ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಶಿರವಾಳ ಸೀಮಾಂತರದ ಕೆರೆ ಒಡ್ಡಿನಿಂದ ಸ.ನಂ. 87/5ರವರೆಗೆ ರೈತರಿಗೆ ತಮ್ಮ ತಮ್ಮ ಜಮೀನುಗಳಿಗೆ ಹೋಗಲು ರಸ್ತೆ ಇರದ ಕಾರಣ ರಸ್ತೆ ನಿರ್ಮಿಸಿ ಕೊಡುವ ಕುರಿತು ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ ವಾಸುದೇವ ಮೇಟಿ ಬಣ) ಜಿಲ್ಲಾ ಅಧ್ಯಕ್ಷರು ಮಲ್ಲನಗೌಡ ಹಗರಟಗಿ, ತಾಲೂಕಾ ಅಧ್ಯಕ್ಷರಾದ ಶ್ರೀ ದೇವಿಂದ್ರಪ್ಪ ಕೋಲ್ಕಾರ ಸಾ|| ಶಿರವಾಳ ಇವರು ಸನ್ಮಾನ್ಯ ಶ್ರೀ ಶರಣಬಸಪ್ಪಗೌಡ ದರ್ಶನಾಪೂರ ರವರು ಸಣ್ಣ ಕೈಗಾರಿಕೆ ಹಾಗೂ ಯುವ ಉದ್ದಿಮೆ ಸಚಿವರು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಶಹಾಪೂರ ಹೋಬಳಿಯಲ್ಲಿ ಬರುವ ಶಿರವಾಳ ಸೀಮಾಂತರದ ಕೆರೆ ಒಡ್ಡಿನಿಂದ ಸ.ನಂ. 87/5 ರವರೆಗೆ ಅಂದರೆ ಈ ಪ್ರದೇಶದಲ್ಲಿ ಸುಮಾರು 100ಎಕರೆ ಇರುವ ಜಮೀನುಗಳಿಗೆ ಆಯಾ ಜಮೀನಿನ ರೈತರಿಗೆ ಹಾಗೂ ಎತ್ತಿನಗಾಡಿ, ಟ್ರ್ಯಾಕ್ಟರ್ ಹೋಗಲು ದಾರಿ ಇರುವುದಿಲ್ಲ ಕಾರಣ ತಮ್ಮ ಸಚಿವರ ಹಾಗೂ ಶಾಸಕರ ಅನುದಾನದಲ್ಲಿ ಅಥವಾ ಯಾವುದಾದರೂ ಇಲಾಖೆಯ ವತಿಯಿಂದ ಈ ಮಾರ್ಗ ಮಧ್ಯ ಅಚ್ಚುಕಟ್ಟಾದ ರಸ್ತೆಯನ್ನು ನಿರ್ಮಾಣ ಮಾಡಿಕೊಡಬೇಕೆಂದು ಗ್ರಾಮದ ರೈತರ ಪರವಾಗಿ ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ ವಾಸುದೇವ ಮೇಟಿ ಬಣ) ತಾಲೂಕಾ ಅಧ್ಯಕ್ಷರಾದ
ತಾಲೂಕಾ ಅಧ್ಯಕ್ಷರಾದ ಶ್ರೀ ದೇವಿಂದ್ರಪ್ಪ ಕೋಲ್ಕಾರ ಮನವಿ ಪತ್ರದ ಮೂಲಕ ಕೋರಿದರು.
ವರದಿ- ಚೇತನ್ ಹಿರೇಮಠ
