ಸಿಂಧನೂರು : ವನಸಿರಿ ಫೌಂಡೇಷನ್ ತಂಡ ಹಗಲಿರುಳೆನ್ನದೆ ಪರಿಸರ ಸೇವೆಯಲ್ಲಿ ತೊಡಗಿರುವುದು ತಮಗೆಲ್ಲಾ ತಿಳಿದಿರುವ ವಿಷಯವಾಗಿದೆ. ಪ್ರತಿ ವರ್ಷ 1 ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ವನಸಿರಿ ತಂಡ ಹೊಂದಿದೆ. ಈ ವರ್ಷ 2025ರಲ್ಲಿ ಆಕ್ಸಿಜನ್ ಕ್ರಾಂತಿ ಯೋಜನೆಯೊಂದಿಗೆ 1ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಡಲು ವನಸಿರಿ ತಂಡ ಹೊಸ ಯೋಜನೆ ಹಾಕಿಕೊಳ್ಳಲಾಗಿದ್ದು ಆಕ್ಸಿಜನ್ ಕ್ರಾಂತಿ ಯೋಜನೆಗೆ ಸಹಕಾರಿಯಾಗಲೆಂದು ವನಸಿರಿ ತಂಡಕ್ಕೆ ಪರಿಸರ ಪ್ರೇಮಿಯೊಬ್ಬರು (ಹೆಸರು ಹೇಳಲು ಇಚ್ಛೆಸದ ಕಾರಣ) ಗುಪ್ತ ಕಾಣಿಕೆಯಾಗಿ ಸಸಿಗಳನ್ನು ನೆಡಲು ತಗ್ಗು ಗುಂಡಿ ತೋಡುವ ಯಂತ್ರ (ಮೆಷಿನ್) ಅನ್ನು ಗುಪ್ತ ಕಾಣಿಕೆಯಾಗಿ ನೀಡಿದ್ದಾರೆ. ಅವರಿಗೆ ನಮ್ಮ ತಂಡದ ವತಿಯಿಂದ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ.
ಈ ಗುಂಡಿ ತೋಡುವ ಯಂತ್ರ ಕೊಡಿಸಿದ್ದರಿಂದ ನಮ್ಮ ತಂಡಕ್ಕೆ ನೂತನ ಸದಸ್ಯರು ಒಬ್ಬರು ಸೇರ್ಪಡೆಗೊಂಡಂತೆ ಆಗಿದೆ. ನಮ್ಮ ತಂಡಕ್ಕೆ ಇನ್ನಷ್ಟು ಬಲ ಬಂದಂತೆ ಆಗಿದೆ. ವನಸಿರಿ ತಂಡದ ಜೊತೆಗೆ ಪರಿಸರ ಸೇವೆಗೆ ಕೈ ಜೋಡಿಸಿದ ಗುಪ್ತ ಪರಿಸರ ಪ್ರೇಮಿಗಳಿಗೆ ವನಸಿರಿ ಫೌಂಡೇಷನ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಚನ್ನಪ್ಪ ಕೆ. ಹೊಸಹಳ್ಳಿ ಅವರು ವನಸಿರಿ ತಂಡದ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಷನ್ ಸದಸ್ಯರು ಉಪಸ್ಥಿತರಿದ್ದರು.
