ಬೀದರ್/ ಹುಮನಾಬಾದ್ : 7ನೇ ಭಾರತೀಯ ಸಂಸ್ಕೃತಿ ಉತ್ಸವ ಹಾಗೂ ಸ್ವರ್ಣ ಜಯಂತಿ ಸಮಾರಂಭಕ್ಕೆ ಹುಮನಾಬಾದ ಮತ್ತು ಚಿಟಗುಪ್ಪಾ ತಾಲೂಕಿನಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ರೈತರು, ಮಕ್ಕಳು, ಶಿಕ್ಷಕರು, ಮಹಿಳೆಯರು ಪಾಲ್ಗೊಳ್ಳಬೇಕೆಂದು ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ಶಿವಶಂಕರ ತರನ್ನಳ್ಳಿ ತಿಳಿಸಿದರು.
ನಗರದ ಲಕ್ಷ್ಮಿ ವೆಂಕಟೇಶ್ವರ ಶಾಲೆ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
29 ಜನವರಿ 2025 ರಿಂದ 6 ಫೆಬ್ರವರಿ 2025 ವರೆಗೆ ಪ್ರಕೃತಿ ನಗರ, ಬೀರನಹಳ್ಳಿ ಕ್ರಾಸ್ ಸೇಡಂ ನಲ್ಲಿ ಜರುಗಲಿರುವ ಐತಿಹಾಸಿಕ ಸಮಾರಂಭದಲ್ಲಿ ದಿನನಿತ್ಯ ವಿಶಿಷ್ಟವಾದ ಕಾರ್ಯಕ್ರಮಗಳು ಜರುಗಲಿವೆ. ಉದ್ಘಾಟನಾ ಸಮಾರಂಭ, ಮಾತೃ ಸಮಾವೇಶ, ಕೈ ತುತ್ತು ಭೋಜನ, ಜಾದೂ ಪ್ರದರ್ಶನ, ಯುವ ಸಮಾವೇಶ, ಗ್ರಾಮ ಕೃಷಿ ಸಮಾವೇಶ, ಆಹಾರ ಆರೋಗ್ಯ ಸಮಾವೇಶ, ಸ್ವಯಂ ಉದ್ಯೋಗ ಸಮಾವೇಶ, ಪ್ರಕೃತಿ ಮತ್ತು ನಾವು ಸಮಾವೇಶ ,ಸೇವಾಶಕ್ತಿ ಸಮಾವೇಶ, ಸಂಸ್ಕೃತಿ ಸಮಾವೇಶ, ಸಮಾರೋಪ ಸಮಾರಂಭ ನಡೆಯಲಿದೆ ಈ ನಡುವೆ ಪ್ರತಿನಿತ್ಯ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ ಎಂದರು.
ವಿಕಾಸ ಅಕಾಡೆಮಿ ತಾಲೂಕು ಸಂಚಾಲಕ ಸಂಗಮೇಶ ಎನ್ ಜವಾದಿ ಮಾತನಾಡಿ ಈ ಒಂದು ಐತಿಹಾಸಿಕ ಸಮಾರಂಭಕ್ಕೆ ಹುಮ್ನಾಬಾದ್ ಸೇರಿದಂತೆ ಚಿಟುಗುಪ್ಪಾ ತಾಲೂಕಿನಿಂದ ಅತಿಹೆಚ್ಚಿನ ಜನಸಂಖ್ಯೆ ಭಾಗವಹಿಸುವ ಮೂಲಕ ಇದೊಂದು ಕಾರ್ಯಕ್ರಮದಲ್ಲಿ ಎಲ್ಲರೂ ಸಾಕ್ಷಿಗಳಾಗಬೇಕು.
ವಿಶೇಷವಾಗಿ ರೈತರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಒಂದು ಕಾರ್ಯಕ್ರಮದ ಸೊಬಗ್ಗನ್ನು ಆನಂದಿಸಬೇಕೆಂದು ವಿನಂತಿಸಿಕೊಂಡರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ತಂಗಾ, ವೀರಶೆಟ್ಟಿ ಜಿರಗಿ, ಮಲ್ಲಿಕಾರ್ಜುನ ಭಂಗೂರೆ, ಶ್ರೀಶೈಲ ಬೆನೂರ್, ಶರಣಪ್ಪಾ ಹುಲಸೊರೆ, ನಿಜಲಿಂಗಪ್ಪ ಜಕ್ಕಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
