ಬಾಗಲಕೋಟೆ / ರಬಕವಿ – ಬನಹಟ್ಟಿ : ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಧ್ವಜಾರೋಹಣದ ನಂತರ ಧ್ವಜ ಸಂಹಿತೆಯ ಪ್ರಕಾರ ಅವರೋಹಣ ಮಾಡುವ ಸಂದರ್ಭದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದಂತ ಘಟನೆಗಳು ನಡೆಯುತ್ತಲೇ ಇರುತ್ತವೆ ಇಂತಹದ್ದೇ ಸುದ್ದಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ಒಂದರಲ್ಲಿ ನಡೆದಿದೆ. ಬೆಳಿಗ್ಗೆ ಗಣರಾಜ್ಯೋತ್ಸವದ ಧ್ವಜಾರೋಹಣ ಮಾಡಿದ್ದರು. ಆದರೆ ಅದೇ ಧ್ವಜವನ್ನು ಸಾಯಂಕಾಲ ತಡವಾಗಿ ಸೂರ್ಯಸ್ತದ ನಂತರ 6 ಗಂಟೆ 30 ನಿಮಿಷಕ್ಕೆ ಬ್ಯಾಂಕಿನ ಒಬ್ಬನೇ ಸಿಬ್ಬಂದಿ ಬಂದು ಅವರೋಹಣ ಮಾಡುವ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ರಾಷ್ಟ್ರಧ್ವಜವನ್ನು ಯಾವಾಗ ಧ್ವಜಾರೋಹಣ ಮಾಡಬೇಕು ಹಾಗೂ ಅದೇ ಧ್ವಜ ಯಾವ ವೇಳೆ ಅವರೋಹಣ ಮಾಡಬೇಕು ಎನ್ನುವುದಕ್ಕೆ ನಿಯಮಗಳು ಇವೆ.
ನಾವು ಧ್ವಜಾರೋಹಣದ ವೇಳೆ ಎಷ್ಟು ಗೌರವ ನೀಡುತ್ತೇವೆಯೋ ಅದೇ ರೀತಿ ಇಳಿಸುವಾಗಲೂ ಅಂದರೆ ಅವರೋಹಣಕ್ಕೆ ಅಷ್ಟೇ ಗೌರವ ನೀಡಬೇಕು.
ಧ್ವಜ ತೆಗೆದ ನಂತರ ಮಡಚಲು ಅದರದ್ದೇ ನಿಯಮಗಳಿವೆ. ಇಬ್ಬರು ಧ್ವಜ ಮಡಚಬೇಕು.
ಆದರೆ ಈ ಗ್ರಾಮೀಣ ವಿಕಾಸ್ ಬ್ಯಾಂಕ್ ಒಂದು ಈ ನಿಯಮ ಪಾಲಿಸದೇ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ. ಆದ್ದರಿಂದ ಈ ಬ್ಯಾಂಕಿನ ವ್ಯವಸ್ಥಾಪಕರಿಗೆ ಹಾಗೂ ಸಿಬ್ಬಂದಿಗಳಿಗೆ ಯಾವ ರೀತಿ ಕಾನೂನಿನಲ್ಲಿ ಯಾವ ಶಿಕ್ಷೆಗೆ ಒಳಪಡುತ್ತಾರೆ ಎನ್ನುವುದು ಕಾದು ನೋಡಬೇಕು.
ಧ್ವಜಾರೋಹಣಕ್ಕೆ ಇದ್ದ ಉತ್ಸಾಹ ಅವರೋಹಣಕ್ಕೆ ಯಾಕಿಲ್ಲ? ಇದು ಸಿಬ್ಬಂದಿಯ ತಾತ್ಸಾರವೋ? ಅಥವಾ ಬೇಜವಾಬ್ದಾರಿಯೋ ? ಅಥವಾ ಪುರುಸೊತ್ತು ಇದ್ದಾಗ ಮಾಡಿದರಾಯಿತು ಎನ್ನುವ ಧೋರಣೆಯೋ?
ವರದಿ ಮಹಿಬೂಬ್ ಎಂ ಬಾರಿಗಡ್ಡಿ
