ಉತ್ತರ ಕನ್ನಡ: ಮುಂಡಗೋಡ ನಗರದಲ್ಲಿರುವ ಬ್ಯಾಂಕ್ ,ಫೈನಾನ್ಸ್ ಹಾಗೂ ಸೊಸೈಟಿಗಳ ರಕ್ಷಣೆ ದೃಷ್ಟಿಯಿಂದ ಶುಕ್ರವಾರ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಬ್ಯಾಂಕಿಂಗ್ ಸಿಬ್ಬಂದಿಗಳ ಸಭೆಯನ್ನು ಕರೆಯಲಾಗಿತ್ತು.
ಈ ವೇಳೆ ಬ್ಯಾಂಕಿನಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಕೈಗೊಳ್ಳಬೇಕಾದ ಕ್ರಮಗಳು, ಸಿಸಿಟಿವಿ ಗಳ ಕಡ್ಡಾಯ ಅಳವಡಿಕೆ , ಎಟಿಎಮ್ ಗಳಲ್ಲಿ ಹಣ ತುಂಬುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳನ್ನು ಮತ್ತು ಸುರಕ್ಷಿತ ರಕ್ಷಣಾ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಈ ವೇಳೆ ಸಿಪಿಐ ರಂಗನಾಥ್ ನೀಲಮ್ಮನವರ, ಪಿಎಸ್ಐ ಪರಶುರಾಮ್ ಮಿರ್ಜಗಿ,
ಕ್ರೈಂ ವಿಭಾಗದ ಪಿಎಸ್ಐ ಹನುಮಂತ ಕುಡ್ಗಂಟಿ ಉಪಸ್ಥಿತರಿದ್ದು ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ಸಭೆ ವೇಳೆ ರಾಷ್ಟ್ರೀಕೃತ ಬ್ಯಾಂಕುಗಳು, ಫೈನಾನ್ಸ್ ಗಳು , ಸೊಸೈಟಿಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಹಾಜರಿದ್ದರು.
