ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಒಕ್ಕುಂದ ಗ್ರಾಮದಲ್ಲಿ 76ನೆಯ ಗಣರಾಜ್ಯೋತ್ಸವದ ಅಂಗವಾಗಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಎಂ ಬಿ ಮಹೇಶ್ ಕುಮಾರ್ ಅವರ ಅನುಪಸ್ಥಿತಿಯಲ್ಲಿ ಜನತಾ ಕಾಲೋನಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ಮತ್ತು 7ನೇ ತರಗತಿಯ ಮಕ್ಕಳಿಗಾಗಿ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ವಿದ್ಯಾರ್ಥಿ ವಿದ್ಯಾರ್ಥಿನಿಯರ ಪ್ರಾರ್ಥನಾ ಮತ್ತು ಸ್ವಾಗತ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಆಯೋಜಕರು ಮತ್ತು ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಶ್ರೀಮತಿ ಲಕ್ಷ್ಮಿ ಸುನಿಲ್ ಬೆಳಗಾವ್ಕರ್ ಅವರು ಭಾಗವಹಿಸಿದ್ದರು.
ಬೆಳಗಾವಿ ಜಿಲ್ಲೆಯ ಕಾರ್ಮಿಕ ಘಟಕದ ಅಧ್ಯಕ್ಷರಾದ ಅರ್ಜುನ್ ಜಕ್ಕಪ್ಪನವರ್, ಉಪಾಧ್ಯಕ್ಷರಾದ ಬಸವರಾಜ ಕೊರಿಕೊಪ್ಪ ಅಸ್ಲಮ್, ಸಿಲ್ಲೆದಾರ್ ಸ್ಮಿತಾ, ಸಾವಿತ್ರಿ ಆಲದಕಟ್ಟೆ ಉಪಸ್ಥಿತರಿದ್ದರು. ಮುಖ್ಯ ಗುರುಗಳಾದ ಬನ್ನೂರ್ ಅವರು ಮಾತನಾಡಿ ತಮ್ಮ ಶಾಲೆಗೆ ಸಹಕಾರ ಕೊಡುತ್ತಿರುವ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರುಗಳಿಗೆ ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ದಕ್ಕೂ ವಿದ್ಯಾರ್ಥಿಗಳ ಭಾಷಣ ಮತ್ತು ನೃತ್ಯ ಮನಸ್ಸಿಗೆ ಮುಟ್ಟುವಂತಿತ್ತು ಸ್ಥಳೀಯರು ಕೂಡಾ ವಿದ್ಯಾರ್ಥಿಗಳನ್ನು ಕೊಂಡಾಡಿದರು.
ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಅಧಿಕಾರಿಗಳು, ಚಾಲಕರು, ಸಹಾಯಕರು ಕೂಡಾ ಭಾಗವಹಿಸಿ ವಿವಿಧ ಬಗೆಯ ಬಿಸಿಯೂಟದ ಅಡುಗೆಯನ್ನು ತಯಾರಿಸಿ ಉಣಬಡಿಸಿದರು
ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಮಹಾಂತೇಶ್ ಮುದಕನಗೌಡರ ಅವರು ಮಾತನಾಡಿ ಒಬ್ಬ ಗೃಹಿಣಿಯಾಗಿ ಸಮಾಜ ಸೇವಕರಾಗಿ ಸರಕಾರಿ ಶಾಲೆಯ ಬಡ ಮಕ್ಕಳಿಗೆ ಶಾಲೆ ಕಾರ್ಯ ಮಾಡುತ್ತಿರುವ ಲಕ್ಷ್ಮಿ ಬೆಳಗಾವಕರ ಅವರ ಕೊಡುಗೆ ಅಮೋಘವಾದದ್ದು ಹಾಗೂ ಮುಖ್ಯ ಗುರುಗಳಾದ ಬನ್ನೂರ್ ಗುರುಗಳು ಎಲ್ಲಾ ಶಾಲೆಯ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಬೆಂಬಲಿಸುವ ರೀತಿ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಸನ್ಮಾನ ಸಮಾರಂಭ ಕೂಡಾ ಏರ್ಪಡಿಸಲಾಗಿತ್ತು. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಂಗಪ್ಪ ಬದ್ರಶೆಟ್ಟಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತಂದು ಶಾಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಗ್ರಾಮ ಘಟಕದ ಮುಖಂಡರಾದಂತ ಸಿದ್ದನಗೌಡ ಸಿದ್ದಮ್ಮನವರ, ಈರಣ್ಣ ಹಳಗುಂಡಿ, ಬಸವರಾಜ್ ಬೆನಕಟ್ಟಿ, ಮೀನಾಕ್ಷಿ ಪಾಟೀಲ್, ಪ್ರದೀಪ ಕರಿಮಕ್ಕನವರ್ ಜೊತೆಗಿದ್ದರು.
ಪ್ರಗತಿಪರ ರೈತರಾದ ಬಸನಗೌಡ ಪಾಟೀಲ್, ಖ್ಯಾತ ಕಲಾವಿದರಾದ ಬಾಬು ಕಂಡೋಜಿ ಮಾತನಾಡಿ ಮಕ್ಕಳು ದೇವರುಗಳಿದ್ದಂತೆ ಶಾಲೆಯ ಗುರುಗಳಿಗೆ ಕೊಡುತ್ತಿರುವ ಎಲ್ಲಾ ಮಕ್ಕಳಿಗೆ ಅನಂತ ಧನ್ಯವಾದಗಳನ್ನು ತಿಳಿಸಿದರು.
ಶಿಕ್ಷಕರಾದ ಇಂಗಳಗಿ ಸರ್ ಪ್ರಾರ್ಥಿಸಿದರು, ಮಾಧ್ಯಮ ಪ್ರತಿನಿಧಿಯಾದ ಅಪ್ಪಯ್ಯ ಕಂಬಾರ್ ನಿರೂಪಿಸಿದರು. ಅಡಿಯಪ್ಪ ಗಂಗಪ್ಪನವರ್ ಹಾಗೂ ಬಸವ ಹಿತಲಗಡ್ಡಿ ವಂದನಾರ್ಪಣೆ ಮಾಡಿದರು.
ವರದಿ ಆನಂದ ಎಮ್. ಬಳ್ಳಾರಿ
