ಬಾಗಲಕೋಟೆ / ರಬಕವಿ – ಬನಹಟ್ಟಿ : ಸಿಕ್ಕಿದ್ದೆ ಶಿವಾಯ ನಮಃ ಅನ್ನುವಂತ ಯುಗದಲ್ಲಿ ಕಳೆದುಕೊಂಡ ಯಾರದೋ ವಸ್ತುಗಳನ್ನು ಯಾರಿಗಾದರೂ ಸಿಕ್ಕಿದರೆ ಗಾಡ್ ಗಿಫ್ಟ್ ಅಂತ ಹೇಳಿ ಬಹುತೇಕ ಯಾರೂ ವಾಪಸ್ ಮಾಡುವುದಿಲ್ಲ . ಇಲ್ಲೊಬ್ಬ ರಬಕವಿ – ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಬಿಲಾಲ್ ಮಸ್ಜಿದ್ ಬಡಾವಣೆಯ ನಿವಾಸಿಯಾದ ಲಾಲ್ ಸಾಬ್ ಅಥಣಿ ಎಂಬ ಯುವಕ , ಈತನಿಗೆ ರಸ್ತೆಯ ಪಕ್ಕದಲ್ಲಿ ಸಿಕ್ಕ 20 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ವಿವೊ ಕಂಪನಿಯ ಮೊಬೈಲ್ ಫೋನನ್ನು ಕಳೆದುಕೊಂಡ ವ್ಯಕ್ತಿ ಮಂಜು ನಗರಸಭೆಯ ವ್ಯಾಪ್ತಿಯ ಹೊಸೂರ್ ಗ್ರಾಮದ ಯುವಕನಾಗಿದ್ದು , ಯುವಕನು ಕರೆ ಮಾಡಿದ ಸಂದರ್ಭದಲ್ಲಿ ಮಾತಾಡಿ ತಾನಿದ್ದ ಸ್ಥಳದಲ್ಲಿ ಕರೆದು ಮೊಬೈಲ್ ಹಿಂದುರುಗಿಸಿ ಮಾನವಿಯತೆ ಮೆರೆದಿದ್ದಾನೆ.
ಲಾಲ್ ಸಾಬ್ ಅಥಣಿ ಈ ಯುವಕ ಸಮಾಜಕ್ಕೆ ಮಾದರಿಯಾದ ವ್ಯಕ್ತಿ ಹಾಗೂ ಮಾನವೀಯತೆಯ ಕಾರ್ಯವನ್ನು ಮೆಚ್ಚಿ , ಆತನ ಗೆಳೆಯರ ತಂಡದಿಂದ ತಡ ರಾತ್ರಿ 11:30 ಗಂಟೆಯಾದರೂ ಈತನಿಗೆ ಶಾಲು ಮಾಲೆಯನ್ನು ಹಾಕಿ ಸನ್ಮಾನ ಮಾಡಿದರು .
ಈ ಸಂದರ್ಭದಲ್ಲಿ ಮೊಬೈಲ್ ವಾಪಸ್ ಪಡೆದುಕೊಂಡ ಯುವಕ ಮಂಜು ನಗರದ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಬಿಜೆಪಿ ಅಲ್ಪಸಂಖ್ಯಾತರ ನಗರ ಘಟಕದ ಅಧ್ಯಕ್ಷ ಮಲಿಕ್ ಜೆ ಬಾರಿಗಡ್ಡಿ, ಆಸಿಫ್ ಪಾಗೆ ,ಶರ್ಪೋದ್ದಿನ್ ಜಮಾದಾರ್, ಮೂಸಾ ಆಸಂಗಿ ,ಮಹಿಬೂಬ್ ಮೀರಾಸಾಬ ಬಾರಿಗಡ್ಡಿ ಇನ್ನೂ ಅನೇಕರು ಉಪಸ್ಥಿತರಿದ್ದರು .
ವರದಿ : ಮಹಿಬೂಬ್ ಎಂ ಬಾರಿಗಡ್ಡಿ
