ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಂಎಸ್‌ಎಂಇ ಸ್ನೇಹಿ ಕೇಂದ್ರ ಬಜೆಟ್ ಗೆ ಶರಣಕುಮಾರ ಮೆಚ್ಚುಗೆ

ಕಲಬುರಗಿ: ಮಾನ್ಯ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ರವರು ಮಂಡಿಸಿದ 2025-26 ಕೇಂದ್ರ ಬಜೆಟ್ ಎಂಎಸ್ಎಂಇ ಸ್ನೇಹಿಯಾಗಿದೆ ಎಂದು ಬಿಜೆಪಿ ಮುಖಂಡ ಶರಣಕುಮಾರ ಹಾಗರಗುಂಡಗಿ ಹೇಳಿದರು.
ಈ ಕುರಿತು ಪತ್ರಿಕಾ‌ ಹೇಳಿಕೆ ನೀಡಿದ ಅವರು, ಎಂಎಸ್ಎಂಇ ಗಳು ಮತ್ತು ನವೋದ್ಯಮಗಳಿಗೆ ಔಪಚಾರಿಕ ಸಾಲದ ಪ್ರವೇಶವನ್ನು ಸುಲಭಗೊಳಿಸಲು ಸಿ.ಜಿ.ಟಿ.ಎಂ.ಎಸ್.ಇ. ಯೋಜನೆಯಡಿಯಲ್ಲಿ ಕ್ರೆಡಿಟ್ ಗ್ಯಾರಂಟಿ ಕವರ್‌ ಅನ್ನು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ, ಪ್ರಸ್ತುತ 5 ಕೋಟಿ ರೂ. ಗಳಿಂದ 10 ಕೋಟಿ ರೂ.ಗಳಿಗೆ ಹೆಚ್ಚಿಸಿರುವುದು ಸ್ವಾಗತಾರ್ಹ ಎಂದರು.
ಇದರಿಂದಾಗಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಮುಂದಿನ 5 ವರ್ಷಗಳಲ್ಲಿ ರೂ. 1.5 ಕೋಟಿ ಲಕ್ಷ ಹೆಚ್ಚುವರಿ ಸಾಲ ಸಿಗಲಿದೆ. ಹಾಗೂ ನವೋದ್ಯಮಗಳಿಗೆ, ಪ್ರಸ್ತುತ 10 ಕೋಟಿ ರೂ.ಗಳಿಂದ 20 ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿದೆ ಮತ್ತು 27 ಕೇಂದ್ರೀಕೃತ ವಲಯಗಳಲ್ಲಿನ ಸಾಲಗಳಿಗೆ ಗ್ಯಾರಂಟಿ ಶುಲ್ಕವನ್ನು ಶೇಕಡಾ 1 ಕ್ಕೆ ಇಳಿಸಲಾಗಿದೆ ಉತ್ತಮ ನಡೆ ಎಂದರು. ಉದ್ಯಮ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಸೂಕ್ಷ್ಮ ಉದ್ಯಮಗಳಿಗೆ ಕಸ್ಟಮೈಸ್ ಮಾಡಿದ ಕ್ರೆಡಿಟ್ ತುಂಬಾ ಚೆನ್ನಾಗಿದೆ ಕಾರ್ಡುಗಳನ್ನು 5 ಲಕ್ಷ ರೂ.ಗಳ ಮಿತಿಯೊಂದಿಗೆ ಪರಿಚಯಿಸಲಾಗುವುದು. ಮೊದಲ ವರ್ಷದಲ್ಲಿ 10 ಲಕ್ಷ ಕಾರ್ಡ್‌ಳನ್ನು ನೀಡಲಾಗುವುದು. ಉತ್ತಮ ಬೆಳವಣಿಗೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ