ಶಿವಮೊಗ್ಗ : 2024-25 ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ಶಿವಮೊಗ್ಗ ವತಿಯಿಂದ ತುಂಗಾ ಜಲಾಶಯದಲ್ಲಿ ಮೀನುಗಳ ಸಂತತಿ ಅಭಿವೃದ್ದಿಗಾಗಿ 11.30 ಲಕ್ಷ ವಿವಿಧ ತಳಿಯ ಬಲಿತ ಬಿತ್ತನೆ ಮರಿಗಳನ್ನು ಜ. 30 ರಂದು ಆರಗ ಜ್ಞಾನೇಂದ್ರ, ಮಾನ್ಯ ಶಾಸಕರು ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರ ರವರ ಉಪಸ್ಥಿತಿಯಲ್ಲಿ ಸಕ್ರೆಬೈಲು ಆನೆ ಬಿಡಾರದಲ್ಲಿ ಬಿತ್ತನೆ ಮಾಡಲಾಯಿತು ಹಾಗೂ ಜಲಾಶಯದಲ್ಲಿ ಮೀನುಗಾರಿಕೆ ಮಾಡುತ್ತಿರುವ 8 ಜನ ಮೀನುಗಾರರಿಗೆ ಫೈಬರ್ ಗ್ಲಾಸ್ ಹರಿಗೋಲು ವಿತರಿಸಿದರು.
ಬಿತ್ತನೆ ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಗಿರೀಶ್ ಓ, ಮೀನುಗಾರಿಕೆ ಉಪ ನಿರ್ದೇಶಕರಾದ ಜಿ. ಎಂ ಶಿವಕುಮಾರ್, ಸಹಾಯಕ ನಿರ್ದೇಶಕರಾದ ರಾಘವೇಂದ್ರ ಕೆ.ಎಸ್. ಹಾಗೂ ಗಂಗಾ ಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ಅಧ್ಯಕರು ಪದಾದಿಕಾರಿಗಳು ಹಾಗೂ ಸ್ಥಳಿಯ ಮೀನುಗಾರರು ಭಾಗವಹಿಸಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
