ಕಲ್ಬುರ್ಗಿ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಗ್ರಾಮೀಣ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗದ ಸಮಾಜದವರಿಗೆ ಕಲ್ಪಿಸಬೇಕಾಗಿತ್ತು ಆದರೆ ಹಿಂದುಳಿದ ವರ್ಗದ ಸಮಾಜಕ್ಕೆ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಹಿರಿಯರು ಸೇರಿ ಅನ್ಯಾಯ ಮಾಡಿ ಮತ್ತೆ ಲಿಂಗಾಯತ ಸಮಾಜದ ಅಶೋಕ ಬಗಲಿಯವರಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಅಕ್ಷಮ್ಯ ಮಲತಾಯಿ ಧೋರಣೆಯಾಗಿದೆ ಎಂದು ಬಿಜೆಪಿ ನಾಯಕರು ಮತ್ತು ಆಕಾಂಕ್ಷಿಗಳ ಕೂಗಾಗಿತ್ತು.
ಕಲಬುರ್ಗಿ ಜಿಲ್ಲೆಯಲ್ಲಿ ವಿಶೇಷವಾಗಿ ಕೋಲಿ ಸಮಾಜ, ಗಾಣಿಗ ಸಮಾಜ, ಕುರುಬ ಸಮಾಜ ಹಾಗೂ ಅಲ್ಪ-ಸ್ವಲ್ಪ ಹಿಂದುಳಿದ ವರ್ಗದ ಜನಾಂಗ ಹೆಚ್ಚಿನ ಜನಸಂಖ್ಯೆಯಲ್ಲಿದ್ದು ಯಾವುದೇ ಪ್ರಯೋಜನ ಇಲ್ಲದಂತಾಗಿದೆ, ಅರಳಗುಂಡಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೇವಣಸಿದ್ದಪ್ಪ ಸಂಕಾಲಿ, ಕೋಲಿ ಸಮಾಜದ ಮುಖಂಡರಾದ ಅವಣ್ಣ ಮ್ಯಾಕೇರಿ, ಶರಣಪ್ಪ ತಳವಾರ ,ನಿಂಗರಾಜ್ ಕುರುಬ ಸಮಾಜದ ಹಿರಿಯ ಮುಖಂಡರು ಕೂಡಾ ಆಕಾಂಕ್ಷಿಯಾಗಿದ್ದರು ಆದರೆ ಈ ಪ್ರಬಲವಾಗಿರುವ ಈ ಮೂರು ಸಮಾಜದಲ್ಲಿ ಅವಕಾಶ ಕೊಡದೆ ಸುಮಾರು ದಿನಗಳ ಕಾಲ ಕಲಬುರಗಿ ಜಿಲ್ಲೆಯ ಬಿಜೆಪಿಯು ಒಂದೇ ಕಮ್ಯುನಿಟಿಗೆ ಅವಕಾಶಗಳು ಲಭಿಸುತ್ತಿದ್ದು ಹಾಗೂ ನಗರ ಅಧ್ಯಕ್ಷರು ಸಹ ಒಂದೇ ಕಮ್ಯುನಿಟಿಯವರಾಗಿದ್ದು ಹಾಗೂ ಚುನಾವಣೆಯಲ್ಲಿ ಸಹ ಒಂದೇ ಕಮ್ಯೂನಿಟಿ ಹೆಚ್ಚಿನ ಅಭ್ಯರ್ಥಿಗಳು ಆಗುತ್ತಿದ್ದು ಹೆಚ್ಚಿನ ಜನಸಂಖ್ಯೆ ಇರುವ ಹಿಂದುಳಿದ ವರ್ಗಕ್ಕೆ ಅನ್ಯಾಯ ಆಗಿದ್ದು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹಿಂದುಳಿದ ವರ್ಗ ತಕ್ಕ ಪಾಠ ಕಲಿಸಲಿದ್ದು ಹಾಗೂ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕುರುಬ ಸಮಾಜ, ಕೋಲಿ ಸಮಾಜ ವಿಶೇಷವಾಗಿ ಮತದಾನ ಮಾಡಿದ್ದು ಇದನ್ನು ಮರೆತು ಜಿಲ್ಲೆಯ ನಾಯಕರು ತಮ್ಮದೇ ಆದ ಮಾರ್ಗದಲ್ಲಿ ನಡೆಯುತ್ತಿದ್ದು ಇದನ್ನು ಖಂಡಿಸಲಾಗಿದೆ.
ಸಮಸ್ತ ಕಲಬುರಗಿ ಜಿಲ್ಲೆಯ ಹಿಂದುಳಿದ ವರ್ಗದ ನಾಯಕರು, ಸಮಾಜದ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಹಾಗೂ ಸಮಸ್ತ ಜೇವರ್ಗಿ ಜನಾಂಗೀಯ ವತಿಯಿಂದ ಖಂಡಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಚಂದ್ರಶೇಖರ ಪಾಟೀಲ್
