
ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಬೇಡಿದ ವರವನ್ನು ಕೊಡುವ ತಾಯಿ ಎಂದೇ ಪ್ರಸಿದ್ಧಿ ಪಡೆದ ಆದಿಶಕ್ತಿ ಶ್ರೀ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ (13-01-2025) ರ ಬನದ ಹುಣ್ಣಿಮೆ ದಿನದಂದು ಬೆಳಿಗ್ಗೆ ಶ್ರೀ ಬನಶಂಕರಿ ದೇವಿಗೆ ವಿಶೇಷ ಅಲಂಕಾರ ಪೂಜೆ, ಅಭಿಷೇಕ ಮಾಡಲಾಯಿತು.
ಮಧ್ಯಾಹ್ನ 3 ಗಂಟೆಗೆ ಶ್ರೀ ಬನಶಂಕರಿ ದೇವಿಗೆ 5 ಮನೆಗಳಿಂದ ಕುಂಭ ಹಾಗೂ ತನಾರತಿ, ಡೊಳ್ಳು, ಮೆರವಣಿಗೆ ಮೂಲಕ ದೇವಿಗೆ ಕುಂಭ ಅರ್ಪಿಸಿದ ನಂತರ ಪುರವಂತರ ಕುಣಿತದ ಜೊತೆ ಊರಿನ ಪ್ರಮುಖರಾದ ಶ್ರೀ ರಾಮಲಿಂಗ ರೆಡ್ಡಿ ಬಿ. ದೇಶಮುಖ ಅವರ ಮನೆಯಿಂದ ದೇವಿಯ ರಥದ ಕಳಸ ಹಾಗೂ ಭೀಮರಾವ್ ಎನ್. ಪಾಟೀಲ್ ಅವರ ಮನೆಯಿಂದ ದೇವಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೋಡ್ಲಿಯ ಹಿರೇಮಠದ ಪೀಠಾಧಿಪತಿ ಬಸವಲಿಂಗ ಶಿವಾಚಾರ್ಯರು, ವೇದಮೂರ್ತಿ ಶಂಕ್ರಯ್ಯ ಸ್ವಾಮಿ ಯಲಮಡಗಿ ಇವರ ಸಮ್ಮುಖದಲ್ಲಿ ದೇವಿಯ ರಥೋತ್ಸವವು ಬಾಜಾ ಭಜಂತ್ರಿ, ಹಲಗೆ ವಾದ್ಯಗಳೊಂದಿಗೆ ಜೈಕಾರ ಕೂಗುತ್ತಾ ಭಕ್ತರು ತೇರು ಎಳೆದು ಭಕ್ತಿ ಭಾವ ಮೆರೆದರು.
ಬಾದಾಮಿ ಬನಶಂಕರಿ ಮಾತಾಕಿ ಜೈಕಾರ ಘೋಷಣೆ ಕೂಗುತ್ತಾ ಮೈದಾನದಲ್ಲಿದ್ದ ಅಪಾರ ಭಕ್ತರು ಉತ್ತತ್ತಿ, ಬಾಳೆಹಣ್ಣು ತೇರಿನತ್ತ ತೂರಿ ನಮಸ್ಕರಿಸಿದರು.
ಪ್ರಮುಖರಾದ ಗ್ರಾಮ ಪಂಚಾಯತ್ ಅಧ್ಯಕ್ಷರು ಗೀತಾ ಪ್ರೇಮ್ ಕುಮಾರ್ ಯಲ್ಮಡಿಗಿ , ಸಿದ್ರಾಮಯ್ಯ ಸ್ವಾಮಿ ಸಪಾಯಿಗೋಳ, ಮಲ್ಲಿನಾಥ್ ಕೊಲಕುಂದಿ, ಅಣ್ಣಾರಾವ್ ಪೆದ್ದಿ, ಶಬ್ಬೀರ್ ಮಿಯಾ ಸೌದಾಗರ, ಚಂದಪ್ಪ ಆರ್ ಮೊಘ, ಅಣ್ಣಾರಾವ್ ಅರಳಿ, ಮಾರುತಿ ಜಮಾದಾರ್, ಶಿವಕುಮಾರ್ ಸುಲೇಪೇಟ, ರಮೇಶ್ ನಲವಾಡ, ಸಂಜು ರೆಡ್ಡಿ ಹೆಡಳ್ಳಿ, ಶರಣು ಬುಬಲಿ, ಜಗನಾಥ್ ಮೊಘ, ಮಲ್ಲಪ್ಪ ಚಿಂತ್ ಕುಂಟ, ಮಲ್ಲಪ್ಪ ಚೆನ್ನೂರ್, ದೇವಾಂಗ ಸಮಾಜದ ಅಧ್ಯಕ್ಷರಾದ ಹಣಮಂತರಾವ್ ಆರ್ ಹಳ್ಳಿ, ರಾಮಣ್ಣ ಎಚ್ ಪಾಟೀಲ್, ಬಂಡಪ್ಪ ಕಿಟ್ಟದ, ರಾಘವೇಂದ್ರ ಮುಚಟ್ಟಿ, ಭೀಮರಾವ್ ಎನ್ ಪಾಟೀಲ್, ಸಿದ್ರಾಮಪ್ಪ ಹಳ್ಳಿ, ಶಂಕರಾವ್ ಹಳ್ಳಿ, ರಾಚಪ್ಪ ಎನ್. ಪಾಟೀಲ್, ಸಂತೋಷ್ ಹಳ್ಳಿ, ರಮೇಶ್ ಮುಚ್ಚಟ್ಟಿ, ಗುರಪ್ಪ ಹಳ್ಳಿ, ರಮೇಶ್ ಕಣ್ಣಿ, ವಿಠಲ್ ಮುಚ್ಚಟ್ಟಿ, ಮಲ್ಲಪ್ಪ ಹಳ್ಳಿ, ನಾಗರಾಜ್ ಗೋಟೂರ, ವಿಠಲ ಅಡಕಿ, ರೋಹಿತ್ ಅಡಕಿ, ಶ್ರೀಮಂತ ಗಂಜಿ, ಮಲ್ಲಿಕಾರ್ಜುನ ಮುಚ್ಚಟ್ಟಿ, ಲಕ್ಷ್ಮಣ ಆಡಕಿ, ಹನುಮಂತ್ ಆಡಕಿ, ಶಂಕರ್ ಕಣ್ಣಿ, ಅಶೋಕ್ ದಸೂರ, ಧನರಾಜ ಅಡಕಿ, ಚಂದ್ರಕಾಂತ್ ಮುಚಟ್ಟಿ, ದಶರಥ ಮುಚಟ್ಟಿ, ಶಂಕರ್ ಆರ್ ಪಾಟೀಲ್, ನಾಗರಾಜ್ ಆಡಕಿ, ಶಂಕರ್ ಆಡಕಿ, ಅಖಿಲೇಶ್ ದಸುರ್, ವಿಕಾಸ್ ಪಾಟೀಲ್, ವಿನಾಯಕ ಹಳ್ಳಿ, ವಿಠಲ್ ಹಳ್ಳಿ, ಸಿದ್ದಪ್ಪ ಹಳ್ಳಿ, ಸುಮಿತ್ ಹಳ್ಳಿ, ವಿಷ್ಣು ಪಾಟೀಲ್, ಚೇತನ್ ಗಂಜಿ, ಶಿವು ಕಣ್ಣಿ, ಹಣಮಂತ್ ಕಿಟ್ಟದ್, ಸುನಿಲ್ ಕೋಟಿ, ರಾಕೇಶ್ ಹಳ್ಳಿ,ಸೇರಿದಂತೆ ಕೋಡ್ಲಿ ಗ್ರಾಮದ ದೇವಿಯ ಭಕ್ತರು ಒಳಗೊಂಡು ಸುತ್ತಮುತ್ತಲಿನ ಭಕ್ತಾದಿಗಳು ಭಾಗವಹಿಸಿದ್ದರು.
ಪಿ. ಎಸ್. ಐ ಗಂಗಮ್ಮ ಇವರ ನೇತೃತ್ವದಲ್ಲಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.
ವರದಿ : ಚಂದ್ರಶೇಖರ್ ಆರ್. ಪಾಟೀಲ್
