ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರ್ನಾಟಕ ಏಕೀಕರಣ ರೂವಾರಿ ಅಂದಾನಪ್ಪ ದೊಡ್ಡಮೇಟಿಯವರ ಅವರ ಗ್ರಾಮದಲ್ಲಿ ಕನ್ನಡ ಸಂಭ್ರಮ

ಗದಗ: ಜಕ್ಕಲಿಯಲ್ಲಿ ನುಡಿ ಜಾತ್ರೆಯ ಸಂಭ್ರಮೋತ್ಸವ ಸಾಹಿತ್ಯ ಸಮ್ಮೇಳನದ ತೇರಿಗೆ ಅದ್ಧೂರಿ ಚಾಲನೆ, ವಾದ್ಯ ಮೇಳಗಳಿಂದ ಮಾರ್ದನಿಸಿದ ಜಕ್ಕಲಿ ಗ್ರಾಮ.

ಕನ್ನಡಕ್ಕಾಗಿ, ಕರ್ನಾಟಕ ಏಕೀಕರಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ಅಂದಾನಪ್ಪ ದೊಡ್ಡಮೇಟಿ ಅವರ ಜನ್ಮ ಸ್ಥಳ ಜಕ್ಕಲಿಯಲ್ಲಿ ಗದಗ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಥಕ್ಕೆ ಭಾನುವಾರ ರೋಣ ಮತಕ್ಷೇತ್ರದ ಶಾಸಕ ಜಿ ಎಸ್ ಪಾಟೀಲ್ ಚಾಲನೆ.

ತದ ನಂತರ ಮಾತನಾಡಿದ ಅವರು ಕನ್ನಡಕ್ಕಾಗಿ ಶ್ರಮಿಸಿದ ಏಕೀಕರಣದ ರೂವಾರಿ ಧೀಮಂತ ಅಂದಾನಪ್ಪ ದೊಡ್ಡಮೇಟಿಯವರ ಮನೆಯಿಂದ ಸಮ್ಮೇಳನದ ಜ್ಯೋತಿ ಹಾಗೂ ಭುವನೇಶ್ವರಿ ದೇವಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ಸಿಕ್ಕಿರುವುದು ಉತ್ತಮ ಬೆಳವಣಿಗೆಯಾಗಿದೆ.
ಈ ಮೂಲಕ ಕನ್ನಡ ಕಟ್ಟಾಳುವಿನ ಕುರಿತು ಹಾಗೂ ಭುವನೇಶ್ವರಿಯ ಕುರಿತು ಈಗಿನ ಯುವ ಪೀಳಿಗೆಗೆ ತಿಳಿಯಲಿದೆ ಎಂದು ರೋಣ ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಈ ಹಿನ್ನೆಲೆಯಲ್ಲಿ ಜಕ್ಕಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಸ್ತೆ ಉದ್ದಕ್ಕೂ ಕಂಗೊಳಿಸುವ ರಂಗೋಲಿ ಎಲ್ಲೆಂದರಲ್ಲಿ ಕನ್ನಡದ ಬಾವುಟಗಳು ರಾರಾಜಿಸುತ್ತಿದ್ದು, ಗ್ರಾಮದುದ್ದಕ್ಕೂ ತಳಿರು ತೋರಣಗಳಿಂದ ಅಲಂಕೃತಗೊಂಡಿದೆ. ಪಂಚಾಯಿತಿ ಆವರಣ, ದೊಡ್ಡಮೇಟಿ ಅವರ ಮನೆಯ ಮುಂಭಾಗದಿಂದ ಅನ್ನದಾನೇಶ್ವರ ಮಠದವರೆಗೆ ತೆಂಗಿನ ಗರಿ, ಕನ್ನಡದ ಧ್ವಜಗಳು ಹಾರಾಡುತ್ತಿದ್ದವು. ರಥಬೀದಿಯುದ್ದಕ್ಕೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ
ಕಾರ್ಯಕರ್ತೆಯರು ರಂಗೋಲಿಯಿಂದ ಶೃಂಗರಿಸಿದ್ದರು. ಹೀಗೆ ಹತ್ತು ಹಲವಾರು ವೈಶಿಷ್ಟ್ಯಗಳೊಂದಿಗೆ ಭಾನುವಾರ ಜಕ್ಕಲಿ ಗ್ರಾಮ ಸಂಪೂರ್ಣ ಕನ್ನಡಮಯವಾಗಿತ್ತು.

ವಾದ್ಯಮೇಳಗಳು: ಮೆರವಣಿಗೆಯುದ್ದಕ್ಕೂ ಕೊಣ್ಣೂರಿನ ಬೊಂಬೆ ವೇಷಧಾರಿಗಳು ನೃತ್ಯ ಮಾಡುತ್ತಾ ಕನ್ನಡದ ಮನಸ್ಸುಗಳನ್ನು ತಣಿಸಿದರು ಹೊಸಳ್ಳಿಯ ಮಹಿಳಾ ಹಾಗೂ ಪುರುಷರ ಡೊಳ್ಳಿನ ತಂಡಗಳು ಹುಬ್ಬೇರಿಸುವಂತೆ ನೃತ್ಯದ ಜೊತೆ ಡೊಳ್ಳು ನುಡಿಸಿದರು ,ಜೊತೆಗೆ ಕರಡಿ ಮಜಲು, ಜಾಂಜ್ ಮೇಳ, ಶಾಲಾ ಮಕ್ಕಳಿಂದ ಡ್ರಮ್ ಸೆಟ್ ಹೀಗೆ ಹತ್ತು ಹಲವಾರು ವಾದ್ಯಮೇಳಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದವು.

ವಿಶೇಷವಾಗಿ ಹಿರಿಯ ಕಾಲದ ಅಲಂಕೃತ ಚಕ್ಕಡಿ… ಕನ್ನಡಾಭಿಮಾನ ಎತ್ತಿ ಹಿಡಿಯಲು ರೈತರಾದ ಯಲ್ಲಪ್ಪ ಮಡಿವಾಳರ. ಇಬ್ರಾಹಿಂ ಸಾಹೇಬ್ ಹದ್ಲಿ.
ಬಸವರಾಜ್ ಕೊಡಿಕೊಪ್ಪ ಇನ್ನು ಅನೇಕರು ಚಕ್ಕಡಿಗಳನ್ನು ಕನ್ನಡ ಧ್ವಜದಿಂದ ಅಲಂಕರಿಸಿ ಜಗಜಗಿಸುವಂತೆ ತಾವು ಕೂಡ ತಲೆ ಮೇಲೆ ರುಮಾಲ ಧರಿಸಿ ಅದರಲ್ಲಿ ಮಕ್ಕಳನ್ನು ಕುಳ್ಳರಿಸಿಕೊಂಡು ರಥವನ್ನು ಬೀದಿಯುದ್ದಕ್ಕೂ ಸಾಗಿದ ರೈತರ ಕನ್ನಡ ಪ್ರೇಮ ನೋಡುಗರ ಗಮನ ಸೆಳೆಯಿತು.

ಇದೆ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕನ್ನಡಕ್ಕಾಗಿ ಹೋರಾಟ ಮಾಡಿದ ಹಲವಾರು ಮಹನೀಯರ ವೇಷಭೂಷಣದಲ್ಲಿ ಪ್ರದರ್ಶನ ತೋರ್ಪಡಿಸುವ ಮೂಲಕ ಜನ ಮನ‌ ಸೆಳೆದರು.

ದಾರಿಯುದ್ದಕ್ಕೂ ಪುಷ್ಪಾರ್ಚನೆ:
ಕನ್ನಡಪರ ಸಂಘಟನೆಗಳು ಹಾಗೂ ಗ್ರಾಮಸ್ಥರೆಲ್ಲರೂ ರಥಬೀದಿ ಯುದ್ದಕ್ಕೂ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದರು. ಮೆರವಣಿಗೆಯುದ್ದಕ್ಕೂ ಶಾಸಕರನ್ನೊಳಗೊಂಡಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಕನ್ನಡಪರ ಸಂಘಟನೆಯ ಮುಖಂಡರು,
ಕನ್ನಡಾಭಿಮಾನಿಗಳು,ಪೊಲೀಸ್ ಇಲಾಖೆಯ ಅಧಿಕಾರಿಗಳು, ತಾಲೂಕು ದಂಡಾಧಿಕಾರಿ ನಾಗರಾಜ ಕೆ., ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕಂದಕೂರು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ರೋಣ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಿಥುನ್ ಜಿ.ಪಾಟೀಲ, ರವೀಂದ್ರನಾಥ್ ದೊಡ್ಡಮೇಟಿ, ಎಚ್‌.ಎಸ್‌.ಸೊಂಪೂರ. ಎಂ.ಎಸ್. ದಡೇಸೂರಮಠ, ಮಲ್ಲಿಕಾರ್ಜುನ್ ಮೇಟಿ, ತಾಲ್ಲೂಕು ಘಟಕದ ಕಸಾಪ ಅಧ್ಯಕ್ಷ ಎ.ಪಿ.ಗಾಣಗೇರ, ರೋಣ ತಾಲ್ಲೂಕು ಘಟಕದ ಕಸಾಪ ಅಧ್ಯಕ್ಷ ರಮಾಕಾಂತ ಕಮತಗಿ, ಎಂ.ಎಸ್.ಧಡೆಸೂರಮಠ, ಎಸ್.ಬಿ.ಹಿರೇಮಠ, ಬಸವರಾಜ ಕುರಿ, ಮೈಲಾರಪ್ಪ ವೀ. ಚಳ್ಳಮರದ, ಹನಮಂತಪ್ಪ ದ್ವಸಲ್, ಬಸವರಾಜ ತಳವಾರ, ಮುತ್ತು ಮೇಟಿ, ವೀರಭದ್ರಪ್ಪ ಗಾಣಿಗೇರ, ವಿ.ಬಿ. ಸೋಮನಕಟ್ಟಿಮಠ, ಕೆ.ಬಿ.ಧನ್ನೂರ, ರಾಜು ಸಾಂಗ್ಲಿಕರ, ಯಲ್ಲಪ್ಪ ಮಾದರ, ಫಕೀರಪ್ಪ ಮಾದರ, ಬಂದೆನವಾಜ್ ಗಡಾದ್, ಹರ್ಷವರ್ಧನ್ ದೊಡ್ಡಮೇಟಿ ಇನ್ನು ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ