ಸಂಕ್ರಾಂತಿ ಹಬ್ಬ ಸಂಭ್ರಮದ ಹಬ್ಬ
ಎಳ್ಳುಬೆಲ್ಲ ಸೇವಿಸಿ ಸಂತಸದಿ ಸವಿ ಮಾತನಾಡುತ
ಕಹಿ ನೆನಪುಗಳ ಮರೆಯುತ
ಸಿಹಿ ಕನಸುಗಳ ತೋರುವ ಹಬ್ಬ
ಮನೆಯಂಗಳದಿ ನಗುತಿಹ ರಂಗೋಲಿ
ತಳಿರು ತೋರಣದಿ ಸಿಂಗರಿಸುವ ಹಬ್ಬ
ರೈತನು ಫಸಲಿಗೆ ಭಕ್ತಿಯಿಂದ ನಮಿಸಿ
ಭೂತಾಯಿಯ ಸ್ಮರಣೆ ಮಾಡುವ ಹಬ್ಬ
ಮನೆ ಮನೆಗಳಿಗೆ ಎಳ್ಳುಬೆಲ್ಲ ಹಂಚಿ
ಸಂಬಂಧಗಳ ಗಟ್ಟಿಗೊಳಿಸೊ ಹಬ್ಬ
ರೈತನು ರಾಸುಗಳನು ಸಿಂಗರಿಸುತ
ರಾಶಿಮಾಡಿ ಸಿಹಿ ಉನಬಡಿಸುವ ಹಬ್ಬ
ಸಂಕ್ರಾಂತಿಯು ಸಮಾನತೆಯ ಸಾರುತ
ಹೊಸತನದ ಕಳೆ ತುಂಬುವ ಹಬ್ಬ
ಜನಪದ ಸೊಗಡಲಿ ಜಗಮಗಿಸೊ ಹಬ್ಬ
ಎಲ್ಲರ ಬಾಳನು ಬೆಳಗುವ ಸುಗ್ಗಿಯ ಹಿಗ್ಗಿನ ಹಬ್ಬ
- ಕುಮಾರಿ ರೇಣುಕಾ ಎಂ
