ಕಲಬುರಗಿ: ಜಿಲ್ಲೆಯ ಕನ್ನಡ ಭವನದಲ್ಲಿ ಜಿಲ್ಲಾ ಮಹಿಳಾ ಘಟಕ ಉದ್ಘಾಟನೆ ಹಾಗೂ ತಾಲೂಕು,ಗ್ರಾಮ ಘಟಕದ ಅಧ್ಯಕ್ಷರನ್ನು ಕ.ರಾ.ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಶ್ರೀ ವಾಸುದೇವ ಮೇಟಿಯವರ ನೇತೃತ್ವದಲ್ಲಿ ನೇಮಕ ಮಾಡಿ ಆದೇಶ ಪ್ರತಿ ನೀಡಲಾಯಿತು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಪ್ರಶಾಂತಗೌಡ ಮಾಲಿ ಪಾಟೀಲ್ ರವರು “ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲಾ” ನಮ್ಮ ರೈತರು ಯಾವುದೇ ರೀತಿಯಾಗಿ ಬೆಳೆ ಬೆಳೆಯಲಿಲ್ಲವೆಂದರೆ ಇಡೀ ಜಗತ್ತೆ ಬಿಕ್ಕಿ-ಬಿಕ್ಕಿ ಮಣ್ಣು ತಿನ್ನುವ ಪರಿಸ್ಥಿತಿ ಬರುತ್ತೆ ಇಷ್ಟ ಅದಾಗ್ಯೂ ರೈತರ ಸಮಸ್ಯೆಗಳೇನು? ಅವರ ಬೆಳೆದ ಬೆಂಬಲ ಬೆಲೆಗೆ ಯಾಕೆ ಕೊಡಲಿ ಏಟು…? ಕಣ್ಣು ಕಾಣದ, ಕಿವಿಯೂ ಕೇಳದ ಸರ್ಕಾರಕ್ಕೆ ನಾವು ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಿ ತಕ್ಕ ಪಾಠ ಕಲಿಸುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟು ತಮ್ಮ ಪ್ರಾಸ್ತಾವಿಕ ನುಡಿಗೆ ವಿರಾಮ ಹೇಳಿದರು.
ಇದೇ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಮಲ್ಲಣ್ಣಗೌಡ ಹಗರಟಗಿಯವರು ರೈತ ಮತ್ತು ಯೋಧ ಈ ದೇಶದ ಎರಡು ಕಣ್ಣು ಇದ್ದ ಹಾಗೆ ರೈತ ಕೈ ಬಿಟ್ಟರೆ..! ಮಣ್ಣು ತಿನ್ನಬೇಕಾಗುತ್ತೆ, ಯೋಧ ಕೈ ಬಿಟ್ಟರೆ ಮಣ್ಣು ಸೇರಬೇಕಾಗುತ್ತೆ ಅದಕ್ಕೆ ರೈತರು ಮತ್ತು ಯೋಧರ ಸಮಸ್ಯೆಗಳನ್ನು ಸರ್ಕಾರವು ಹಗುರವಾಗಿ ತಿಳಿಯದೇ ಸ್ಥಳದಲ್ಲೇ ಸಮಸ್ಯೆಗಳನ್ನು ಬಗೆ ಹರಿಸದಿದ್ದರೆ ಸರ್ಕಾರವನ್ನೇ ಪಥನ ಮಾಡುತ್ತೇವೆ ಎಂದು ಮಾರ್ಮಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟಕರು ಹಾಗೂ ಜ್ಯೋತಿ ಬೆಳಗಿಸುವುದರೊಂದಿಗೆ ವೀರಶೈವ ಲಿಂಗಾಯತ ಮಹಾ ಸಭಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀಮತಿ ದಿವ್ಯ ಹಾಗರಗಿಯವರು ರೈತ “ದೇಶದ ಬೆನ್ನೆಲುಬು” ರೈತರು ಸಮಸ್ಯೆಗಳನ್ನು ಎದುರಿಸಿ ಬೆನ್ನೆ ಬಾಗಿ ಹೋಗಿದೆ ಇದನ್ನು ಯಾರು ಸರಿ ಪಡಿಸುತ್ತಾರೆ ಎಂದು ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಯಕ್ಷ ಪ್ರಶ್ನೆ ಕೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಪರಮ ಪೂಜ್ಯ ಶ್ರೀ ಷ ಬ್ರ.ಗುರುಲಿಂಗ ಶಿವಚಾರ್ಯರು ಮತ್ತು ಶಾಂತವೀರ ಶಿವಾಚಾರ್ಯರು
ರೈತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಕೊನೆಯ ಘಟ್ಟದೊಂದಿಗೆ ಬೃಹತ್ ಹೋರಾಟ ಮಾಡಿ ಜಿಲ್ಲಾಧಿಕಾರಿಗಳಿಗೆ ರೈತರ ವಿವಿಧ ಬೇಡಿಕೆಗಳನ್ನು ಅತಿ ಶೀಘ್ರದಲ್ಲಿಯೇ ಬಗೆಹರಿಸುವಂತೆ ಜತೆಗೆ ಅನೇಕ ಸಮಸ್ಯೆಗಳಾದ ಮಲ್ಲಾಬಾದ ಏತ ನೀರಾವರಿಯ ಅಪೂರ್ಣ ಕಾಮಗಾರಿ ಯೋಜನೆ,ನೆಟೆ ರೋಗ,ಸಿಕ್ಸ ಲೈನ್ ಹೈವೆ ಚೆನ್ನೈ-ಕಲ್ಕತ್ತಾ ರೋಡ್ ಅಕ್ಕ ಪಕ್ಕದ ಹದಗೆಡುತ್ತಿರುವ ಜಮೀನುಗಳು,ಭೂ ಒತ್ತುವರಿ ಕುರಿತು ಜಿಲ್ಲಾಧಿಕಾರಗಳಿಗೆ ಮನವಿ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ರಾಜಕೀಯ ಧುರೀಣರು,ಮಾಜಿ ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷರಾದ ಶ್ರೀ ರಾಜಶೇಖರಗೌಡ ಜೈನಾಪೂರ,ಜೇವರ್ಗಿ ತಾಲೂಕು ರೈತ ಸಂಘದ ತಾಲೂಕು ಅಧ್ಯಕ್ಷರಾದ ಶ್ರೀ ಪಂಚಯ್ಯ ಹಿರೇಮಠ,ಕಾರ್ಯದರ್ಶಿಗಳಾದ ಅರುಣ,ಬರಹಗಾರರ ಸಂಘದ ತಾಲೂಕು ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಪಾಟೀಲ್,ಅನಿಲ ಸಿಂಧೆ,ಮಿಥುನ್ ಬಾನ್ಸೋಡೆ,ನಾಗರಾಜ ಇಂಡಿ.
ನೂತನವಾಗಿ ಜಿಲ್ಲಾ ರೈತ ಸಂಘದ ಮಾಧ್ಯಮ ಪ್ರತಿನಿಧಿಯಾಗಿ ಶ್ರೀ ಚಂದ್ರಶಾಗೌಡ ಮಾಲಿ ಪಾಟೀಲ್ ,ಮಂದೇವಾಲ ಮತ್ತು ಮಯೂರ ಗ್ರಾಮ ಘಟಕದ ಅಧ್ಯಕ್ಷರಾದ ಶ್ರೀ ರಮೇಶಗೌಡ ಪಾಟೀಲ್ ಮತ್ತು ಮಲ್ಲಿನಾಥ ಜಿ ಪಾಟೀಲ್ ಹಾಗೂ ಇತರರನ್ನು ನೆಲೋಗಿ ರೈತ ಸಂಘದ ಹೋಬಳಿ ಘಟಕದ ಅಧ್ಯಕ್ಷರಾದ ಶ್ರೀ ಶರಣಗೌಡ ಮಾಲಿ ಪಾಟೀಲ್,ತಾಲೂಕು ಘಟಕದ ಅಧ್ಯಕ್ಷ ಪಂಚಯ್ಯ ಸ್ವಾಮಿ,ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಪ್ರಶಾಂತಗೌಡ ಮಾಲಿ ಪಾಟೀಲ್ ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ವಾಸುದೇವ ಮೇಟಿ ರವರು ನೇಮಕ ಮಾಡಿ ಆದೇಶ ಹೊರಡಿಸಿದರು.
ವರದಿ: ಚಂದ್ರಶೇಖರ ಪಾಟೀಲ್ ಗುಡೂರ ಎಸ್ ಎನ್.
