ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮ ಪಂಚಾಯತಿಯ ನಿಕಟಪೂರ್ವ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ದಿನಾಂಕ ೧೬-೧-೨೦೨೫ ರಂದು ನಡೆದ ೧೩ ಸದಸ್ಯರ ಬಲದ ಅಧ್ಯಕ್ಷರ ಚುನಾವಣೆಯಲ್ಲಿ ಸದಸ್ಯೆ ಸರೋಜಾಬಾಯಿ ಮಲ್ಕಣ ಮಸರಕಲ್ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು, ಆದರೆ ಚುನಾವಣೆ ಅವಧಿ ಮುಗಿಯವವರೆಗೂ ಬೇರೆ ಯಾರೂ ನಾಮ ಪತ್ರ ಸಲ್ಲಿಸದಿರುವ ಕಾರಣ ಸಮಯ ಮುಕ್ತಾಯ ಆದ ನಂತರ ಚುನಾವಣಾ ಆಧಿಕಾರಿಯಾದ ತಾಲೂಕ ಪಂಚಾಯತ ಇ.ಒ ಮಾನ್ಯ ನಿಂಗಪ್ಪ ಮೊಸಳಿ ಅವರು ಸರೋಜಾಬಾಯಿ ಮಲ್ಕಣ ಮಸರಕಲ್ ಅವರು ಅಧಿಕೃತವಾಗಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು ಎಂದು ಪ್ರಕಟಿಸಿದರು.
ಈ ಸಮಯದಲ್ಲಿ ೧೩ ಸದಸ್ಯರು ಉಪಸ್ಥಿತರಿದ್ದರು ಎಂದು ಹೇಳಿದರು ಚುನಾವಣೆ ಸಹಾಯಕರಾಗಿ ತಾ. ಪಂ. ಮಹಾಂತಗೌಡ ದೊರೆಗೋಳ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಪ್ರಭು ಬ ಚನ್ನೂರು, ಪಂ. ಕಾರ್ಯದರ್ಶಿ ಎಚ್.ಜಿ. ಚೌಧರಿ ಹಾಗೂ ಅಪಾರ ಅಭಿಮಾನಿಗಳು ಹಾಜರಿದ್ದರು.
ಇದೇ ಸಂದರ್ಭದಲ್ಲಿ ನೂತನ ಗ್ರಾಮ ಪಂಚಾಯತಿ ಅಧ್ಯಕ್ಷೆ ಸರೋಜಾಬಾಯಿ ಅವರ ಪುತ್ರ
ಜಗನ್ನಾಥ ಮಲ್ಕಣ ಮಸರಕಲ್ ಅವರು ಸರ್ವ ಸದಸ್ಯರಿಗೆ,ಅಭಿಮಾನಿಗಳಿಗೆ ಧನ್ಯವಾದಗಳನ್ನು ಸಮರ್ಪಿಸಿದರು.
ವರದಿ- ಸಂಗಮೇಶ ಸಿ ಚೌದ್ರಿ
