ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಬಸವರಾಜ ಪಾಟೀಲ

ಕಲಬುರಗಿ/ ಕಮಲಾಪೂರ: ಗ್ರಾಮೀಣ ಪ್ರದೇಶದ ಯುವಕರು ದುಶ್ಚಟಗಳಿಗೆ ದಾಸರಾಗಬೇಡಿ, ಗುಣಮಟ್ಟದ ಶಿಕ್ಷಣ ಪಡೆದು ಗುರಿ ಸಾಧಿ ಸಬೇಕು ಎಂದು ಗ್ರಾಪಂ ಮಾಜಿ ಮಂಡಲ್ ಅಧ್ಯಕ್ಷ ಬಸವರಾಜ ಪಾಟೀಲ್ ಹೇಳಿದರು.
ತಾಲೂಕಿನ ಡೊಂಗರಗಾಂವ ಗ್ರಾ.ಪಂ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 76ನೇ ಗಣರಾಜೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರ ಸಹಕಾರದಿಂದ ಉತ್ತಮ ಕೆಲಸ ಮಾಡಿ ಮಾದರಿಯ ಗ್ರಾಪಂ ಆಗಬೇಕು ಎಂದರು.
ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಮೇಲ್ವಿಚಾರಕ ನಾಗೇಂದ್ರಪ್ಪ ಅವರಾದ ಮಾತನಾಡಿ, ಗ್ರಾಮೀಣ ಭಾಗದ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಪಟ್ಟಣಕ್ಕೆ ಮೀರಿಸುವಂತ ಶಿಕ್ಷಣ ಸರಕಾರಿ ಶಾಲೆಯಲ್ಲಿ ಸಿಗುತ್ತದೆ, ಎಲ್ಲಾ ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದರು.
ಗ್ರಾಪಂ ಅಧ್ಯಕ್ಷ ಅನಿಲಕುಮಾರ ಪಿ. ಬೆಳಕೇರಿ ಮಾತನಾಡಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಹಿರಿಯರು ಉಳಿಸಿಕೊಂಡು ಬಂದಿದ್ದಾರೆ. ಇಡೀ ಜಗತ್ತಿನಲ್ಲೇ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ನಮ್ಮ ಹಿರಿಯರು ಕಟ್ಟಿಕೊಟ್ಟಿದ್ದಾರೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸಿ ಕೊಡುವ ಹೊಣೆಗಾರಿಕೆ ನಮ್ಮ ಮೇಲಿದೆ. 300 ವರ್ಷಗಳ ಕಾಲ ಆಂಗ್ಲರ ದಬ್ಬಾಳಿ ಕೆಯಲ್ಲಿ ಕಾಲ ಕಳೆದ ನಮ್ಮ ದೇಶ ಸ್ವಾತಂತ್ರ್ಯ ಪಡೆದ ಬಳಿಕ ಗಣತಂತ್ರ ದೇಶವಾಗಿ ರೂಪು ಪಡೆಯಿತು. ನ.26ರಂದು ನಾವು ಸಂವಿಧಾನವನ್ನು ಸ್ವೀಕರಿಸಿದ್ದರೂ, ಜ.26ರಂದು ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಇದಕ್ಕೆ ಕಾರಣ ಜ.26ರಂದು ನಾವು ಸಂಪೂರ್ಣ ಸ್ವರಾಜ್ಯ ಎಂದು ಘೋಷಣೆ ಮಾಡಿಕೊಂಡೆವು. ಐತಿಹಾಸಿಕ ಸವಾಲುಗಳನ್ನು ದಾಟಿ ಬಂದಿದ್ದೇವೆ. ಶಕ್ತಿಶಾಲಿ ಭಾರತ ಕಟ್ಟುವ ಕೆಲಸ ನಮ್ಮ ಮುಂದಿದೆ. ಎಲ್ಲರೂ ಸಂವಿಧಾನವನ್ನು ಓದಿಕೊಳ್ಳಬೇಕು. ಜಗತ್ತಿನಲ್ಲೇ ಅತಿದೊಡ್ಡ ಸಂವಿಧಾನ ನಮ್ಮದು. 448 ವಿಧಿಗಳಿರುವ ಜೀವಂತ ದಾಖಲೆ ಇದು. 2 ವರ್ಷ 11 ತಿಂಗಳ ಅವಧಿಯಲ್ಲಿ ರಚಿಸಿದ ಈ ಸಂವಿಧಾನವನ್ನು ಅಂದು ಪೂರ್ತಿ ಕೈಯಲ್ಲೇ ಬರೆಯಲಾಗಿತ್ತು. ಭಾರತದ ಇತಿಹಾಸವನ್ನು ಎಲ್ಲರೂ ಓದಿಕೊಳ್ಳಬೇಕು ಎಂದು ಅವರು ನುಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸಂಗೀತಾ ರಾಠೋಡ, ಗ್ರಾಪಂ ಮಾಜಿ ಅಧ್ಯಕ್ಷ ಶರಣು ರಾಜೇಶ್ವರ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಂಜುನಾಥ ಸಿಂಧೆ ಅವರಾದ, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಗೋಳೆದ, ಶರಣಬಸಪ್ಪ ರಾಂಪುರ, ಮುಖ್ಯಗುರು ಸುನಿತಾ ಬಿರಾದಾರ, ವೈದ್ಯಾಧಿಕಾರಿ ಡಾ. ಜಾವೇದ್, ನಾಗರಾಜ ಜನಕಟ್ಟಿ, ಸಂಗಪ್ಪ ಆರ್ ಚಿಗೋಣಿ, ಶಂಕರೆಪ್ಪ ಎಸ್ ಕಾರಮಗಿ, ಮಹೇಶ ಪಾಟೀಲ್, ಬಸವರಾಜ ವಡ್ಡನಕೇರಿ, ಶಿವಕುಮಾರ ಜನಕಟ್ಟಿ, ರವಿಂದ್ರ ಕೆ. ಪಾಟೀಲ್, ರಾಜಕುಮಾರ ಕಾರಮಗಿ, ಆನಂದ ಕೆ. ಕಾಂಬಳೆ, ಮೇಘರಾಜ ವಾಡಿ, ರೇವಣಸಿದ್ದಪ್ಪ ಇಮದಾಪುರ, ಸುತ್ತಾರ, ಸವಿತಾ, ಶೋಭಾದೇವಿ, ಶಾಂತಾಬಾಯಿ ಬಿರಾದಾರ, ಶೋಭಾದೇವಿ ವಾಡಿ, ಶೆಕುಬಾಯಿ ವಾಡಿ, ಪ್ರಮಿಳಾ, ಮಹಾದೇವ ಮಾಲಿ ಪಾಟೀಲ್, ನಾಗಮ್ಮ ಇಟಗಿ, ಮುರುಗೇಶ ಇಟಗಿ ಹಾಗೂ ಶಿಕ್ಷಕರು, ವಿಧ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ