ಮಂಡ್ಯ : ಸರ್ಕಾರಿ ಪ್ರೌಢಶಾಲೆ ಚಿಕ್ಕ ಮಂಡ್ಯದಲ್ಲಿ ಎಲ್ಲರೊಳಗೊಂದಾಗ ಮಂಕುತಿಮ್ಮ ಟ್ರಸ್ಟ್ , ಅಮೃತ ಅಲಯನ್ಸ್ ಸಂಸ್ಥೆ ,ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ (ರಿ.) ನಿವೃತ್ತ ಶಿಕ್ಷಕ ಕೆ. ಮಾಯಿಗಯ ಸೇವಾ ಸಮಿತಿ, ಸರ್ಕಾರಿ ಪ್ರೌಢಶಾಲೆ ಚಿಕ್ಕ ಮಂಡ್ಯ ಇವರ ವತಿಯಿಂದ ಗಾಂಧೀಜಿಯವರ ಸ್ಮರಣೆ ಹುತಾತ್ಮರ ದಿನಾಚರಣೆ ಅಂಗವಾಗಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಎಲ್ಲರೊಳಗೊಂದಾಗ ಮಂಕುತಿಮ್ಮ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಂ. ವಿನಯ್ ಕುಮಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಹಾತ್ಮಾ ಗಾಂಧೀಜಿ ಅವರು ಅಹಿಂಸಾ ಮಾರ್ಗದಲ್ಲಿ ಹೋರಾಟ ನಡೆಸಿ ಭಾರತ ದೇಶಕ್ಕೆ ಸ್ವತಂತ್ರ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು.
ಸ್ವಾವಲಂಬಿ ಬದುಕಿಗೆ ಖಾದಿ ಗ್ರಾಮೋದ್ಯೋಗ ಮನೆ ಮನೆಗಳಲ್ಲಿ ಪ್ರಾರಂಭಿಸಿ ಸ್ವದೇಶಿ ಉತ್ಪನ್ನ ತಯಾರಾಗಲು ಕಾರಣೀಕರ್ತರಾದರು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಎಚ್ಎನ್ ದೇವರಾಜು ಅಮೃತ ಅಲಯನ್ಸ್ ಸಂಸ್ಥೆಯ ಅಧ್ಯಕ್ಷ ಎಂ ಲೋಕೇಶ್ ಲಯನ್ ನಾಗರಾಜು ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ದೇವರಾಜು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸ್ಪರ್ಧೆ ವಿಜೇತರಿಗೆ ಪ್ರತಿಭಾ ಪುರಸ್ಕಾರ ಜರುಗಿತು.
- ಕರುನಾಡ ಕಂದ
