ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ದೋರನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ೨೦೨೪ ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆಗಳನ್ನು ಹಂಚಿಕೆ ಮಾಡುವಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಹಾಗೂ ೧೫ ನೇ ಹಣಕಾಸು ಯೋಜನೆ ಹಾಗೂ ನೀರು ನಿರ್ವಹಣೆ ಅನುದಾನದಲ್ಲಿ ೨೦೨೨ ಜನವರಿಯಿಂದ ೨೦೨೪ ಡಿಸೆಂಬರ್ ವರೆಗೆ ಲಕ್ಷಾಂತರ ರೂಪಾಯಿ ಸರ್ಕಾರದ ಅನುದಾನವನ್ನು ಲೂಟಿ ಮಾಡಿದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ದೇವರಾಜ್ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆಗೊಳಪಡಿಸುವಂತೆ ದಲಿತ ಸಂರಕ್ಷ ಸಮಿತಿ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ದಿನಾಂಕ ೨೦-೦೧-೨೦೨೫ ರಂದು ದೋರನಹಳ್ಳಿ ಗ್ರಾಮ ಪಂಚಾಯತ ಮುಂದೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು. ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ದೋರನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ವಿವಿಧ ವಸತಿ ಯೋಜನೆಯಡಿ ಮನೆಗಳ ಹಂಚಿಕೆ ಮಾಡುವಲ್ಲಿ ಕಾನೂನು ಉಲ್ಲಂಘಿಸಿ ಅವ್ಯವಹಾರ ಮಾಡಿದ್ದು ಮತ್ತು ೧೫ ನೇ ಹಣಕಾಸು ಯೋಜನೆ ಹಾಗೂ ನೀರು ನಿರ್ವಹಣೆ ಅನುದಾನದಲ್ಲಿ ೨೦೨೨ ಜನವರಿಯಿಂದ ೨೦೨೪ ಡಿಸೆಂಬರ್ ವರೆಗೆ ಲಕ್ಷಾಂತರ ರೂಪಾಯಿ ಸರ್ಕಾರದ ಅನುದಾನವನ್ನು ಲೂಟಿ ಮಾಡಿದ್ದಾರೆ ಹೇಳೋರಿಲ್ಲ. ಕೇಳೊರಿಲ್ಲ.. ಮಾಡಿದ್ದೇ ಕಾರುಬಾರು ಅನ್ನೋ ಮಟ್ಟಿಗೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ತಮ್ಮ ಮನ ಬಂದಂತೆ ವೋಚರ್‌ಗಳನ್ನು ಲಗತ್ತಿಸಿ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಸಾಮಗ್ರಿಗಳ ಖರೀದಿ ಹೆಸರಿನಲ್ಲಿ ಸಾಮಗ್ರಿಯ ನೈಜ ದರಕ್ಕಿಂತ ೧೦ ಪಟ್ಟು ಹೆಚ್ಚಿನ ದರವನ್ನು ಸಾಮಗ್ರಿಗೆ ದಾಖಲಿಸಿ ಸಾರ್ವಜನಿಕ ಪಾರದರ್ಶಕ ಆಡಳಿತ ವ್ಯವಸ್ಥೆಯ ಕಾಯ್ದೆಯನ್ನೂ ಪಾಲಿಸಿರುವುದಿಲ್ಲ, ಅಲ್ಲದೇ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳದೆ ಕಾಮಗಾರಿಗಳನ್ನು ಮಾಡಿದ್ದೇವೆ ಎಂದು ಸುಳ್ಳು ದಾಖಲಾತಿಗಳನ್ನು ಮತ್ತು ಛಾಯಾ ಚಿತ್ರಗಳನ್ನು ಲಗತ್ತಿಸಿ ಲಕ್ಷಾಂತರ ರೂಪಾಯಿ ಹಣವನ್ನು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಂತ್ರಿಕ ಸಹಾಯಕರು ಸೇರಿಕೊಂಡು ಲೂಟಿ ಮಾಡಿದ್ದಾರೆ. ಇನ್ನೂ ವಿಶೇಷವಾಗಿ ದೋರನಹಳ್ಳಿ ಗ್ರಾಮ ಪಂಚಾಯತಿಗೆ ೪೦೦ ಕ್ಕೂ ಹೆಚ್ಚು ಮನೆಗಳು ೨೦೨೪ ನೇ ಸಾಲಿನಲ್ಲಿ ಈ ವರ್ಷ ಡಿಸೆಂಬರ್ ಅವಧಿಯಲ್ಲಿ ಮಂಜೂರಾಗಿದ್ದು ಈ ಮನೆಗಳನ್ನು ಹಣ ಕೊಟ್ಟವರಿಗೆ ಕಮಿಷನ್ ನೀಡಿದವರಿಗೆ ಕೊಡುವ ವ್ಯವಸ್ಥೆ ನಡೆಯುತ್ತಿದೆ. ನಿಯಮಾನುಸಾರವಾಗಿ ವಾರ್ಡ್ ಸಭೆ ಮಾಡಿ ಗ್ರಾಮ ಸಭೆ ಮಾಡಿ ವಸತಿ ರಹಿತ ಅರ್ಹ ಕುಟುಂಬಗಳನ್ನು ಗುರುತಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಹಂಚಿಕೆ ಮಾಡಬೇಕಾದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸದಸ್ಯರು ಕಮಿಷನ್ ಕೊಟ್ಟವರಿಗೆ ಮನೆ ಹಂಚಿಕೆ ಮಾಡುವ ಹುನ್ನಾರ ನಡೆದಿದೆ ಈ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಈ ಕೂಡಲೇ ಈ ಎಲ್ಲಾ ಮನೆಗಳ ಹಂಚಿಕೆಯ ಪಲಾನುಭವಿಗಳ ಪಟ್ಟಿಯನ್ನು ಕೂಲಂಕುಷವಾಗಿ ಗ್ರಾಮ ಸಭೆ ವಾರ್ಡ ಸಭೆ ವಿಡಿಯೋಗಳನ್ನು ಸೂಕ್ಷ್ಮವಾಗಿ ಕೂಲಂಕುಷವಾಗಿ ಪರಿಶೀಲಿಸಿ ತಾವುಗಳು ಅನುಮೋದನೆ ನೀಡಬೇಕು ಮತ್ತು ೧೫ ನೇ ಹಣಕಾಸು ಯೋಜನೆ ಹಾಗೂ ನೀರು ನಿರ್ವಹಣೆ ಅನುದಾನದಲ್ಲಿ ೨೦೨೨ ಜನವರಿಯಿಂದ ೨೦೨೪ ಡಿಸೆಂಬರ್ ವರೆಗೆ ಲಕ್ಷಾಂತರ ರೂಪಾಯಿ ಸರ್ಕಾರದ ಅನುದಾನವನ್ನು ಲೂಟಿ ಮಾಡಿದ್ದು ಆದ್ದರಿಂದ ಈ ಕೂಡಲೇ ಒಂದು ಉನ್ನತ ಮಟ್ಟದ ತನಿಖಾ ತಂಡವನ್ನು ನಿಯೋಜಿಸಿ ತನಿಖೆ ಮಾಡಿ ಲೂಟಿ ಮಾಡಿದ ಅಧಿಕಾರಿಗಳನ್ನು ಅಮಾನತುಗೊಳಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪ್ರತಿಭಟನೆ ಮಾಡಿ ದೂರು ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಕಸನ್ ಡಿ.ಎಸ್.ಎಸ್ ಜಿಲ್ಲಾಧ್ಯಕ್ಷರು, ಭೀಮಾಶಂಕರ ದೋಡ್ಮನಿ ಡಿ.ಎಸ್.ಎಸ್ ತಾಲೂಕ ಅಧ್ಯಕ್ಷರು, ಬಸವರಾಜ ಪೂಜಾರಿ ಜಿಲ್ಲಾ ಕಾರ್ಯದರ್ಶಿ, ಶರಣು ದೋರನಹಳ್ಳಿ, ಭಾಗಪ್ಪ ರಸ್ತಾಪುರ ಪ್ರಧಾನ ಕಾರ್ಯದರ್ಶಿ, ಭೀಮರಾಯ ಎಚ್ ರಸ್ತಾಪುರ, ಅರುಣಕುಮಾರ ಕಸನ್, ಶರಣು ಕಸನ್ ಭೀಮವಾದ ಜಿಲ್ಲಾಧ್ಯಕ್ಷರು, ಪ್ರದೀಪ ಅಣಬಿ ಕಾರ್ಮಿಕ ಅಧ್ಯಕ್ಷರು, ಮೌನೇಶ ಬೀರನೂರು, ಧರ್ಮಣ್ಣ ನಾಟೇಕಾರ ಇನ್ನಿತರರು ಹಾಜರಿದ್ದರು.
