ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ ಸಂಭ್ರಮ
ಗಂಗಾ, ಯಮುನಾ, ಸರಸ್ವತಿ ನದಿ ಸಂಗಮ
ಸಾಧು ಸಂತರ, ಕೋಟಿ ಭಕ್ತರ ಸಮಾಗಮ
ಪಾಪ ಅಳಿಸಿ ಮುಕ್ತಿ ತೋರುವ ಪುಣ್ಯಧಾಮ.
ಭಾರತೀಯ ಧರ್ಮ ಸಂಸ್ಕೃತಿಯ ಪರಂಪರೆಯು
ಸರ್ವ ಧರ್ಮ ಸಮನ್ವಯದ ಮಂತ್ರ ಸಹಿಷ್ಣುತೆಯು
ಜೀವನ ತತ್ವಗಳು ಪ್ರತಿಪಾದನೆಯ ಆಧ್ಯಾತ್ಮಿಕತೆಯು
ಇಲ್ಲಿಹುದು ಸಮುದ್ರ ಮಂಥನದ ದೈವತ್ವದ ಕಥೆಯು.
ಹಿಂದೂ ಧರ್ಮದ ಸನಾತನ ಶ್ರದ್ಧಾ ಭಕ್ತಿ
ಸಾಧು ಸಂತರ ಜಪ ತಪಗಳ ಶುದ್ಧ ಶಕ್ತಿ
ಪರಶಿವನ ಆಶೀರ್ವಾದ ಪಡೆಯುವ ಯುಕ್ತಿ
ರುದ್ರಾಕ್ಷಿ ಮಾಲೆ,ಭಸ್ಮ ಲೇಪಿಸಿದಾಗ ಮುಕ್ತಿ.
ಪವಿತ್ರ ನದಿಗಳಲ್ಲಿ ಸ್ನಾನಾದಿಗಳ ಮುಗಿಸಿ
ಅಂತರಂಗದ ಕೊಳೆಯ ಕಿತ್ತು ತೊಲಗಿಸಿ
ಆ ಭಗವಂತನ ಕೃಪೆಯಿಂದ ಪುಣ್ಯ ಗಳಿಸಿ
ಮುಂದೆ ಸಾಗೋಣ ಧರ್ಮ ಜಾಗೃತಿ ಬೆಳೆಸಿ.
- ಬ್ಯಾಡನೂರು ವೀರಭದ್ರಪ್ಪ ಶಿವಶರಣ,(ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ : 9740199896.
