
ಬಾಗಲಕೋಟೆ ಜಿಲ್ಲೆ ಕಲಾದಗಿಯಲ್ಲಿ ದಿ 27.01.2024 ರ ಸೋಮವಾರದಂದು ಹೊರ ರಾಜ್ಯದ ವ್ಯಾಪಾರಿಗಳನ್ನು ತೊಲಗಿಸಿ ಕನ್ನಡಿಗ ವ್ಯಾಪಾರಸ್ಥರ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣ ಗೌಡರ ಬಣ)ಯ ಬಾಗಲಕೋಟೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಲಾದಗಿ ಗ್ರಾಮದ ವ್ಯಾಪಾರಸ್ಥರ ಸಹಯೋಗದೊಂದಿಗೆ ಕಲಾದಗಿ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಇಡೀ ಮಾರುಕಟ್ಟೆಯನ್ನು ಬಂದ್ ಮಾಡಿ ಸಹಕರಿಸಿದ ಎಲ್ಲಾ ವ್ಯಾಪಾರಸ್ಥರಿಗೆ, ಕರವೇ ಕಾರ್ಯಕರ್ತರಿಗೆ ಮತ್ತು ಪತ್ರಕರ್ತರಿಗೆ ಕಲಾದಗಿ ಅಂಗಡಿ ಮಾಲೀಕರು ವ್ಯಾಪಾರಸ್ಥರು ಊರಿನ ಪ್ರಮುಖರು ಧನ್ಯವಾದಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಕ.ರ.ವೇ ಜಿಲ್ಲಾಧ್ಯಕ್ಷರಾದ ಬಸವರಾಜ ಧರ್ಮಂತಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ರಾಜೇಶ್ವರಿ ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಂಗಮೇಶ ಅಂಬಿಗೇರ, ವಿದ್ಯಾರ್ಥಿ ಘಟಕದ ಅಧ್ಯಕ್ಷರು ಗಣೇಶ ನಾಯಕ ಸೇರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ವರದಿ : ನಿಂಬಯ್ಯ ವಿ ಕುಲಕರ್ಣಿ, ಬಾದಾಮಿ
