ಬೆಂಗಳೂರು : ಇದೇ ಬರುವ ಫೆಬ್ರುವರಿ ತಿಂಗಳಿನ ಎರಡನೆಯ ಶನಿವಾರ, 8-2-2025 ರ ಬೆಳಗ್ಗೆ 10 ಗಂಟೆಯಿಂದ ಆನಂದ್ ರಾವ್ ವೃತ್ತದ ಬಳಿ ಇರುವ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ
ಈ ಕೆಳಗಿನ ಕಾರ್ಯಕ್ರಮ ಆಯೋಜಿಸಿದೆ.
ಹಿಂದುಸ್ತಾನಿ ಶಾಸ್ತ್ರೀಯ ಸುಗಮ ಸಂಗೀತ: ವಿದುಷಿ ವೀಣಾ ಜೋಶಿ ಗಾಂಧಿನಗರ ಇವರಿಂದ.
ಉಪನ್ಯಾಸ: ಮುಪ್ಪು ದೇಹಕ್ಕೊ? ಅಥವಾ ಮನಸ್ಸಿಗೊ? ಖ್ಯಾತ ಶಿಕ್ಷಣ ತಜ್ಞ, ಚಿಂತಕ ಪ್ರೊಫೆಸರ್ ಎಂ ಆರ್ ನಾಗರಾಜು ಅವರಿಂದ.
ನಂತರ ನಮ್ಮ ಕವಿಪ್ರನಿನಿ ನಿವೃತ್ತ ಲೆಕ್ಕ ನಿಯಂತ್ರಣಾಧಿಕಾರಿ ಬಿ.ಸತ್ಯನಾರಾಯಣ ಅವರ ಶಿಲೆಯಲ್ಲಿ ರಾಮಾಯಣ-ನಾನು ಕಂಡಂತೆ ಪುಸ್ತಕದ ಅವಲೋಕನ.
ಮುಖ್ಯ ಅತಿಥಿಗಳು: ಖ್ಯಾತ ಕವಿ, ಕಥೆಗಾರ ಡಾ.ಚಿಂತಾಮಣಿ ಕೊಡ್ಲೆಕೆರೆ
ಆಸಕ್ತರು ಭಾಗವಹಿಸಬೇಕೆಂದು ಕಾರ್ಯಕ್ರಮ ಸಂಯೋಜಕ ಶ್ರೀ ವಿಶ್ವೇಶ್ವರ ಗಾಯತ್ರಿ ಅವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
