ಚಾಮರಾಜನಗರ/ ಗುಂಡ್ಲುಪೇಟೆ :
ಕರ್ನಾಟಕ ಕಾವಲು ಪಡೆಯ ವತಿಯಿಂದ ಭಾರತೀಯ ಸೇನಾ ದಿನದ ಅಂಗವಾಗಿ ಗುಂಡ್ಲುಪೇಟೆ ಪಟ್ಟಣದಲ್ಲಿ ನಿವೃತ್ತ ಸೇನಾ ಯೋಧರಾದ ಜಾವೀದ್ ರವರಿಗೆ ಗೌರವ ಅಭಿನಂದನೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಯೋಧರು ದೇಶಕ್ಕಾಗಿ ಸೇವೆ ಸಲ್ಲಿಸಿರುವುದರ ಬಗ್ಗೆ ಹಲವು ವಿಚಾರ ತಿಳಿಸಿದರು.
ಇದೇ ವೇಳೆ ನಾಟಕ ಭಾರ್ಗವ ಕೆಂಪರಾಜು, ಕನ್ನಡಪರ ಹಿರಿಯ ಹೋರಾಟಗಾರರಾದ ಬ್ರಹ್ಮಾನಂದ್, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರಾದ ಮಾಡ್ರಹಳ್ಳಿ ಸುಭಾಷ್, ಸಾಹಿತಿ ಕಾಳಿಂಗಸ್ವಾಮಿ ಮಾತನಾಡಿ ಕಾವಲು ಪಡೆಯ ಕಾರ್ಯವೈಖರಿಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ರಾಘವಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆರ್.ಡಿ.ಉಲ್ಲಾಸ್, ನಿವೃತ್ತ ಶಿಕ್ಷಕಿ ಲಕ್ಷ್ಮಿ ಪ್ರೇಮ್ ಕುಮಾರ್,ಶಿಕ್ಷಕಿ ಸುಮಾ ಭಜರಂಗಿ, ಜಿಲ್ಲಾ ಕಾರ್ಯಧ್ಯಕ್ಷರಾದ ಅಬ್ದುಲ್ ರಷೀದ್, ತಾಲ್ಲೂಕು ಗೌರವಾಧ್ಯಕ್ಷರಾದ ರಾಮೇಗೌಡ, ಸಲಹೆಗಾರರಾದ ಎಸ್.ಮುಬಾರಕ್,ಟೌನ್ ಉಪಾಧ್ಯಕ್ಷರಾದ ಸಾದಿಕ್ ಪಾಷಾ, ಸಂಚಾಲಕರಾದ ಮಿಮಿಕ್ರಿರಾಜು, ಚಿನ್ನಸ್ವಾಮಿ, ಮನಸ್, ಮದ್ದಯ್ಯನ ಹುಂಡಿ ನಾಗರಾಜ್ ಸೇರಿದಂತೆ ಇತರರು ಹಾಜರಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್
