ದಕ್ಷಿಣ ಕನ್ನಡ, ಮಂಗಳೂರು: ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಆಗ್ಗಿದಕಳಿಯ, ಸಸಿಹಿತ್ಲು, ಯೀ ಸೇವಾ ಸಂಸ್ಥೆಯ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಜನವರಿ 24, 2025 ರಿಂದ 26, 2025 ರ ತನಕ ಜಾಗತಿಕ ಬಿಲ್ಲವರ ಸಮಾವೇಶ ಜರುಗಲಿದೆ. ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದ್ದು 50,000 ಸಮಾಜ ಬಾಂಧವರ ಸಮಾಗಮ ನಡೆಯಲಿದೆ. ಬಿಲ್ಲವ ಸಮಾಜದ ತೀಯಾ, ಈಡಿಗ, ಆರ್ಯ, ದೀವರ, ನಾಮಧಾರಿ ಸಹಿತ 26 ಉಪ ಪಂಗಡಗಳ ವಿಶ್ವ ಸಮ್ಮೇಳನ ಸಸಿಹಿತ್ತಲ ಕಡಲ ತಡಿಯ ಬ್ರಹ್ಮ ಶ್ರೀ ನಾರಾಯಣ ಗುರು ಸಂಘದ ವಠಾರದಲ್ಲಿ ಜರುಗಲಿದೆ. ವಿಶ್ವ ಸಾಧಕರ ಸಮ್ಮಿಲನ, ಬೀಚ್ ಫೆಸ್ಟಿವಲ್, ಬೀಚ್ ಡ್ಯಾನ್ಸ್ ಫೆಸ್ಟ್, ಕರಾವಳಿ ಆಹಾರ ಮೇಳ, ಜಾನಪದ ವಸ್ತು ಪ್ರದರ್ಶನ, ಪುಸ್ತಕ ಮೇಳ ಹಾಗೂ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಮೊದಲಾದ ಕಾರ್ಯಕ್ರಮ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ವರದಿ: ಚಂದ್ರಶೇಖರ ಹೆಬ್ಬಾರ್ ಕೊಲ್ಯ.
