ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯದಲ್ಲಿ ಆನ್ಲೈನ್ ಲೋನ್ ಆಪ್ ಸಾಲದಿಂದ ಯುವಕರ ಆತ್ಮಹತ್ಯೆ ಸಂಖ್ಯೆ ಏರಿಕೆ

ರಾಜ್ಯದಲ್ಲಿ ಆನ್ಲೈನ್ ಲೋನ್ ಆಪ್ ಸಾಲದಿಂದ ಯುವಕರ ಆತ್ಮಹತ್ಯೆ ಸಂಖ್ಯೆ ಏರಿಕೆ, ಚೀನಾ ಲೋನ್ ಆಪ್ ಗಳ ಬಗ್ಗೆ ಧ್ವನಿ ಎತ್ತಿದ ಹಾಸನ ಜಿಲ್ಲೆ ಯುವಕ ವರುಣ್ ಚಕ್ರವರ್ತಿ ಇವರಿಬ್ಬರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ

ರಾಜ್ಯದಲ್ಲಿ ನಾನಾ ಕಡೆ, ಶಾಲಾ ಮತ್ತು ಕಾಲೇಜು ಓದುವ ವಿದ್ಯಾರ್ಥಿಗಳು ಮತ್ತು ಕೆಲಸ ಇಲ್ಲದೆ ಬೇಸತ್ತ ಕೆಲವು ಯುವಕರು ಧಾವಂತದ ಮಾತು, ಆತುರದಿಂದ ಹಿಂದೆ ಮುಂದೆ ಯೋಚನೆ ಮಾಡದೆ ಆನ್ಲೈನ್ ಮುಖಾಂತರ ಸಾಲ ಪಡೆಯುತ್ತಾರೆ, ಅದೇ ರೀತಿ ಲೋನ್‌ ಆಪ್ ಗಳು, ಯಾವುದೇ ರೀತಿಯ ಪುರಾವೆಗಳನ್ನು ಪರಿಶೀಲನೆ ಮಾಡದೆ ಹಾಗೂ ಹಣ ಪಡೆಯುವವರ ಸಿಬಿಲ್ (ಕ್ರೆಡಿಟ್ ಸ್ಕೋರ್) ವಿವರ ಮತ್ತು ಹಣ ಕಾಸಿನ ವ್ಯವಸ್ಥೆಯನ್ನು ಚೆಕ್ ಮಾಡದೇ ಲೋನ್ ನೀಡುತ್ತಾರೆ, ವಿದ್ಯಾರ್ಥಿಗಳು ಮತ್ತು ಯುವಕರು, ಅದನ್ನು ಸರಿಯಾದ ಸಮಯದಲ್ಲಿ ಮರು ಪಾವತಿ ಮಾಡುವಲ್ಲಿ ವಿಫಲರಾಗುತ್ತಾರೆ ಹಾಗೂ ಇದನ್ನೇ ಗುರಿಯಾಗಿ ಇಟ್ಟುಕೊಳ್ಳುವ ಕೆಲವು ಲೋನ್ ಅಪ್ಲಿಕೇಷನ್ ಗಳು ಅಥವಾ ಲೋನ್ ನೀಡುವ ಕೆಲವು ಸಂಸ್ಥೆಗಳು ಸಾಲ ಪಡೆದ ವ್ಯಕ್ತಿಗಳ, ಕೆಲವು ವೈಯ್ಯುಕ್ತಿಕ ಮಾಹಿತಿಗಳನ್ನು ಸಾಲಗಾರನಿಗೆ ಅರಿವಿಗೆ ಬರದಂತೆ ತೆಗೆದುಕೊಳ್ಳುತ್ತಾರೆ.
ಇದರಿಂದ ಸಲ ಪಡೆದ ಕೆಲವು ವಿದ್ಯಾರ್ಥಿಗಳು ಮತ್ತು ಯುವಕರು ಮನನೊಂದು, ಮಾನ ಮರ್ಯಾದೆಗೆ ಹೆದರಿ ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ರಾಜ್ಯದಲ್ಲಿ ಕೇಳಿ ಬರುತ್ತಿವೆ ಹಾಗೂ ಅವರ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡು, ನಾನಾ ರೀತಿಯಲ್ಲಿ ಪೀಡಿಸಲು ಶುರು ಮಾಡುತ್ತಾರೆ ಉದಾಹರಣೆಗೆ ಸಾಲಗಾರನ ಮನೆ ಬಳಿ ಹೋಗಿ ಗಲಾಟೆ ಮಾಡುವುದು, ಸಾಲಗಾರನ ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಕರೆ ಮಾಡಿ,ಮೆಸೆಜ್ ಮಾಡಿ ಸುಳ್ಳು ಮತ್ತು ಅವಹೇಳನಕಾರಿ ಮಾತುಗಳನ್ನು ಬಿತ್ತರಿಸುವುದು ಹಾಗೂ ಅಸಭ್ಯವಾಗಿ ವರ್ತಿಸುವುದು ಹಾಗೂ ಕೆಟ್ಟ ಮಾತುಗಳಿಂದ ನಿಂದಿಸುವ ಕೆಲಸವನ್ನು ಮಾಡುತ್ತಾರೆ, ಇದರಿಂದ ಸಾಲ ಪಡೆದ ಕೆಲವು ವಿದ್ಯಾರ್ಥಿಗಳು ಮತ್ತು ಯುವಕರು ಮನನೊಂದು, ಮಾನ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ರಾಜ್ಯದಲ್ಲಿ ಕೇಳಿ ಬರುತ್ತಿದೆ, ಸಣ್ಣ ಮೊತ್ತದ ಹಣಕ್ಕೆ ಕೈ ಚಾಚಿ, ಮತ್ತೆ ಮರು ಪಾವತಿ ಮಾಡಲಾಗದ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡರೆ, ಅವರ ಭವಿಷ್ಯವು ಹಾಳಾಗುತ್ತದೆ ಇದರಿಂದ ಅವರ ತಂದೆ ತಾಯಿಗಳಿಗೆ ತುಂಬಲಾಗದ ನಷ್ಟವಾಗುತ್ತದೆ, ಇದನ್ನು ಹೇಗಾದರೂ ಮಾಡಿ ಕಡಿವಾಣ ಹಾಕಬೇಕು ಎಂಬ ನಿರ್ಣಯದಿಂದ ಹಾಸನದ ಯುವಕ ವರುಣ್ ಚಕ್ರವರ್ತಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾನೆ, ವರುಣ್ ತಾನು ಕಣ್ಣಾರೆ ಕಂಡ ಸನ್ನಿವೇಶಗಳನ್ನು ವಿವರವಾಗಿ ಹೇಳಿ ಕೊಂಡಿದ್ದಾರೆ, ಮತ್ತು ಲೋನ್ ಆಪ್ ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಸಂಪೂರ್ಣವಾಗಿ ವಿವರಿಸಿದ್ದಾರೆ, ವರುಣ್ ಬರೆದ ಪತ್ರ ಮತ್ತು ಪತ್ರದಲ್ಲಿ ಇರುವ ಪೂರ್ತಿ ವಿವರಣೆ ಪೂರ್ತಿ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಈ ವಿಚಾರದ ಬಗ್ಗೆ ತಿಳಿಸಿ ಅದಕ್ಕೂ ಮುನ್ನ ಈ ಫೇಕ್ ಲೋನ್ ಆಪ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಕೆಲವು ಚೀನಾ ಲೋನ್ ಆಪ್ ಗಳು ಮೊಬೈಲ್ ಆಪ್ ಗಳ ಮೂಲಕ ಅಮಾಯಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಲೋನ್ ನೀಡುತ್ತಿದ್ದು ಕೆಲವು ಲೋನ್ ಆ್ಯಪ್ ಲೋನ್ ಆಪ್ ಕಿರುಕುಳಕ್ಕೆ ಹೆದರಿ ಹಲವಾರು ಜನರು ಆತ್ಮಹತ್ಯೆಗೆ ಮುಂದಾಗುತ್ತಿರುವುದು ವಿದ್ಯಾರ್ಥಿಗಳಿಂದ ಯುವಕ ವರುಣ್ ಚಕ್ರವರ್ತಿ ಅವರ ಗಮನಕ್ಕೆ ದೂರು ಬಂದಿದ್ದು ಚೀನಾ ಲೋನ್ ಆಪ್ ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಹಾಗೂ ಆ್ಯಪ್ ಗಳ ಕಿರುಕುಳವನ್ನು ನಿಲ್ಲಿಸಲು ಹಾಗೂ ಸಾರ್ವಜನಿಕರಿಗೆ ರಕ್ಷಣೆಯ ಅಭಯ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ.
ಇಂತಹ ಲೋನ್ ಆ್ಯಪ್ ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರಗಿಸಬೇಕು ಈ ಲೋನ್ ಆ್ಯಪ್ ಗಳು ಸಾಲಗಾರರ ಮೊಬೈಲ್, ದೂರವಾಣಿ ಸಂಪರ್ಕ ಸಂಖ್ಯೆ, ಆಧಾರ್ ಕಾರ್ಡ್, ಪಾನ್ ಕಾರ್ಡ್ ವಿವರ ಆಧರಿಸಿ ಅವರ ವೈಯಕ್ತಿಕ ಡೇಟಾ ಕದ್ದು ಅಶ್ಲೀಲ ರೂಪಕ್ಕೆ ತಿರುಚಿ ಬ್ಲಾಕ್ ಮೇಲ್ ಮಾಡುವ ಜಾಲಗಳ ವಿರುದ್ಧ ಹಾಗೂ ಸಾಲ ಮಂಜೂರು ಮಾಡುವಾಗ ಸಾಲದ ಅಪ್ಲಿಕೇಶನ್ ಕಂಪನಿಗಳು ಸಾಲಗಾರರಿಗೆ ಗೊತ್ತಾಗದಂತೆ ಅವರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು.
ವಿಫಲವಾದರೆ ಈ ಲೋನ್ ಅಪ್ಲಿಕೇಶನ್ ಕಂಪನಿಗಳು ಪೀಡಿಸಲು ಅವರ ವೈಯಕ್ತಿಕ ಮಾಹಿತಿಯನ್ನು ಬಳಸುತ್ತಿವೆ ಪ್ರತಿ ನಿತ್ಯ ನೂರಾರು ಜನರು ಇಂತಹ ಲೋನ್ ಆಪ್ ಗಳಿಂದ ಸಾಲ ಪಡೆದು ಸಮಸ್ಯೆಗೆ ಸಿಲುಕುತ್ತಿದ್ದಾರೆ ಸಾಲಗಾರರು ಬಡ್ಡಿಯ ಸಮೇತ ಸಾಲದ ಹಣವನ್ನು ಕಟ್ಟಿದರೂ ಕೂಡಾ ಲೋನ್ ಆ್ಯಪ್ ಅಪ್ಲಿಕೇಶನ್ ಕಂಪನಿಗಳು ಮಾರ್ಪಿಂಗ್ ಸಹಾಯದಿಂದ ಸಾಲಗಾರರನ್ನು ಬೆದರಿಸಿ ಸುಲಿಗೆ ಮಾಡುತ್ತಿವೆ ಅಮಾಯಕ ಸಾಲಗಾರರು ಮಾನಕ್ಕೆ ಅಂಜಿ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ.
ಹಾಗೂ ಈ ಆಪ್ ಗಳು ವಿಷ ಇದ್ದಂತೆ ಎಂದು ಜನಗಳು ಅರಿತಿರಬೇಕು ಸಾರ್ವಜನಿಕರಿಗೆ ಯಾವುದೇ ದಾಖಲೆ ಪತ್ರಗಳು ಇಲ್ಲದೆ ಸುಲಭವಾಗಿ ಸಾಲ ನೀಡುವುದರಿಂದ ಜನರು ಇಂತಹ ಲೋನ್ ಆ್ಯಪ್ ಗಳ ಬಲೆಗೆ ಬೀಳುತ್ತಿದ್ದಾರೆ ಕರ್ನಾಟಕದ ಜನತೆಯ ಪರವಾಗಿ ಇವುಗಳ ನಿಷೇಧದ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಮಾನವ ಹಕ್ಕು ಆಯೋಗದ ಹಾಸನ ಜಿಲ್ಲಾಧ್ಯಕ್ಷರು ವರುಣ್ ಚಕ್ರವರ್ತಿ ಅವರು ಮನವಿ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ. ಯುವಕರೇ ಇದರ ಆಮಿಷಕ್ಕೆ ಯಾರೂ ಬಲಿಯಾಗಬಾರದು ಯಾವುದೇ ಸಣ್ಣ ಸಮಸ್ಯೆಯನ್ನು ಸರಿ ಮಾಡಲು ದೊಡ್ಡ ಸಮಸ್ಯೆ ಮಾಡಿಕೊಳ್ಳುವಿರಿ ದಯವಿಟ್ಟು ಇದರ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಂದಿನ ಪೀಳಿಗೆಗಳ ಉಜ್ವಲ ಭವಿಷ್ಯಕಾಗಿ ಈ ಸಾಕಾಗಿ ಲೋನ್ ಆಪ್ ಗಳನ್ನು ನಿಷೇಧ ಮಾಡಬೇಕಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಮಾನವ ಹಕ್ಕು ಅಯೋಗದ ಹಾಸನ ಜಿಲ್ಲಾ ಅಧ್ಯಕ್ಷರು ವರುಣ್ ಚಕ್ರವರ್ತಿ ಮನವಿ ಮಾಡಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ