
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದ ಶಿಕ್ಷಣ ಪ್ರೇಮಿಗಳು, ಕಾಂಗ್ರೆಸ್ ಹಿರಿಯ ಮುಖಂಡರಾದ ಶ್ರೀ ರಾಘವೇಂದ್ರ ಆಚಾರ್ ಜೋಶಿ ಅವರು ಮಾತನಾಡುತ್ತಾ
” ವಸತಿ ಶಾಲೆಯ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗುವಂತಾಗಬೇಕು ,ಸರ್ಕಾರ ಶೈಕ್ಷಣಿಕ ಕ್ಷೇತ್ರಕ್ಕೆ ಅತಿ ಹೆಚ್ಚು ಆಸಕ್ತಿ ವಹಿಸುವ ಮೂಲಕ ಶಿಕ್ಷಣ ಸುಧಾರಣೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು”.

ಮೇಲ್ವಿಚಾರಕರಾದ ಶ್ರೀ ಡಾ. ಶಿವಶಂಕರ್ ಕರಡಿಕಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ವಸತಿ ನಿಲಯ ಪಾಲಕರಾದ ಶ್ರೀ ಶಂಕರ್ ಸಕ್ರಿ, ರಾಮಚಂದ್ರ, ಲೋಕೇಶ್ ಪಾಲ್ಕಿ, ಶ್ರೀ ಮತಿ ರೇಖಾ , ಹನುಮವ್ವ, ಪಾರವ್ವ, ಮತ್ತು ಗುನ್ನಾಳ ಗ್ರಾಮದ ಪ್ರಮುಖರಾದ ಶ್ರೀ ಲಕ್ಷ್ಮಣ್ ಆಚಾರ್ ಜೋಶಿ, ಅಪ್ಪಣ್ಣ ಜೋಶಿ, ವಿಠ್ಠಲ್ ವಾಲ್ಮೀಕಿ, ವೆಂಕೋಬ ಗೋಸಲ ಗುಂಡಪ್ಪ ವಂಕಲಕುಂಟಿ, ಕರೆ ಹನುಮಪ್ಪ ಮುರುಡಿ, ಫರೀದಾಸಾಬ ಹಿರೇಮನಿ, ಶರಣಪ್ಪ ಬಿಸೈಟಿ ಗ್ರಾ.ಪಂ.ಸ. ಪ್ರಕಾಶ್ ಹಟ್ಟಿ, ಬಸಯ್ಯ ಹಿರೇಮಠ ಶಂಕ್ರಪ್ಪ ಮಡಿವಾಳರ್, ಅನಾಳಪ್ಪ ಗುಳಗುಳಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
- ಕರುನಾಡ ಕಂದ
