ಕಲಬುರಗಿ/ ಜೇವರ್ಗಿ: ತಾಲೂಕಿನ ನರಿಬೋಳ ಗ್ರಾಮದಲ್ಲಿನ ತೋಟದ ಆವರಣದಲ್ಲಿ ನಿನ್ನೆ ಮತ್ತು ಇಂದು ಹುಟ್ಟು ಹೋರಾಟಗಾರಾದ ದಿ: ಶಿವಲಿಂಗಪ್ಪಗೌಡ ಪಾಟೀಲ ನರಿಬೋಳ ಅವರ 20ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪ ಗೌಡ ಪಾಟೀಲ ನರಿಬೋಳ ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20 ರಂದು ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. 21 ರಂದು ಬೆಳಿಗ್ಗೆ 10 ಗಂಟೆಗೆ ನರಿಬೋಳ ತೋಟದಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ವಿಶೇಷವಾಗಿ ಈ ವರ್ಷ ಆರ್‌ಸಿಎಂನ ಕೇಂದ್ರದ ಸಹಯೋಗದೊಂದಿಗೆ ‘ಸ್ವದೇಶಿ ಬಳಸಿ ದೇಶ ಉಳಿಸಿ’ ಎಂಬ ಘೋಷ ವಾಕ್ಯದೊಂದಿಗೆ ದೈನಂದಿನ ಜೀವನದಲ್ಲಿ ಬಳಸುವ ಸಾವಯವ ಮತ್ತು ದೇಶಿ ನಿರ್ಮಿತ ವಸ್ತುಗಳ ಬಳಕೆಯ ಮಾಹಿತಿ ಜೊತೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವಿರಲಿದೆ.
ಅನುಗ್ರಹ ನೇತ್ರಾಲಯ ಕಲಬುರಗಿ ಇವರ ವತಿಯಿಂದ ನೇತ್ರ ಚಿಕಿತ್ಸಾ ಉಚಿತ ಶಿಬಿರವಿದ್ದು ಜನರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಸಂಗೀತ ಕಲಾವಿದೆ ಶೋಭಾ ಮಹಲ್ ಐನಾಪುರ ಇವರಿಂದ ಭಜನಾ ಕಾರ್ಯಕ್ರಮವಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ರಮೇಶ ವಕೀಲ, ಅಖಿಲ ಭಾರತ ವೀರಶೈವ ಸಮಾಜದ ಯಡ್ರಾಮಿ ಜೇವರ್ಗಿ ತಾಲೂಕು ಅಧ್ಯಕ್ಷ ಸಿದ್ದು ಸಾಹೂ ಅಂಗಡಿ, ಶ್ರೀಶೈಲಗೌಡ ಪಾಟೀಲ ಕರಕಿಹಳ್ಳಿ, ಸಂಗಣ್ಣಗೌಡ ರದ್ದೇವಾಡಗಿ, ದೇವು ಜನಿವಾರ, ಚಂದ್ರಕಾಂತ ಬೆಲ್ಲದ, ರವೀಂದ್ರ ಪಡಶೆಟ್ಟಿ, ರಾಜು ತಳವಾರ, ಭೀಮರಾಯ ಮಡಿವಾಳ್ವರ್ ಸುದ್ದಿಗೋಷ್ಠಿಯಲ್ಲಿದ್ದರು.
ವರದಿ: ಚಂದ್ರಶೇಖರ ಪಾಟೀಲ್
