12ನೇ ಶತಮಾನದ ಬಸವಣ್ಣ
ವಚನಗಳಿಗೆ ನೀನೇ ಹಿರಿಯಣ್ಣ
ನಿನ್ನೊಡನೆ ಇರುವವರು ವಚನಕಾರ ವಚನಕಾರ್ತಿಯರಣ್ಣ
ಕೂಡಲಸಂಗಮದಲ್ಲಿ ಕಟ್ಟಿದೆ ಅನುಭವ ಮಂಟಪವನ್ನ
ಮಾದರಸ ಮಾದಲಾಂಬಿಕೆ ಮಗನು
ಬಸವನ ಬಾಗೇವಾಡಿಯಲ್ಲಿ ಜನಿಸಿದವನು
ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿ ಆದವನು
ಲಿಂಗ ತಾರತಮ್ಯ ವಿರುದ್ಧ ಹೋರಾಡಿದವನು
ಕಳಬೇಡ ಕೊಲಬೇಡವೆಂದ
ಎಲ್ಲರೂ ಒಂದೇ ಎಂದೆ
ಸಮಾಜದಲ್ಲಿ ಹರಿಕಾರನಾದ
ಪರಿಶುದ್ಧವಾದ ವಚನಗಳನ್ನು ಸಾರಿದ
ವಚನ ಸಾಹಿತ್ಯದ ಹರಿಕಾರ
ವಚನಗಳೆ ಈತನಿಗೆ ಪ್ರಿಯ
ನಾಗಲಾಂಬಿಕೆ ಗಂಗಾಂಬಿಕೆಯ ಇನಿಯ
ಬಡವ ಬಲಿದರೆ ಇವರಿಗೆ ಗೆಳೆಯ
ಜನಿವಾರವನ್ನು ತ್ಯಜಿಸಿದಾತ
ಲಿಂಗ ಪೂಜೆಯನ್ನು ಆರಂಭಿಸಿದಾತ
ಕೂಡಲಸಂಗಮ ಅಂಕಿತವನ್ನು ಇಟ್ಟುಕೊಂಡವನು ಈತ ಸಂಪ್ರದಾಯ ಕಟ್ಟಳೆಗಳನ್ನು ಮುರಿದ ಈತ.
- ಚಂದ್ರಶೇಖರಚಾರ್ ಎಂ
ಶಿಕ್ಷಕರು ವಿಶ್ವಮಾನವ ವಸತಿ ಪ್ರೌಢಶಾಲೆ,
ಚಿತ್ರದುರ್ಗ 7892642593
