ಜಾತಿ ಮತ ಪಂಥ ಎಣಿಸದ ಸಂತರು
ವಸತಿ,ಅನ್ನ ಜ್ಞಾನವ ನೀಡಿದ ದೀನರು
ಕಾಯಕವೇ ಕೈಲಾಸ ಎಂದ ದೇವರು
ಬಡವರಲ್ಲಿ ಶಿವನ ಕಂಡ ದೇವಧೂತರು.
ಆಧ್ಯಾತ್ಮಿಕ ಸಾಧನೆಯ ಶ್ರೇಷ್ಠ ನಾಯಕ
ಬಸವ ತತ್ವ ಬೀಜ ಬಿತ್ತಿ ಬೆಳೆದ ಶ್ರಮಿಕ
ಮಾನವೀಯ ಮೌಲ್ಯ ಹಂಚಿದ ಬೋಧಕ
ವಿಶ್ವವನ್ನೇ ತನ್ನೆಡೆಗೆ ಸೆಳೆದ ಶುದ್ಧ ಸಾಧಕ.
ತ್ರಿವಿಧ ದಾಸೋಹದ ದೇವ ಮಾನವ
ಪಡೆದು ನಡೆದಾಡುವ ದೇವ ನಾಮವ
ಹಚ್ಚಿದರು ಬಡ ಜನರ ಬಾಳಿನ ದೀಪವ
ನೀಗಿಸಿದರು ಲಕ್ಷಾಂತರ ಭಕ್ತರ ಹಸಿವ.
ಅರಿತು ಇಷ್ಟ ಲಿಂಗ ಪೂಜೆಯ ಮಹತ್ವ
ಪಡೆದರು ಶಿವನ ಒಲಿಸಿಕೊಳ್ಳುವ ಸತ್ವ
ಜಗಕೆಲ್ಲಾ ನೀಡಿದರು ಕಾಯಕದ ತತ್ವ
ಶಿವನೇ ಮೆಚ್ಚಿ ಬೆರಗಾದ ಇವರ ವ್ಯಕ್ತಿತ್ವ.
-ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
(ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ: 9740199896.
