ವಿಜಯನಗರ/ ಕೊಟ್ಟೂರು :
ಶ್ರೀ ಹರಿಬಾಬು ಐ ಪಿ ಎಸ್ ಪೋಲಿಸ್ ಅಧೀಕ್ಷಕರು ವಿಜಯನಗರ ಜಿಲ್ಲೆ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಲೀಂ ಭಾಷಾ ಹಾಗೂ ಶ್ರೀ ವೆಂಕಟಪ್ಪ ನಾಯಕ ಡಿ ವೈ ಎಸ್ ಪಿ ಹರಪ್ಪನಹಳ್ಳಿ, ಮತ್ತು ಶ್ರೀ ಮಲ್ಲೇಶಪ್ಪ ಮಲ್ಲಾಪುರ ಡಿ ವೈ ಎಸ್ ಪಿ ಕೂಡ್ಲಿಗಿರವರ ಮಾರ್ಗದರ್ಶನದಲ್ಲಿ ಶ್ರೀ ದೀಪಕ್ ಅರ್ ಭೂಸರೆಡ್ಡಿ ಸಿ ಪಿ ಐ ಹೂವಿನ ಹಡಗಲಿ ಮತ್ತು ಶ್ರೀ ವೆಂಕಟಸ್ವಾಮಿ ಸಿ ಪಿ ಐ ಕೊಟ್ಟೂರು ವೃತ್ತ ರವರುಗಳ ನೇತ್ರತ್ವದಲ್ಲಿ ವಿಜಯನಗರ ಜಿಲ್ಲೆ ಕೊಟ್ಟೂರು ಪೋಲಿಸ್ ಠಾಣೆಯ ಪಿ,ಎಸ್,ಐ ಗೀತಾಂಜಲಿ ಶಿಂಧೆ ಮತ್ತು ಪಿ ಎಸ್ ಐ, ಭರತ್ ಪ್ರಕಾಶ್ ಡಿ ಪಿ , ಹಿರೇ ಹಡಗಲಿ ಠಾಣೆ ಮತ್ತು ಸಿಬ್ಬಂದಿಯಾದ ವೀರೇಶಿ, ಬಸವರಾಜ ಪೊಲೀಸ್ ತಂಡ ಈ
ಕಾರ್ಯಚರಣೆಯಲ್ಲಿ ಯಶಸ್ವಿಯಾಗಿದ್ದು
ಅರೋಪಿತರಾದ
1) ಸೂರ್ಯ ತಂದೆ ನರಸಿಂಹ 19 ವರ್ಷ ಭೋವಿ ಜನಾಂಗ ಗಾರೆ ಕೆಲಸ ವಾಸ: ರಂಗಪ್ಪ ಸರ್ಕಲ್ ಹೊಸಮನೆ ,ಭದ್ರಾವತಿ (ತಾ)ಶಿವಮೊಗ್ಗ (ಜಿಲ್ಲೆ)
2) ಹರೀಶ್ ಹೆಚ್ ಅರ್ ತಂದೆ ರವಿ 28 ವರ್ಷ ಕೊರಮ ಜನಾಂಗ ಚಾಲಕ ಕೆಲಸ ವಾಸ: ಸುಭಾಷ್ ನಗರ ಭದ್ರವಾತಿ (ತಾ)ಶಿವಮೊಗ್ಗ (ಜಿಲ್ಲೆ) ರವರಿಂದ ಕೊಟ್ಟೂರು ಪೊಲೀಸ್ ಠಾಣೆಯ ಗುನ್ನೆ ನಂಬರ್ 11/2025 ರಲ್ಲಿ ಹಾಗೂ ಹೀರೆಹಡಗಲಿ ಪೊಲೀಸ್ ಠಾಣೆ 14/2025 ಪ್ರಕರಣದಲ್ಲಿ ಒಟ್ಟು 1,50,000 ರೂ , ನಗದು ಹಣವನ್ನು ಹಾಗೂ ಒಂದು ಮೋಟರ್ ಸೈಕಲ್ ಅನ್ನು ಆರೋಪಿತರಿಂದ ಜಪ್ತಿ ಪಡಿಸಿಕೊಂಡರುತ್ತಾರೆ ಎಂದು ಪೊಲೀಸ್ ಸಿಬ್ಬಂದಿ ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದಾರೆ.
ತಂಡದ ಕಾರ್ಯಚರಣೆ ಯಶಸ್ವಿಯನ್ನು ಗಮನಿಸಿದ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಹರಿಬಾಬು ರವರು , ಕೊಟ್ಟೂರು ಪೊಲೀಸ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
