ವನಸಿರಿ ಪೌಂಡೇಷನ್ ಸಹಕಾರದಿಂದ ಗಣರಾಜ್ಯೋತ್ಸವದ ಅಂಗವಾಗಿ ಅಂದ ಚಂದದಿಂದ ಸಿಂಗಾರಗೊಂಡ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ.
ಸಿಂಧನೂರು ನಗರದ ಜನತಾ ಕಾಲೋನಿಯ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ 76ನೇ ಗಣರಾಜ್ಯೋತ್ಸವದ ಅಂಗವಾಗಿ ವನಸಿರಿ ಫೌಂಡೇಷನ್(ರಿ.) ರಾಯಚೂರು ರಾಜ್ಯ ಘಟಕದ ವತಿಯಿಂದ ಸರಕಾರಿ ಶಾಲೆಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಸುಂದವಾಗಿ ಕಾಣಲು ಬಣ್ಣ ಹಚ್ಚಿಸುವ ಮೂಲಕ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಯಿತು.
76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು,ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಮಾತನಾಡಿ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಬಹಳಷ್ಟು ಹಿಂದುಳಿದಿದ್ದಾರೆ. ಇಂತಹ ಸಂಧರ್ಭದಲ್ಲಿ ಸರಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳು ಬಹಳಷ್ಟು ಹೊರಬರುತ್ತಿವೆ. ಯಾಕಂದರೆ ಖಾಸಗಿ ಶಾಲೆಗಳು ಬಹುಮಹಡಿ ಕಟ್ಟಡಗಳು ಹೊಂದಿರುತ್ತವೆ, ಸುಂದರವಾಗಿ ಕಾಣುತ್ತಿರುತ್ತವೆ. ಇದರಿಂದ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವುದುಕೋಸ್ಕರ ನಮ್ಮ ಸರಕಾರಿ ಶಾಲೆಗಳು ಅಂದಚೆಂದವಾಗಿ, ಸುಂದವಾಗಿ ಕಾಣಲೆಂದು, ಸರಕಾರಿ ಶಾಲೆಗಳನ್ನು ಉಳಿಸಬೇಕು ಬೆಳಸಬೇಕು. ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ನಮ್ಮ ವನಸಿರಿ ಫೌಂಡೇಷನ್ ವತಿಯಿಂದ ಇಂದು ನಿಮ್ಮ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ ಬಣ್ಣವನ್ನು ಹಚ್ಚಿಸುವ ಮೂಲಕ ಅಳಿಲು ಸೇವೆಯನ್ನು ಮಾಡಿದ್ದೇವೆ. ನಮ್ಮ ವನಸಿರಿ ಸಂಸ್ಥೆ ಚಿಕ್ಕ ಸಂಸ್ಥೆಯಾಗಿದೆ. ಯಾವುದೇ ಅನುದಾನವಿಲ್ಲದೆ ತಂಡದ ಸದಸ್ಯರು,ಗೆಳೆಯರು, ಪರಿಸರ ಪ್ರೇಮಿಗಳ ಸಹಕಾರದಿಂದ ಪರಿಸರ ಸೇವೆ ಮತ್ತು ಈ ಬಣ್ಣ ಬಳಿಯುವ ಕಾರ್ಯ ನಡೆದಿದೆ.ಮುಂದೆನೂ ಈ ಕಾರ್ಯ ಮುಂದುವರೆಯಲಿದೆ.ದೊಡ್ಡ ದೊಡ್ಡ ಸರಕಾರಿ ಶಾಲೆಗಳಿಗೆ ಬಣ್ಣದ ವ್ಯವಸ್ಥೆ ಮಾಡಬೇಕಾದರೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿರುತ್ತದೆ.ವನಸಿರಿ ತಂಡ ಸರಕಾರಿ ಶಾಲೆಗಳನ್ನು ಉಳಿಸಿ ಬೆಳಸುವಲ್ಲಿನ ಕಾರ್ಯ ಯಾವಾಗಲೂ ಮುಂದುವರಿಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ SDMC ಅಧ್ಯಕ್ಷ ಖಾಜ್ ಸಾಬ್, ಉರ್ದು ಶಾಲೆಯ ಮುಖ್ಯ ಗುರುಗಳು ಹುಸೇನ್ ಬಾಷಾ, ಶಿಕ್ಷಕರು ಹಲ್ಮಿದ್ದೀನ್,ಶಿಕ್ಷಕಿ ನಫಿಶಾ, ವನಸಿರಿ ಮಸ್ಕಿ ಅಧ್ಯಕ್ಷ ರಾಜು ಪತ್ತಾರ್, ನಾಗರಾಜ್ ರೈತನಗರ ಕ್ಯಾಂಪ್, ಮುದಿಯಪ್ಪ ಹೊಸಳ್ಳಿ ಕ್ಯಾಂಪ್, SDMC ಸದಸ್ಯ ರಾಜ್ ಶಾಬ್, SDMC ಸದಸ್ಯ ಖಾದರ್ ಭಾಷ್, SDMC ಸದಸ್ಯ ಶ್ರೀಮತಿ ಜುಲೇಖ ಬೇಗಂ, ಶ್ರೀಮತಿ ಶಹಿರ್ ಬೇಗಂ, ಆಡುಗೆ ಸಿಬ್ಬಂದಿ ಶ್ರೀಮತಿ ಪತಿಮ್,ಶ್ರೀಮತಿ ನಸ್ರೀನ್ ಇದ್ದರು.
