ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರ ಕಾರ್ಯ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಕಾರ್ಡ್ ವಿತರಣೆ ಕಾರ್ಯಕ್ರಮ ನಡೆಯಿತು .
ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಲಯ ಮೇಲ್ವಿಚಾರಕರಾದ ಶಿವನಾಯ್ಕ ಅವರಿಂದ
ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಾದ ರೈತರಿಗೆ ಕಿಸಾನ್ ಮಾನಧನ್, ವ್ಯಾಪಾರಿಗಳಿಗೆ ಲಘು ವ್ಯಾಪಾರಿ ಮಾನಧಾನ್ ಮತ್ತು ಕೂಲಿ ಕಾರ್ಮಿಕರಿಗೆ ಶ್ರಮಯೋಗಿ ಮಾನಧನ್ ಗಳ ಕುರಿತು ಮಾಹಿತಿ ನೀಡಿಲಾಯಿತು.
ಈ ಕಾರ್ಯಕ್ರಮದಲ್ಲಿ ಕಾರ್ಡ್ ವಿತರಿಸಲಾಯಿತು ಭಾರತದಲ್ಲಿ ಪ್ರತಿಯೊಬ್ಬರಿಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪುವ ಸಂಕಲ್ಪದಿಂದ ಮೋದಿಯವರು ಮಾನ್ ಧನ್ ಯೋಜನೆ ಕಾರ್ಯಕ್ರಮವನ್ನು ಸಿ ಎಸ್ ಸಿ ಸೇವಾ ಕೇಂದ್ರದಿಂದ ಆಯೋಜಿಸಲಾಗಿದ್ದು ಪ್ರತಿ ಮನೆಮನೆಗೂ ಮುಟ್ಟುವಂತ ಕೆಲಸವನ್ನು ಶ್ರೀ ಧರ್ಮಸ್ಥಳ ಗ್ರಾಮೀಣ ಸೇವಾ ಸಂಸ್ಥೆ ಮಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ಡಣಾಪುರ ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ ವಿಶಾಲಕ್ಷಮ್ಮ ಹಾಗೂ ವಿಎಲ್ ಸಿ ಬಸವನಗೌಡ ಉಪಸ್ಥಿತರಿದ್ದರು.
