ವಿಜಯಪುರ : ಮುದ್ದೇಬಿಹಾಳ ಮತ ಕ್ಷೇತ್ರದ ಸಮಸ್ತ ಜನರ ಸೇವೆ ಮಾಡಲು ನನಗೆ ಮತ ಆಶೀರ್ವಾದ ಮಾಡಿ ಆಯ್ಕೆ ಮಾಡಿದ್ದೀರಿ ನಿಮ್ಮ ಋಣ ನನ್ನ ಮೇಲಿದೆ ಇದನ್ನು ನಿಮ್ಮ ಸೇವೆ ಮಾಡುವುದರ ಮೂಲಕ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಅಧ್ಯಕ್ಷ ಸಿ. ಎಸ್. ನಾಡಗೌಡ ಹೇಳಿದರು. ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಕೆ .ಆರ್. ಡಿ. ಸಿ. ಎಲ್. ಇಲಾಖೆಯ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ ರೂ. 2.95 ಲಕ್ಷ ಮೊತ್ತದ ತಮದಡ್ಡಿ ಇಂದ ತಾಂಡಾ ರಸ್ತೆ ಅಭಿವೃದ್ಧಿ ಕಾಮಗಾರಿ
ಹಾಗೂ ಹಿರೂರ್ ಗ್ರಾಮದ ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ವ್ಯಾಪ್ತಿಯ ರೂ. ಒಂದು ಕೋಟಿ. ಮೊತ್ತದ ಹಾಲುಮತದ ಸಮಾಜದ ಶ್ರೀ ಸಿದ್ದರಾಯ ದೇವಾಲಯದ ಸಮುದಾಯ ಭವನ ಹಾಗೂ ರೂ. 25 ಲಕ್ಷ ಮೊತ್ತದ ಅಗಸಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ನಂತರ ಹಿರೂರ ಗ್ರಾಮಸ್ಥರು ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವರದಿ : ಉಸ್ಮಾನ ಬಾಗವಾನ ( ಬಳಗಾನೂರ )
