ಶ್ರೀ ಶಿವಬಸವೇಶ್ವರ ದಕ್ಷಿಣ ಕಾಶಿ ವಿದ್ಯಾಭಿವೃದ್ಧಿ ಟ್ರಸ್ಟ್ (ರಿ.) ಕಾಳಗಿ ಅಡಿಯಲ್ಲಿ ಬರುವ ಶಿಶು ಸಂಸ್ಕಾರ ಕೇಂದ್ರ, ಶ್ರೀ ಶಿವ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಕಾಳಪ್ಪ ಗೌಡ ಪೊಲೀಸ್ ಪಾಟೀಲ್ ಪ್ರೌಢ ಶಾಲೆ ಕಾಳಗಿ ಈ ಮೂರು ಪ್ರಕಲ್ಪ ಒಳಗೊಂಡ ಈ ಶಾಲೆಗಳಲ್ಲಿ 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಸ್ಥೆಯ ಸಂಸ್ಥಾಪನಾ ಸದಸ್ಯರಾದ ಶಿವಶರಣಪ್ಪ ಕಮಲಾಪುರ ಸಾಹುಕಾರ ನೆರವೇರಿಸಿದರು. ಹಾಗೂ ಶ್ರೀ ಮಠದ ಪೂಜ್ಯರಾದ ಶ್ರೀ ನೀಲಕಂಠ ಮರಿ ದೇವರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಸಂತೋಷ್ ಪತಂಗೆ ಗಣರಾಜ್ಯೋತ್ಸವ ಕುರಿತು ಮಾತನಾಡಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಆಡಳಿತ ನಡೆಸಬೇಕಾದರೆ ಸಂವಿಧಾನ ಮುಖ್ಯವಾಗಿದೆ ಮತ್ತು ಸಂವಿಧಾನ ಬರೆಯುವ ಜವಾಬ್ದಾರಿಯನ್ನು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರಿಗೆ ವಹಿಸಲಾಗಿತ್ತು ಆದ್ದರಿಂದ 26 ಜನವರಿ 1950 ರಂದು ಭಾರತ ಸಂವಿಧಾನವನ್ನು ಜಾರಿಗೆ ಬಂತು ಈ ದಿನವನ್ನು ಗಣರಾಜ್ಯೋತ್ಸವ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ ಎಂದರು. ನಂತರ ಶರಣಪ್ಪ ಮೇಲ್ಕೇರಿ ಸಹ ಶಿಕ್ಷಕರು ಮಾತನಾಡಿ, ನಮ್ಮ ಭಾರತ ಸಂವಿಧಾನವು ಅತ್ಯಂತ ದೊಡ್ಡ ಸಂವಿಧಾನವಾಗಿದೆ. ಭಾರತ ಸಂವಿಧಾನವನ್ನು 2 ವರ್ಷ 11 ತಿಂಗಳು 18 ದಿನಗಳಲ್ಲಿ ಪೂರ್ಣಗೊಳಿಸಲಾಯಿತು. ಇಂದು ಸಂವಿಧಾನ ಜಾರಿಗೆ ಬಂದ ದಿನ, ಇದು ಭಾರತದ ರಾಷ್ಟ್ರೀಯ ಹಬ್ಬವಾಗಿ ಆಚರಿಸಲಾಗುತ್ತಿದೆ. ಭಾರತ ಈ ದಿನದಂದು ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದರು. ಸತೀಶ್ ಪಾಟೀಲ್ ಪ್ರಾಥಮಿಕ ವಿಭಾಗ ಮುಖ್ಯ ಗುರುಗಳು ಸ್ವಾಗತಿಸಿದರು, ವಿರುಪಾಕ್ಷಯ್ಯ ಪ್ರೌಢ ವಿಭಾಗ ಮುಖ್ಯ ಗುರುಗಳು ವಂದಿಸಿದರು. SBDVT ಟ್ರಸ್ಟ್ ನ ಸದಸ್ಯರಾದ ಸಂತೋಷ್ ಪತಂಗೆ, ನೀಲಕಂಠ ಮಡಿವಾಳ, ಸಹ ಕಾರ್ಯದರ್ಶಿಯಾದ ಗುರುನಂಜಯ್ಯ, ಶ್ರೀಮತಿ ಜಯಶ್ರೀ ಕಿಟ್ಟದ, ಶ್ರೀಮತಿ ಪಾರ್ವತಿ ಯಲಾಲ್ಕರ ಹಾಗೂ ಶ್ರೀ ಶಿವಬಸವೇಶ್ವರ ಸಂಸ್ಥೆಯ ಆಡಳಿತ ಅಧಿಕಾರಿಯಾದ ರೇವಣಸಿದ್ದಯ್ಯ ಹಿರೇಮಠ್, ಪ್ರಧಾನ ಅಧ್ಯಾಪಕರಾದ ವಿರುಪಾಕ್ಷಯ್ಯ ಹಿರೇಮಠ, ಸತೀಶ್ ಪಾಟೀಲ್ ಮತ್ತು ಗುರು ವೃಂದದವರು ಹಾಗೂ ಮುದ್ದು ಮಕ್ಕಳು ಪಾಲ್ಗೊಂಡಿದ್ದರು.
ವರದಿ : ಶ್ರೀ ಚಂದ್ರಶೇಖರ್ ಆರ್ ಪಾಟೀಲ್
