
ಬೀದರ್/ ಬಸವಕಲ್ಯಾಣ: ನಗರದ ಸುಕ್ಷೇತ್ರ ತ್ರಿಪೂರಾಂತ ಗವಿ ಮಠದಲ್ಲಿ ದಿ. ಜನವರಿ 31ರ ಶುಕ್ರವಾರ ಬಸವಕಲ್ಯಾಣದ ಕಲ್ಯಾಣ ನಾಡು ಗ್ರಾಮೀಣ ಜನಪದ ಕಲಾ ವೃಂದ ಸಂಘ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ 2023-24ನೇ ಸಾಲಿನ ಸಾಮಾನ್ಯ ಯೋಜನೆಯ ಧನ ಸಹಾಯ ಅಡಿಯಲ್ಲಿ ಸಂಗೀತ ಸೌರಭ ಸಂಸ್ಕೃತಿಕ ಕಾರ್ಯಕ್ರಮ ಅರ್ಥ ಪೂರ್ಣವಾಗಿ ಜರುಗಿತು.
ಈ ಸಂಗೀತ ಸೌರಭ ಸಾಂಸ್ಕೃತಿಕ ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಷ.ಬ್ರ. ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ವಹಿಸಿದರು. ಪೂಜ್ಯ ಶ್ರೀ ಷ.ಬ್ರಸಿದ್ದೇಶ್ವರ ಶಿವಾಚಾರ್ಯರು ಕಿಟ್ಟಾ, ಸಮ್ಮುಖ ವಹಿಸಿದರು. ಡಾ.ರಾಜಕುಮಾರ ಹೆಬ್ಬಾಳೆ ಕಾರ್ಯಕ್ರಮ ಉದ್ಘಾಟಿಸಿದರು. ವೀರಶೆಟ್ಟಿ ಮಲಶೆಟ್ಟಿ ಪ್ರಧಾನ ಕಾರ್ಯದರ್ಶಿ ಕಲ್ಯಾಣ ನಾಡು ಗ್ರಾಮೀಣ ಜಾನಪದ ಕಲಾವೃಂದ ಬಸವಕಲ್ಯಾಣ ಇವರು ಸ್ವಾಗತ ಮತ್ತು ಪ್ರಸ್ತಾವಿಕ ನುಡಿ ನುಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದರಾಮ ಸಿ೦ಧಿ, ಬೇಲೂರು ಸಿದ್ದರಾಮ ಕಾಮಣ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ವಿಶೇಷ ಸನ್ಮಾನಿತರು
ಮಲ್ಲಿಕಾರ್ಜುನ್ ಗುಂಗೆ ನಿವೃತ್ತ ನಿರ್ದೇಶಕರು ಕ.ನಿ.ನಿ.ನಿ. ಮಂ ಬೆಂಗಳೂರು,
ಸುಭಾಷ ಚಂದ್ರ ನಾಗರಾಳೆ ನಿವೃತ್ತ ನ್ಯಾಯಾಧೀಶರು ಬಸವಕಲ್ಯಾಣ,
ಸುಧಾಕರ ಮಹೇಂದ್ರ ಕರ ಮುಖ್ಯ ಗುರುಗಳು ಗೌರ, ಶ್ರೀಮತಿ ಸುಗಮ ಸಂಗಪ್ಪ ನವದ್ದರೆ ಜಾನಪದ ಹಿರಿಯ ಕಲಾವಿದರು
ಬೀದರ ರೇವಣಸಿದ್ದಯ್ಯ ಸ್ವಾಮಿ ಮಠಪತಿ
ಗಡಿ ಲಿಂಗದಳ್ಳಿ
ನಿವೃತ್ತ ಗುರುಗಳಾದ ರಮೇಶ ರಾಜೋಳೇ ಕಾರ್ಯಕ್ರಮದ ನಿರೂಪಣೆ ಮಾಡಿದರು,
ಶಾಮ ಸುಂದರ ಗುಂಡುರೆ ಧನಗರ ವಾಡಿ ವಂದಿಸಿದರು.
ಸಂಗೀತ ಸೌರಭ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಹಿಂದೂಸ್ತಾನಿ ಸಂಗೀತ ಸೂಭಾಷಚಂದ್ರನೆ ರಾದಾರ ಕೆಲರಾ, ದೂಳಪ್ಪಾ ಮೂಡಬಿಕರ, ಮಡಿವಾಳಯ್ಯ ಅಲ್ಲೂರ ಬೀದರ ಹಿರಿಯ ತಬಲಾ ವಾದಕರು ಇವರು ಹಿಂದೂಸ್ತಾನಿ ಸಂಗೀತ ನಡೆಸಿಕೊಟ್ಟರು. ದೀಲಿಪ ಕುಮಾರ ದೇಸಾಯಿ ಶರಣಪ್ಪ ಜಮಾದಾರ ಸುಂಠಾಣ ಇವರಿಂದ ಸುಗಮ ಸಂಗೀತ ನೆರವೇರಿತು.
ವೀರಶೆಟ್ಟಿ ಮಲಶೆಟ್ಟಿ ಬೇಲೂರ,ಸೂರ್ಯಕಾಂತ ಬಿರಾದಾರ ಖಾನಾಪೂರ ಬಿ. ಶಾಮ ಸುಂದರ ಗುಂಡುರೆ ಧನಗರವಾಡಿ ವಿಠಲ ದೊಮೆ ಏಕಲೂರ, ಮಲ್ಲಿಕಾ ರ್ಜುನ ಬಿರಾದಾರ ತೊಗಲೂರ, ಬಸವ ರಾಜ ದುಬಲಗುಂಡೇ ಗೋರ್ಟಾ ಇವರಿಂದ ವಚನ ಸಂಗೀತ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಕಲಾವಿದರು ನೂರಾರು ಕಾಲತಂಡಗಳು ಆಗಮಿಸಿದ್ದರು.
ಕಾಮಣ್ಣ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ್ ಬೀದರ್, ಸಂಗಪ್ಪ ನಾವದಗೆರೆ ತಾಲೂಕ ಅಧ್ಯಕ್ಷರು ಶರಣ ಸಾಹಿತ್ಯ ಪರಿಷತ ಬೀದರ್, ಶರಣಪ್ಪ ಮಲಶೆಟ್ಟಿ ಸಮಾಜ ಸೇವಕರು ಬಸವಕಲ್ಯಾಣ, ಸಿದ್ರಾಮ ಕವಳೆ ಬಸವಕಲ್ಯಾಣ, ಸುಭಾಷ ರಾಚಪ್ಪ ಬಾವಗೆ ನಂದಿ ಧ್ವಜ ಅಧ್ಯಕ್ಷರು ಬಸವಕಲ್ಯಾಣ, ಇವರಿಗೆ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸತ್ಕರಿಸಿ ಗೌರವಿಸಲಾಯಿತು.
ವರದಿಗಾರರು : ಶ್ರೀನಿವಾಸ ಬಿರಾದಾರ
