
ಇಂದು ವಿಜಯನಗರ ಜಿಲ್ಲಾ ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 76 ನೆಯ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಶ್ರೀ ಎಂ. ಎಸ್. ದಿವಾಕರ್ ಭಾ.ಆ.ಸೇ. ಇವರು ಮತ್ತು ಜಮೀರ್ ಅಹಮದ್ ಖಾನ್ ವಿಜಯನಗರ ಜಿಲ್ಲಾ ಉಸ್ತವಾರಿ, ಮಂತ್ರಿಗಳು ಧ್ವಜಾರೋಹಣವನ್ನು ನೆರವೇರಿಸಿದರು. ಜೊತೆಗೆ ವಿಜಯನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು ಶ್ರೀ ಬಾಲಕೃಷ್ಣ, ಭಾ.ಆ.ಸೇ. ಹಾಗೂ ಹೊಸಪೇಟೆಯ ವಿಭಾಗದ ಸಹಾಯಕ ಆಯುಕ್ತರಾದ ಶ್ರೀ ವಿವೇಕಾನಂದ ಕ.ಆ.ಸೇ. ರವರು ಹಾಗೂ ಜಿಲ್ಲೆಯ ಅನೇಕ ಮುಖಂಡರುಗಳು ಜಿಲ್ಲೆಯ ಅಪಾರ ಜನಸ್ತೋಮ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿಗಾರರು: ಎನ್ ಚಂದ್ರಗೌಡ
