ಕರುಣಿಸುವೆ ತಂದೆ
ನಿನ್ನ ಚರಣಕ್ಕೆ ಶಿರಬಾಗುವೆ
ಪಿತೃ ಮಾತೃದೇವೋಭವ
ವಿದ್ಯಾಸರಸ್ವತಿ ನಮೋಸ್ತುತೆ
ಜ್ಞಾನದ ಬೆಳೆ ಬಿತ್ತು ಪ್ರೀತಿಯ
ಕಣ್ಣರೆಸು ಎನ್ನ ಬದುಕಿಗೆ
ಅಧರ್ಮ ಕಳೆದ ಧರ್ಮವ ಕಲ್ಪಿಸು ಬದುಕಿನ ದಾರಿಗೆ
ಸುಜ್ಞಾನ ತುಂಬಲು ಪ್ರೇರೇಪಿಸು
ನ್ಯಾಯ ನೀತಿ ಸತ್ಯ ಶಾಂತಿಯ
ಸರಳ ಮೂರ್ತಿ ನನ್ನ ತಂದೆಗೆ
ನನ್ನ ಸಮರ್ಪನ ಭಾವ ಸ್ವೀಕರಿಸು ಮುಂಬರುವ ಬದುಕಿಗೆ
ಸಲಹೆ ನೀಡುವೆನು ತಂದೆ ಬೇಡುವೆನು ನಿನ್ನಯ ಅಂತರಾತ್ಮಕ್ಕೆ
ಕರುಣಿಸು ನಿನ್ನ ಆಶೀರ್ವಾದ
ನನ್ನದೆನ್ನುವ ತನು ಮನ ಧನವ
ಸಂಪೂರ್ಣ ಅರ್ಪಿಸುವೆ ನಿನ್ನ ಪಾದಕಮಲಗಳಿಗೆ “ಅಪ್ಪ”
–
– ಅನುರಾಧ ಡಿ. ಸನ್ನಿ
