ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಸಾರ್ವಜನಿಕ ಗ್ರಂಥಾಲಯ ವತಿಯಿಂದ ಗ್ರಂಥಾಲಯ ಸದಸ್ಯರು ,ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು
ಓದಗರು ಗ್ರಂಥಾಲಯ ಸಿಬ್ಬಂದಿಗಳು ಎಲ್ಲರೂ ಸೇರಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರ ಮರಣವನ್ನಪ್ಪಿದ ಹುತಾತ್ಮರ ಸ್ಮರಣಾರ್ಥವಾಗಿ ಮೌನಾಚರಣೆ ಆಚರಿಸಲಾಯಿತು. ಮಲ್ಲಪ್ಪ ಗುಡ್ಲಾನೂರ್ ಶಾಖಾ ಗ್ರಂಥಾಲಯ ಅಧಿಕಾರಿ ಇವರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದವರ ಜೀವನ ಸಾಧನೆಯ ಬಗ್ಗೆ ತಿಳಿಸಿದರು.
ಗ್ರಂಥಾಲಯ ಸದಸ್ಯರಾದ ಅನಿತಾ ಹುತಾತ್ಮರ ಬಗ್ಗೆ ಹಾಗೂ ದುರುಗೇಶ್ ಹುತಾತ್ಮರಾದವರ ಆದರ್ಶ ಗುಣಗಳನ್ನು ನಾವೆಲ್ಲರೂ ಅನುಸರಿಸೋಣ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಓದುಗರು ಗ್ರಂಥಾಲಯ ಸಿಬ್ಬಂದಿಗಳು ಇತರರು ಇದ್ದರು.
