ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕು ಗೊಜನೂರು ಗ್ರಾಮದಲ್ಲಿ ದಿ. 1-2-2025 ರಿಂದ ದಿ. 4 – 2- 2025 ರ ವರೆಗೆ ದುರ್ಗಾದೇವಿಯ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನೆರವೇರಲಿದ್ದು ದಿನಾಂಕ 1 ಫೆಬ್ರವರಿ ಶನಿವಾರ ದಿವಸದಂದು ಗೊಜನೂರು ಗ್ರಾಮದ ಗಡಿ ಗೆ ದುರ್ಗಾದೇವಿಯ ಮೂರ್ತಿಯನ್ನು ತರುವುದು, ದಿ. 2 ಫೆಬ್ರವರಿ ರವಿವಾರದಂದು ಜಾಂಜ್ ಮೇಳ, ಡೊಳ್ಳಿನ ಮೇಳ, ಕಹಳೆಯೊಂದಿಗೆ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ದೇವಸ್ಥಾನ ಪ್ರವೇಶ ಹಾಗೂ ಪೂಜಾರಾಧನೆ, ದಿ. 3 ಫೆಬ್ರವರಿ ಸೋಮವಾರದಂದು ದುರ್ಗಾದೇವಿ ಮೂರ್ತಿಯನ್ನು ಗದ್ದಿಗೊಳಿಸುವುದು ಶ್ರೀಮನ್ ನಿರಂಜನ ಜಗದ್ಗುರು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಗವಿಮಠ ಕೊಪ್ಪಳ ಸಾನಿಧ್ಯ ವಹಿಸುವರು ಸಾಯಂಕಾಲ ಧರ್ಮಸಭೆ ಹಾಗೂ ಪ್ರತಿಭಾವಂತ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗುವುದು ಹಾಗೂ ನೀಲಗುಂದ ಮತ್ತು ಕುರ್ತಕೋಟಿ ಗ್ರಾಮದ ಕಲಾತಂಡದಿಂದ ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು, ದಿನಾಂಕ 4 ಫೆಬ್ರುವರಿ ಮಂಗಳವಾರದಂದು ಶ್ರೀ ದುರ್ಗಾದೇವಿಗೆ ಗ್ರಾಮದ ಭಕ್ತರಿಂದ ಉಡಿ ತುಂಬುವ ಕಾರ್ಯಕ್ರಮ ಜರುಗುವುದು ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಗೊಜನೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ತನು ಮನ ಧನ ಸಹಾಯದಿಂದ ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾಗಬೇಕೆಂದು ಸವಿನಯ ಪ್ರಾರ್ಥನೆ.
ವರದಿ ಸತೀಶ ಗೋಡಿ
