂದ್ರ ಗುಣಾರಿ ಅವರೊಂದಿಗೆ ಛಾಯಾಚಿತ್ರ ತೆಗೆಯಲು ಬಂದಿದ್ದ ಇವರು ನಮ್ಮ ಕಾರ್ಯ ಕುಶಲತೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು ಎಂದು ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ನೆನಪಿಸಿಕೊಂಡಿದ್ದಾರೆ.
