ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಜ್ಞಾನಿಗಳಾಗಲು ಆಸಕ್ತಿ ತೋರಿ: ವಿಜ್ಞಾನಿ ಡಿ.ಆರ್.ಡಿ.ಒ. ಪುಣೆ ಸುಬೋಧಕುಮಾರ ನಾಯಕ್ ಸಲಹೆ

ಬೀದರ್: ಭಾಲ್ಕಿ ತಾಲೂಕಿನ ಪಂಚಶೀಲ ಶಿಕ್ಷಣ ಸಂಸ್ಥೆಯ ಕೇಸರ್ ಜವಳಗಾ ಗ್ರಾಮದ ಸಂಗಮೇಶ್ವರ ಪ್ರೌಢ ಶಾಲೆಯಲ್ಲಿ ದಿ. 29-1-2025 ರಂದು ಬೆಂಗಳೂರಿನ ಡಿಆರ್‌ಡಿಒ ದ ಪ್ರತಿಷ್ಠಿತ ವಿಜ್ಞಾನಿ ಮತ್ತು ಅದೇ ಶಿಕ್ಷಣ ಸಂಸ್ಥೆಯ ಹೆಮ್ಮೆಯ ಹಳೆಯ ವಿದ್ಯಾರ್ಥಿನಿಯಾದ ಗೌರವಾನ್ವಿತ ವಿದ್ಯಾವತಿ ಎ‌ಸ್.ಠಾಕುರ್ ನಾಯಕ್ ಜೊತೆಗೆ ಡಿಆರ್‌ಡಿಓ ಪುಣೆಯ ಪ್ರಖ್ಯಾತ ವಿಜ್ಞಾನಿ ಮತ್ತು ನಿರ್ದೇಶಕರು ಸುಬೊಧ ಕುಮಾರ್ ನಾಯಕ್ ಅವರು ಸಂಗಮೇಶ್ವರ್ ಪ್ರೌಢ ಶಾಲೆಗೆ ಭೇಟಿ ನೀಡಿದ್ದು ಅವರ ಈ ಒಂದು ಭೇಟಿಯು ಶಾಲೆಯ ಸಮುದಾಯಕ್ಕೆ ಗಮನಾರ್ಹ ಸುಸಂದರ್ಭ ಮತ್ತು ಸ್ಪೂರ್ತಿಯನ್ನು ನೀಡಿತು ಶಾಲೆಯ ಮುಖ್ಯ ಗುರುಗಳಾದ ಸತೀಶ ಗುಂಜರ್ಗೆ ಅವರು ಗೌರವಪೂರ್ವಕವಾಗಿ ವಿಜ್ಞಾನಿಗಳನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗೌರವಾನ್ವಿತ ವಿಜ್ಞಾನಿಗಳಾದ ಶ್ರೀಮತಿ ವಿದ್ಯಾವತಿ ಎಸ್. ಠಾಕುರ್ ನಾಯಕ ಅವರು ತಮ್ಮ ಶಾಲಾ ದಿನಗಳ ನೆನಪುಗಳನ್ನು ಮತ್ತು ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಮತ್ತು ಶಿಕ್ಷಕರೊಂದಿಗೆ ಹಂಚಿಕೊಂಡರು. ಜೊತೆಗೆ ಪ್ರತಿ ಮಗು ತನ್ನದೆಯಾದ ಕೌಶಲ ಮತ್ತು ಬುದ್ಧಿ ಶಕ್ತಿ ಹೊಂದಿದ್ದು ಶಿಕ್ಷಕರು ಗುರುತಿಸಿ ಶೈಕ್ಷಣಿಕ ಚಟುವಟಿಕೆಗೆ ಪ್ರೋತ್ಸಾಹಿಸಿದರೆ ಮಗುವಿನ ಶೈಕ್ಷಣಿಕ ಗುಣಮಟ್ಟ ವೃದ್ಧಿಸುತ್ತದೆ ಎಂದು ಹೇಳಿದರು.
ನಂತರದಲ್ಲಿ ಮಾತನಾಡಿದ ಗೌರವಾನ್ವಿತ ವಿಜ್ಞಾನಿಗಳಾದ ಶ್ರೀ ಸುಬೊಧಕುಮಾರ ನಾಯಕ ಅವರು ಶಾಲೆಯಲ್ಲಿನ ಶಿಕ್ಷಕ ಸಮೂಹ ಮಕ್ಕಳ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆ ಗುಣಮಟ್ಟದಿಂದ ಕೂಡಿದೆ ಎಂದರು.
ಭವಿಷ್ಯದ ವಿಜ್ಞಾನಿಗಳನ್ನು ರೂಪುಗೊಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ, ವಿಜ್ಞಾನ ಹಾಗೂ ಸಂಶೋಧನೆಯಲ್ಲಿ ತೊಡಗಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದರು.
ಭಾರತದಲ್ಲಿ ವಿಜ್ಞಾನಿಗಳಾಗಿ ಮುಂದೆ ಬರುವವರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಸುಮಾರು 120 ಕೋಟಿ ಜನಸಂಖ್ಯೆ ಹೊಂದಿರುವ ಈ ದೇಶದಲ್ಲಿ ವಿಜ್ಞಾನಿಗಳಾಗುವವರ ಸಂಖ್ಯೆ ಕೇವಲ ಶೇ. 1.5 ರಷ್ಟು ಮಾತ್ರ ಇದೆ.
ಆದರೆ, ಅಮೆರಿಕಾದಲ್ಲಿ ಇದರ ಪ್ರಮಾಣ ಶೇ.58ರಷ್ಟು, ಜಪಾನಿನಲ್ಲಿ ಶೇ.48 ಹಾಗೂ ಚೀನಾದಲ್ಲಿ ಶೇ.42ರಷ್ಟು ವಿಜ್ಞಾನಿಗಳಿದ್ದಾರೆ. ಇಂತಹ ಬದಲಾವಣೆಯನ್ನು ನಮ್ಮಲ್ಲಿಯೂ ಕಾಣಬೇಕಾಗಿದೆ ಎಂದು ಅವರು ತಿಳಿಸಿದರು.
ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದ ಮಕ್ಕಳ ಎಲ್ಲಾ ಪ್ರಶ್ನೆಗೂ ಮನವರಿಕೆಯಾಗುವಂತೆ ಉತ್ತರಿಸುವ ಮೂಲಕ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ಕಾರಣರಾದರು.
ಈ ‌ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಶ್ರೀ ಭೀಮ ಎಳ್ನುರೆ, ಶ್ರೀ ಸಂಜೀವಕುಮಾರ ಖೊಬ್ಬರಗಡೆ, ಶ್ರೀ ರತ್ನಮ್ಮಾ ಪರಷೆಣೆ, ಶ್ರೀ ಪ್ರಭಾವತಿ ರೊಟ್ಟಿ, ಶ್ರೀ ಸಾಯಿನಾಥ್ ಗೊರೆ, ಶ್ರೀ ಮಹೇಶ್ ನವಾಡೇ, ಶ್ರೀಮತಿ ಅಶ್ವಿನಿ ಕರಕಲ್ಲೆ, ಶ್ರೀಕಾಂತ್ ಖೇಳಗೆ, ಮಹದೇವ್ ವಾಗೆ, ಶ್ರೀ ವಿಮಲ್ ಸೂರ್ಯವಂಶಿ, ಶ್ರೀ ಪ್ರಭುರಾವ್ ಮಂಗಣೆ, ಶ್ರೀ ಮಾಧವರಾವ್ ತಾoಬೋಲೇ, ಶ್ರೀ ಬಾಬುರಾವ್ ಕರಕಲ್ಲೆ, ಶ್ರೀ ಚಂದ್ರಪ್ಪ ಕರಕಲೆ, ಶ್ರೀ ಮಾರುತಿ ಸಗರ್, ಶ್ರೀ ರಮೇಶ ಕಾಣೆಕರ್, ವಿಜಯ ಲಕ್ಷ್ಮಿ ಪೂಜಾರಿ, ಶ್ರೀ ಧರ್ಮವೀರ್ ಪಾಟೀಲ್, ಶ್ರೀ ಪಂಡಿತ್ ಕೋಳಿಕರ್, ಶ್ರೀ ದತ್ತಾತ್ರಿ, ಶ್ರೀ ಇಂದ್ರಜಿತ್ ಗುಪ್ತ, ಶ್ರೀ ಉತ್ತಮ ವಾಗೆ, ಶ್ರೀ ಶ್ರೀಧರ್ ಪಿಎಸ್ಐ, ಶ್ರೀ ದಿಲೀಪ್ ಗಂಟೆ, ಶ್ರೀ ರಮೇಶ್ ಧೋಲಿ ಇತರರು ಉಪಸ್ಥಿತರಿದ್ದರು.

ವರದಿ: ಸಾಗರ್ ಪಡಸಲೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ