ಉತ್ತರ ಕನ್ನಡ/ ಶಿರಸಿ : ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಹಾಗೂ ಅವರ ಕರಮಕಮಲಸಂಜಾತ ಶ್ರೀ ಶ್ರೀಮದ್ ಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ ಏಳು ದಿನಗಳ ಕಾಲ ನಡೆಯಲಿರುವ ಶಾಂಕರಸರಸ್ವತೀ ಎಂಬ ವಿಶಿಷ್ಟ ಕಾರ್ಯಕ್ರಮವು ಸೋಂದಾ ಶ್ರೀ ಸ್ವರ್ಣವಲ್ಲಿ ಮಠದಲ್ಲಿ ಪ್ರಾರಂಭವಾಯಿತು.
ಶ್ರೀ ಸ್ವರ್ಣವಲ್ಲಿ ಮಠದ ಪರಮ ಪೂಜ್ಯರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿಶೇಷವಾಗಿ ಏಳು ದಿನ ನಡೆಯುವ ಈ ಕಾರ್ಯಕ್ರಮದಲ್ಲಿ ಶ್ರೀ ಮಠದಲ್ಲಿ ಶಾಸ್ತ್ರಾಧ್ಯಯನವನ್ನು ಮಾಡಿದ ಪ್ರಾಕ್ತನ ವಿದ್ಯಾರ್ಥಿಗಳಿಂದ ಶಾಂಕರ ಭಾಷ್ಯ ಪಾರಾಯಣ ಹಾಗೂ ಮೀಮಾಂಸಾ ಸೂತ್ರ ಪಾರಾಯಣಗಳು ನಡೆಯುತ್ತವೆ.
ಸಪ್ತಾಹದ ಅಂತಿಮ ದಿನ “ಸ್ವರ್ಣಶಂಕರ” ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಡೆಯಲಿದೆ ಎಂದು ಶ್ರೀ ಸ್ವರ್ಣವಲ್ಲಿ ಮಠ ಪ್ರಕಟಣೆ ತಿಳಿಸಿದೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
