ಕಣ್ಮರೆಯಾಗುತ್ತಿವೆ ಸರ್ಕಾರಿ ಶಾಲೆಗಳು
ಜೀವ ಕಳೆ ತುಂಬಿದ ಖಾಸಗಿ ಶಾಲೆಯ ಹೊಸ ಕಟ್ಟಡಗಳು
ಮುರಿದು ಪಾತಾಳಕ್ಕೆ ಬಿದ್ದಿವೆ ಸರ್ಕಾರಿ ಶಾಲೆಯ ಗೋಡೆಗಳು.
ಹಾರಿ ಹೋದ ಸೀಟುಗಳು ಕೆಳಗೆ ಬಿದ್ದ ಅಂಚುಗಳು.
ಉಚಿತ ಊಟ ಉಚಿತ ಬಟ್ಟೆ ಖಚಿತ ಓದು ನಮ್ಮದು
ಸರಕಾರಿ ಶಾಲಾ ಶಿಕ್ಷಕರ ಕೈಯಲ್ಲಿ ಇದುವೇ ಇರುವುದು
ಪ್ರತಿನಿತ್ಯ ಹಾಲು ವಾರಕ್ಕೆ ಮೊಟ್ಟೆ ಇಲ್ಲಿ ನಿಮಗೆ ಸಿಗುವುದು
ಶಿಕ್ಷಣದಿಂದ ವಂಚಿತರಾದವರನ್ನು ಪುನಃ ಶಾಲೆಗೆ ತರುವುದು
ಶಾಲಾ ಕೋಣೆ ಮೇಲೆ ವಿಧವಾದ ಅಕ್ಷರದ ಬರಹಗಳು
ಮಕ್ಕಳ ಮನಸ್ಸನ್ನು ಸ್ಪೂರ್ತಿಗೊಳಿಸುವ ಕ್ಷಣಗಳು
ಶಾಲೆಯಲ್ಲಿ ಆಚರಿಸುವ ರಾಷ್ಟ್ರೀಯ ಹಬ್ಬಗಳು
ಬೇಸಿಗೆ ರಜೆಯಲ್ಲಿ ಕಾಲ ಕಳೆಯುವ ದಿನಗಳು
ಖಾಸಗಿ ಶಾಲೆಯಲ್ಲಿ ಕಟ್ಟಡಗಳೇ ಆಕರ್ಷಣೆಯು
ವಿದ್ಯಾರ್ಥಿಗಳಿಗೆ ಹೇರುವರು ವಿಧ ವಿಧವಾದ ಶುಲ್ಕಗಳು
ಅವರನ್ನು ಮನೆಯಿಂದ ಶಾಲೆಗೆ ಕರೆದು ತರಲು ಬಸುಗಳು.
ಹೆಚ್ಚುವರಿ ರಜೆ ಪಡೆದಾಗ ಹಾಕುವಂತಹ ಫೈನ್ ಗಳು
ಮಧ್ಯಾಹ್ನ ಊಟಕ್ಕೆ ಲಂಚ್ ಬಾಕ್ಸ್ ಗಳು
ಸ್ಟೈಲಿಶ್ ಆದಂತಹ ಬಟ್ಟೆ ಟೈ ಬೆಲ್ಟುಗಳು
ಶಾಲೆ ಕೋಣೆಯಲ್ಲಿ ನಿದ್ದೆ ಮಾಡಿದ ಕ್ಷಣಗಳು
ಎಚ್ಚರ ಮಾಡಿ ಶಿಕ್ಷಕರು ನೀಡುವ ಶಿಕ್ಷೆಗಳು,
ಶಾಲಾ ಕೋಣೆಯಲ್ಲಿ ಶಿಕ್ಷಕರು ಮಾಡುವ ಸ್ಮಾರ್ಟ್ ಕ್ಲಾಸ್ ಗಳು
ಅವರು ನೀಡುವ ವಿಧ ವಿಧವಾದ ಹೋಮರ್ಕ್ ಗಳು
ವರ್ಷಕ್ಕೆ ಎರಡು ಬಾರಿ ಪೋಷಕರ ಸಭೆಗಳು
ಶಿಕ್ಷಣಕ್ಕಿಂತ ಅಂಕಗಳೇ ಖಾಸಗಿಯಲ್ಲಿ ಪ್ರತಿಷ್ಠೆಯು
- ಎಂ. ಚಂದ್ರಶೇಖರಚಾರಿ, ಸಹ ಶಿಕ್ಷಕರು
ವಿಶ್ವಮಾನ ವಸತಿ ಪ್ರೌಢಶಾಲೆ ಸೀಬಾರ ಗುತ್ತಿ ನಾಡು ಚಿತ್ರದುರ್ಗ.
